ಈ ಪುಟವನ್ನು ಪ್ರಕಟಿಸಲಾಗಿದೆ
140
ಮುಡಿ


ಬಾಬಣ್ಣನವರ ಲೇಖನದ ಆಶಯ ಯಕ್ಷಗಾನೋಚಿತತೆ ಕುರಿತು, ಪೌರಾಣಿಕತಾ ರೂಪದ ಕುರಿತು ಹೊರತು ಸಂಕುಚಿತವಾದ ಪುರಾಣಪರತೆಯ ದೃಷ್ಟಿ ಅಲ್ಲ. ರತ್ನಾವತಿ, ಚಾಣಕ್ಯ, ಗುಣಸುಂದರಿ, ವಸಂತಸೇನಾ, ಗಂಧರ್ವಕನ್ಯ -ಯಕ್ಷಗಾನೋಚಿತವೇ. ಪೌರಾಣಿಕ (ವಿಶಾಲಾರ್ಥದಲ್ಲಿ) ರೂಪ, ಕಲಾರೂಪ ಸಹ್ಯತೆ ಅವುಗಳಿಗಿದೆ. ಯಾವುದೇ ವಸ್ತು ಯಾವುದೇ ಕಲಾರೂಪಕ್ಕೆ ಒದಗಬಲ್ಲುದೆಂಬುದು ಪೂರ್ಣ ಸತ್ಯವಲ್ಲ. ಯಕ್ಷಗಾನದ ವಸ್ತುವಿನ ಕುರಿತ ಜಾಗ್ರತೆ, ಕಲೆಯ ಕ್ಯಾನ್ವಾಸನ್ನು ಕಿರಿದು ಮಾಡುವ ಚಿಂತನವಲ್ಲ, ಅದು ಕ್ಯಾನ್ವಾಸ್ ಹರಿಯದ ಹಾಗೆ, ಕ್ಯಾನ್ವಸ್ ಹೋಗಿ ಗೋಣಿ ಚಿಂದಿ ಆಗದ ಹಾಗಿರುವ ಎಚ್ಚರದ, ನಿಲುಮೆ ಅಷ್ಟೆ.
ಶಿಸ್ತಿಗೊಳಪಡಿಸುವುದು = ಅಂತಃಸತ್ವ ಕಡಿಮೆ ಮಾಡುವುದು ಎಂಬ ಸಮೀಕರಣ ಒಂದು ರಮ್ಯವಾದ ವಾದ ಮಾತ್ರ. ಶಿಸ್ತುಬದ್ಧ ನಿರ್ದೇಶಿತ ನಾಟ್ಯ, ಸಿನಿಮಾ, ರಂಗಕೃತಿಗಳಲ್ಲಿ ಅಸಾಧಾರಣ ಸೃಜನಶೀಲಗಳಿಲ್ಲವೆ? ಶಿಸ್ತುಬದ್ಧ ಪ್ರದರ್ಶನಕ್ಕೆ ಹೊರ ಪ್ರದೇಶಕ್ಕೆ ಹೋದ ಮಿತಿಗಳೊಳಗೆ ಪ್ರದರ್ಶಿಸುವ ತಂಡವನ್ನೆ ಉದಾಹರಣೆಯಾಗಿ ಸ್ವೀಕರಿಸುವುದು ನ್ಯಾಯವಲ್ಲ.
'ಜನ ಸ್ವೀಕರಿಸಿದ್ದಾರೆ' ಎಂಬ ವಾದ ಕೆಲವೊಮ್ಮೆ ತುಸು ಬಿಕ್ಕಟ್ಟಿನದ್ದು. ವಿರೋಧಿಸಲು ಬಾರದ, ಆದರೆ ಕಲಾವಿಮರ್ಶೆಯಲ್ಲಿ ಸದಾ ಉಪಾದೇಯವಲ್ಲದ ವಾದ ಅದು. ಅದನ್ನು ಸ್ವಲ್ಪ ಎಳೆದರೆ 'ಜನರು ' ಶಬ್ದದಿಂದ ಸಮರ್ಥನೆ ಗೊಂದಲಗಳು ಉಂಟಾಗಿ ವಾದಕ್ಕೆ ತುದಿ ಮೊದಲಿಲ್ಲವಾಗುತ್ತದೆ. ಕೋಟಿ ಚನ್ನೆಯ ಕತೆಯು ಪೌರಾಣಿಕವೇ, ಸತ್ವಯುತವೇ. ಆದರೆ ಅದರ ಪ್ರಸ್ತುತೀಕರಣ ಹೇಗೆ ಎಂಬುದು ಸುಲಭದ ಪ್ರಶ್ನೆ ಅಲ್ಲ. ಮಾಯಾ ರಾವ್, ಪದ್ಮಾ ಸುಬ್ರಹ್ಮಣ್ಯಂ ಅವರ ಸಮನ್ವಿತ ಶಾಸ್ತ್ರೀಯ ನೃತ್ಯ ಸಂಯೋಜನೆಯನ್ನು ಪ್ರಚಲಿತ ಯಕ್ಷಗಾನದ ಸ್ಥಿತಿಗತಿಗಳನ್ನು ಸಮರ್ಥಿಸಲು parallel ಆಗಿ ಬಳಸುವುದು, ನೋಡುವುದೂ ಸಮಂಜಸವಲ್ಲ. ಅದೂ ವಿಮರ್ಶಾ ರಾಜಕೀಯ ಆದೀತೇನೊ.
ಯಕ್ಷಗಾನಕ್ಕೆ ಶಾಸ್ತ್ರಗ್ರಂಥ, ಲಕ್ಷಣ ಗ್ರಂಥ ಇಲ್ಲದಿರುವಿಕೆ ಎಂಬ ವಿಚಾರವೇ ಬೇರೆ. ಅದು ವಿಷಯಾಂತರ. ಗ್ರಂಥವಿದ್ದರೂ ಕಲೆಯ ಚಲನೆ ನಿಲ್ಲುವುದಿಲ್ಲ. ಲಕ್ಷಣಗ್ರಂಥವಿದ್ದ ಕಲೆ ಹಾಗಾದರೆ 'ಪ್ಲೆಕ್ಸಿಬಲ್' ಆಗಬಾರದೇ, ಆಗಲಾರದೇ, ಆಗಿಲ್ಲವೇ ಎಂದೂ ಕೇಳಬಹುದಾಗಿದೆ. ಯಕ್ಷಗಾನದ ಲಕ್ಷಣ ಗ್ರಂಥ ಯಕ್ಷಗಾನದೊಳಗೇ ಇದೆ, ವಿಸ್ತಾರವಾಗಿ ಇದೆ. ಸ್ವಲಕ್ಷಣವಾಗಿ ಇದೆ. ಅಲ್ಲದೆ ನಾಟ್ಯ ಶಾಸ್ತ್ರ, ಅಭಿನಯ ದರ್ಪಣ, ಅಖಿಲ ಭಾರತೀಯ

ಪಾರಂಪರಿಕ ರಂಗವ್ಯಾಕರಣಗಳೆಂಬ ಆಧಾರಗಳೂ ಅದಕ್ಕಿವೆ. ಇನ್ನು ಮಹಾನ್ ಗಾಯಕರು

• ಡಾ. ಎಂ. ಪ್ರಭಾಕರ ಜೋಶಿ