ಈ ಪುಟವನ್ನು ಪ್ರಕಟಿಸಲಾಗಿದೆ










ಭೀಷ್ಮ ವಿಜಯ :
ಅರ್ಥ ಮತ್ತು ಅರ್ಥೈಸುವಿಕೆ

1

ಯಕ್ಷಗಾನದ ಆಟ ಮತ್ತು ಕೂಟ ಗಳ ಪ್ರಸಿದ್ಧವಾದ ಪ್ರಸಂಗಗಳಲ್ಲಿ ಒಂದಾದ ಭೀಷ್ಮ ವಿಜಯದ ಪ್ರದರ್ಶನದ ಅರ್ಥಗಾರಿಕೆಯ ಕುರಿತು ಕೆಲವು ಅಂಶಗಳನ್ನು ಮಂಡಿಸುವುದು ಈ ಲೇಖನದ ವಿಷಯ. ಅರ್ಥಗಾರಿಕೆ ಎಂಬುದು, ಅರ್ಥೈಸುವಿಕೆಯನ್ನು, ಎಂದರೆ ಪ್ರಸಂಗ, ಕಥೆ, ಪಾತ್ರ, ಮೂಲ ಆಕರಗಳನ್ನು ನಾವು ಹೇಗೆ ಅರ್ಥೈಸಿದ್ದೇವೆಂಬುದನ್ನು ಹೊಂದಿಕೊಂಡು ಇರುವುದರಿಂದ ಅರ್ಥೈಸುವಿಕೆಯ ಕುರಿತ ವಿವೇಚನೆಯೂ ಇಲ್ಲಿ ಮುಖ್ಯವಾಗುತ್ತದೆ. ಕಾವ್ಯಗಳ, ಜೀವನಗಳ 'ತಿಳಿವಿನ' ಸಂಸ್ಕಾರದಂತೆ ಅರ್ಥ, ಅದರಂತೆಯೆ ಅರ್ಥಗಾರಿಕೆಯಷ್ಟೆ ?

2

"ಮೊನ್ನೆ ಒಂದು ಭೀಷ್ಮ ವಿಜಯ ತಾಳಮದ್ದಳೆ ಕೇಳಿದೆ. ಅಂಬೆಯನ್ನು ಭೀಷ್ಮ ವಾದದಲ್ಲಿ ಸೋಲಿಸಿದ."ಮೊನ್ನೆಯ ಪ್ರದರ್ಶನದಲ್ಲಿ ಅಂಬೆ ಭೀಷ್ಮನಲ್ಲಿ ಚರ್ಚಿಸಿದ್ದು


• ಆಟವೆಂದರೆ ನೃತ್ಯ ಸಹಿತ, ಕೂಟವೆಂದರೆ ಬೈಠಕ್, ವೇಷ ರಹಿತ.

• ಡಾ. ಎಂ. ಪ್ರಭಾಕರ ಜೋಶಿ