ಈ ಪುಟವನ್ನು ಪ್ರಕಟಿಸಲಾಗಿದೆ










ಪ್ರತಿಕ್ರಿಯೆ ೨


ಯಕ್ಷಗಾನೋಚಿತ :
ಶೈಲಿ ಮತ್ತು ಮುಕ್ತತೆ


ಯಕ್ಷಗಾನ ಕಲೆ ಮತ್ತು ಅದಕ್ಕೆ ಒಪ್ಪುವ ಕಥೆ, ವಸ್ತುಗಳ ಕುರಿತು ಶ್ರೀ ಬಾಬಣ್ಣ ಉಡುಪಿ ಅವರಿಂದ ಆರಂಭವಾದ ಚರ್ಚೆ ಒಂದು ಆರೋಗ್ಯಯುತ, ಗಂಭೀರ ವಿಚಾರ ವಿನಿಮಯವಾಗುತ್ತಿರುವುದು ಸಂತಸದ ಸಂಗತಿ.
ಯಕ್ಷಗಾನವು ಸಾರತಃ ಶಾಸ್ತ್ರೀಯ ಕಲೆಯೇ. ಯಾವ ಕಲೆಯೂ ಮೂಲದಲ್ಲಿದ್ದಂತೆ ಇರುವುದಿಲ್ಲ. ಬದಲಾಗುತ್ತ ಇರುತ್ತದೆ. ಬದಲಾಗುತ್ತದೆ ಎಂಬುದು ಸತ್ಯ. ಬದಲಾಗಬೇಕು ಎಂಬುದು ನಿಯಮವಲ್ಲ, ಆಗುತ್ತದೆ ಅಷ್ಟೆ. ಇವೆರಡರ ವ್ಯತ್ಯಾಸ ಗಮನಿಸಬೇಕು.
ಬಾಬಣ್ಣನವರ ಬರಹದಲ್ಲಿದ್ದುದು ಒಂದು ಸ್ವಚ್ಛವಾದ ಗ್ರಹಿಕೆ, ವಿಚಲನೆಗಳ ಕುರಿತು ಆತಂಕ. Perception and apprehension. ಇದನ್ನು ಕೇವಲ ಶಿಸ್ತುಬದ್ಧ ಕಲೆಗಳ ಆಧುನಿಕ ಸಹೃದಯತೆ ಎಂದು ಹೇಳುವುದಾಗಲಿ, ಜ್ಞಾನ ರಾಜಕೀಯವೆನ್ನುವುದಾಗಿ ಸರಳೀಕರಣ. ಈ ಆಕ್ಷೇಪ ಕೂಡ ಆಧುನಿಕ ದೇಸೀ ಸಿದ್ಧಾಂತ ಫಲಿತವೇ. ಇದರ ಪ್ರೇರಣೆಗಳ

ಬಗೆಗೂ ರಾಜಕೀಯ ಆರೋಪಕ್ಕೆ ಅವಕಾಶವುಂಟು.

• ಡಾ. ಎಂ. ಪ್ರಭಾಕರ ಜೋಶಿ