ಈ ಪುಟವನ್ನು ಪ್ರಕಟಿಸಲಾಗಿದೆ

126

ಮುಡಿ

ಸಾಲದು" "ಅಂಬೆಯ ವಾದದ ಮುಂದೆ ಭೀಷ್ಮನಿಗೆ ಕಷ್ಟವಾಯಿತು" ಈ ಬಗೆಯ ಪ್ರತಿಕ್ರಿಯೆಗಳನ್ನು ಅಭಿಪ್ರಾಯಗಳನ್ನು ಕೇಳುತ್ತಾ ಇರುತ್ತೇವೆ. ಈ ಮಾತುಗಳ ಹಿಂದೆ ಎರಡು ಪ್ರಬಲವಾದ ಗೃಹೀತಗಳು, ಮತ್ತು ತಿಳಿವುಗಳು ಕೆಲಸ ಮಾಡುತ್ತವೆ.
1. ತಾಳಮದ್ದಳೆಯ ಅರ್ಥಗಾರಿಕೆ ಎಂದರೆ ಅದರಲ್ಲಿ ವಾದ ಮತ್ತು ಚರ್ಚೆ, ಇವು ಮುಖ್ಯ.
2. ಭೀಷ್ಮ ಮತ್ತು ಅಂಬೆ ಪಾತ್ರಗಳ ಸಂವಾದಗಳು ಒಂದು ಮುಖ್ಯ ಚರ್ಚಾತ್ಮಕ ವಿಷಯವಾಗಿವೆ.
ಈ ಗ್ರಹಿಕೆಗಳು ಎಷ್ಟರ ಮಟ್ಟಿಗೆ ಸರಿ, ಮತ್ತು ಪ್ರಕೃತ ವಿವೇಚಿಸುತ್ತಿರುವ ಪ್ರಸಂಗಕ್ಕೆ ಎಷ್ಟು ಹೊಂದಿಕೆ ಎಂಬುದನ್ನು ನೋಡಬಹುದು.

3

ತಾಳಮದ್ದಲೆಯ ಅರ್ಥಗಾರಿಕೆಯಲ್ಲಿ ವಾದ, ಚರ್ಚೆ ಎಂಬುದು ಒಂದು ಗಮನಾರ್ಹ ಅಂಶವೆಂಬುದು ನಿಜ. ಆದರೆ ಅದು ಮುಖ್ಯವಾಗಿ ಸಂವಾದ ರೂಪದಿಂದಾಗಬೇಕಾದ ಪ್ರಕ್ರಿಯೆ, ಹೊರತುವಾದವನ್ನೇ ದೃಷ್ಟಿಯಲ್ಲಿರಿಸಿ ನಡೆಯಬೇಕಾದುದಲ್ಲ. ವಾದವು ರಂಜನೆ ನೀಡುತ್ತದೆ ಎಂಬುದರಿಂದ ಎಲ್ಲೆಂದರಲ್ಲಿ, ಪಾತ್ರ, ಸನ್ನಿವೇಶಗಳನ್ನು ಗಮನಿಸದೆ, ಪಾತ್ರಗಳೊಳಗಿನ ಸಂಬಂಧಗಳನ್ನು ನೋಡದೆ ವಾದಿಸುವುದಾಗಲಿ, ಅದನ್ನು ನಿರೀಕ್ಷಿಸುವುದು, ಮೆಚ್ಚುವುದೆ ಆಗಲಿ, ಮಾಧ್ಯಮಕ್ಕೆ ಉಚಿತವಾದ ಕಲಾದೃಷ್ಟಿಯಲ್ಲ. ವಾದ ಮತ್ತು ಪಾತ್ರಗಳ ಸೋಲು ಗೆಲುವುಗಳು ಅರ್ಥಗಾರಿಕೆಯ ಮುಖ್ಯ ನಿರ್ಣಾಯಕ ಸಂಗತಿಗಳಲ್ಲ. ವಾದದಲ್ಲಿ ಸೋತ ಪಾತ್ರವೂ ಚಿತ್ರಣದಲ್ಲಿ, ಅರ್ಥಗಾರಿಕೆಯ ಅಂಗೋಪಾಂಗಗಳಲ್ಲಿ ಯಶಸ್ವಿಯಾಗಬಹುದು. ಸಂಧಾನದ ಕೃಷ್ಣ-ಕೌರವ, ಕರ್ಣಾರ್ಜುನದ ಕರ್ಣ-ಅರ್ಜುನ, ಭೀಷ್ಮಾರ್ಜುನದ ಭೀಷ್ಮ-ಕೌರವ, ಭೀಷ್ಮ-ಕೃಷ್ಣ, ಭೀಷ್ಮ ವಿಜಯದ ಭೀಷ್ಮ-ಪರಶುರಾಮ ಮುಂತಾದ, ಇನ್ನೂ ಎಷ್ಟೋ ಸನ್ನಿವೇಶಗಳಲ್ಲಿ ಚರ್ಚೆ ಎಂಬುದು ಒಂದು ಮುಖ್ಯ ಆಯಾಮವೆಂಬುದು ನಿಜ. ವಾದ ಸಾಮರ್ಥ್ಯ, ಮಾತಿಗೆ ಮಾತು ಕೂಡಿಸುವ ಕ್ರಿಯೆ- ಪ್ರಕ್ರಿಯೆಗಳ ಸರಣಿ ಇವು ಅರ್ಥಗಾರಿಕೆಯಲ್ಲಿ ಮಹತ್ವದ ಅಂಶಗಳೂ ಹೌದು. ಆದರೂ, ಅವುಗಳ ಸಾಂದರ್ಭಿಕ ಅನ್ವಯ ಮತ್ತು ಮಿತಿಗಳ ಅರಿವೂ ಅಷ್ಟೆ ಮುಖ್ಯವಾದುದು. ಇಲ್ಲವಾದಲ್ಲಿ, ವಾದ ಪ್ರಾಧಾನ್ಯ ಮತ್ತು ತಪ್ಪಾಗಿ ನಿರ್ಮಾಣಗೊಂಡ 'ಚರ್ಚೆಯ ನಿರೀಕ್ಷೆಗಳು ಪ್ರದರ್ಶನಕ್ಕೂ, ಕಲಾವಿದನಿಗೂ ದೊಡ್ಡ ತೊಡಕಾಗಿ ನಿಲ್ಲುತ್ತವೆ.

° ಡಾ. ಎಂ. ಪ್ರಭಾಕರ ಜೋಶಿ