ಈ ಪುಟವನ್ನು ಪ್ರಕಟಿಸಲಾಗಿದೆ
36
ಮುಡಿ

ರಂಗದಲ್ಲಿ, ಪ್ರೇಕ್ಷಾಂಗಣದಲ್ಲಿ ಒಟ್ಟು ಮಾಡಿದೆ. ಒಳಗೊಳ್ಳುವಿಕೆಗೆ ಸಹಕಾರಿಯಾಗಿದೆ. ಇತ್ತೀಚೆಗೆ ನಡೆದ ಕಲಾವಿದರ ಸೇರ್ಪಡೆ ವಿವಾದವು ಬಗೆಹರಿದುದು, ಈ ಕಲೆಯ ಕ್ಷೇತ್ರದ ಆಂತರಿಕ ಸಾಮರ್ಥ್ಯಕ್ಕೆ ಸಾಕ್ಷಿ.

ಪ್ರಶ್ನೆ : ಯಕ್ಷಗಾನವು ಚೌಕಟ್ಟಿನೊಳಗಿರಬೇಕು, ಬದಲಾವಣೆ ಹೊಂದಬೇಕು ಎಂದು ಹೇಳಿದಿರಿ. ಇದು ಹೇಗೆ ?

- ಹರಿಪ್ರಸಾದ್

ಉತ್ತರ : ನಿಜ, ಕಲಾಸ್ವರೂಪ, ಶೈಲಿ, ಅದರ ಗುರುತು, ಅದರ ಯಕ್ಷಗಾನತ್ವ, ಯಕ್ಷಗಾನತನ. ಅದು ಅನುಭವಗಮ್ಮ. ಆದರೆ ಚೌಕಟ್ಟನ್ನು ವಿಕಾರಗೊಳಿಸದೆ ವಿಸ್ತರಿಸಲು ಸಾಧ್ಯ. ಇದು ಸೃಷ್ಟಿಶೀಲತೆಗಿರುವ ಸವಾಲು.

ಪ್ರಶ್ನೆ : ಯಕ್ಷಗಾನ ರಂಗದಲ್ಲಿ ಮೋಸ, ಶೋಷಣೆ ನಡೆಯುವುದಿಲ್ಲವೆ ? ಆರ್ಥಿಕ ಮುಗ್ಗಟ್ಟಿನಿಂದ ಈ ಕಲೆ ಹೇಗೆ ಪಾರಾಗಬಲ್ಲುದು ?

ಉತ್ತರ : ಮೋಸ, ಶೋಷಣೆ ಸರ್ವತ್ರ ಇರುವ ವ್ಯಾಪಕ ಸಮಸ್ಯೆ. ಇದಕ್ಕೆ ಹೆಚ್ಚು ಸಂವೇದನಾಶೀಲ, ಸಮಾನತಾಪರ ಸಮಾಜ ನಿರ್ಮಾಣ ಆಗಬೇಕು.

ಕಲಾವಿದರಿಗೆ ಹೆಚ್ಚಿನ ಭದ್ರತೆ, ಹಿತರಕ್ಷಣೆಯ ಬಗ್ಗೆ ಅಲ್ಲಲ್ಲಿ ಯತ್ನಗಳಾಗುತ್ತಿವೆ, ಇದು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬೇಕು. 'ಶ್ರೀಮಂತ ಕಲೆ' 'ಬಡವರ ಕಲೆ' ; ಇದು. ಸರ್ಕಾರವೂ, ಖಾಸಗಿ ದಾನಿಗಳೂ ಈ ಕುರಿತು ಮುಂದೆ ಬಂದು ಈ ಕಲೆಯ ನಿರ್ವಹಣಾ ಉನ್ನತಿಗಾಗಿ ಯೋಜನೆಗಳನ್ನು ತಂದರೆ ಮಾತ್ರ ಮುಂದೆ ಈ ಕಲೆ ಉಳಿದು ಬೆಳೆದೀತು.

ಪ್ರಶ್ನೆ : ಸಿನಿಮಾ ಮಾಧ್ಯಮದಿಂದ ಜನರು ಯಕ್ಷಗಾನದ ಆಸಕ್ತಿಯನ್ನು ಕಳೆದುಕೊಂಡಿದ್ದಾರೆಯೇ? ಹಾಗಿದ್ದರೆ ಇದಕ್ಕೆ ಪರಿಹಾರೋಪಾಯಗಳೇನು ?

- ವಿದ್ಯಾರ್ಥಿಗಳು, ವಿವೇಕಾನಂದ ಕಾಲೇಜು, ಪುತ್ತೂರು

ಉತ್ತರ : ಒಟ್ಟು ಎಲೆಕ್ಟ್ರಾನಿಕ್ ಮಾಧ್ಯಮದಿಂದಾಗಿ ನಮ್ಮ ಪಾರಂಪರಿಕ ಕಲೆಗಳ ಆಸಕ್ತಿಗೆ ವ್ಯತ್ಯಯ ಬಂದದ್ದು ಸ್ವಲ್ಪ ಮಟ್ಟಿಗೆ ನಿಜ. ಆದರೆ ಜೀವಂತ ಕಲೆಗೆ, ಪ್ರಾಚೀನ ರೂಪದ ಕಲೆಗೆ, ಪ್ರೇಕ್ಷಕ ವರ್ಗ ಇದ್ದೇ ಇರುತ್ತದೆ. ಇಂತಹ ಕಲೆಗಳನ್ನು ಅಚ್ಚುಕಟ್ಟು ಮಾಡಿ, ರುಚಿಕಟ್ಟಾಗಿಸಿ ಜನರಿಗೆ ನೀಡುವ ಹೊಣೆ ಸಂಬಂಧಪಟ್ಟವರ ಮೇಲಿದೆ. ಸದಭಿರುಚಿಯ ಓರಿಯೆಂಟೇಶನ್‌ಗಳಿಂದ, ಕಲೋತ್ಸವಗಳಿಂದ, ಶಿಬಿರಗಳಿಂದ, ಅಭಿರುಚಿ ನಿರ್ಮಾಣ, ಸೂಕ್ತ.

ಪ್ರಶ್ನೆ : ಸಾಮಾಜಿಕ ಕತೆಗಳ ಪ್ರದರ್ಶನದಿಂದ ಈ ಕಲೆಯ ಜನಪ್ರಿಯತೆ ಕಡಿಮೆ ಆಗಿದೆಯೆ ?

ಉತ್ತರ : ಸಾಂಪ್ರದಾಯಿಕ ಕಲೆಗಳು, ಅತಿಯಾದ ವ್ಯಾವಹಾರಿಕತೆಗೆ, ವಾಣಿಜ್ಯಕರಣಕ್ಕೆ

* ಡಾ. ಎಂ. ಪ್ರಭಾಕರ ಜೋಶಿ