ಈ ಪುಟವನ್ನು ಪ್ರಕಟಿಸಲಾಗಿದೆ
52
ಮುಡಿ

ಶಕ್ತಿ ಸಂಚಯದಿಂದ ಮೆರೆಯುತ್ತಿರುತ್ತದೆ. ಉದಾ : ತೀರಾ ಸಾಮಾನ್ಯ ಮಟ್ಟದ ಒಂದು ಭರತನಾಟ್ಯ ನೃತ್ಯ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನವಾದರೂ, ಅದನ್ನು ನೋಡೋಣವೆನಿಸುತ್ತದೆ. ಜನರು ನೋಡಿ ಒಂದು ಮಟ್ಟದಲ್ಲಿ ಅದನ್ನು ಮೆಚ್ಚುತ್ತಾರೆ. ಇದಕ್ಕೆ ಕಾರಣ ಸಾಮಾನ್ಯ ಮಟ್ಟದಲ್ಲೇ ಆ ಕಲೆಯಲ್ಲಿ ಒಂದು ಉತ್ತಮಿಕೆ ಇದೆ. ಅಂದರೆ, ಆ ಕಲೆ, ಉತ್ಕರ್ಷಿಕರಣ (elevation) ಹೊಂದಿರುತ್ತದೆ. ಮಲೆಯಾಳ ಸಿನಿಮಾಗಳ ಹಾಗೆ, ಸಾಮಾನ್ಯವೂ ಚೆನ್ನಾಗಿರುತ್ತದೆ.

ಸದ್ಯ ಯಕ್ಷಗಾನವು ಇಂತಹದ್ದೊಂದು ವಿದ್ಯಮಾನದ ಲಾಭ ಹೊಂದುತ್ತಿದೆ. ನೂರಾರು ವರ್ಷಗಳ ಬೆಳವಣಿಗೆಯ ಬೆಳೆ ಈಗ ಕಾಣಿಸಿದೆ. ತೀರ ಸಾಮಾನ್ಯ ಅನ್ನುವ ಕಥಾನಕಗಳು, ಕಳಪೆ ಮತ್ತು ಶೈಲಿ ವಿರುದ್ಧವಾದ ವೇಷಗಳಿಂದಲೂ ಅದು ರಂಜಿಸುತ್ತದೆ. ಇದು ಆ ಕಲೆಯೊಳಗಿನ ಸಾಮರ್ಥ್ಯದಿಂದ. ಆದರೆ ಈ ವಿದ್ಯಮಾನದೊಳಗೆ ಒಂದು ಅಪಾಯವೂ ಇದೆ. ಅದೇ ಸ್ವತ್ವ ನಾಶದ ಅಲಕ್ಷ್ಯ , ಸತ್ತ್ವ ಸಿದ್ಧಿಯ ಭ್ರಮೆ.

ಏನು ಹಾಗೆಂದರೆ ? ಇಷ್ಟೆ. ಈಗ ನಮ್ಮ ಯಕ್ಷಗಾನ ಜನಪ್ರಿಯವಾಗಿ ಸಾಗುತ್ತಿವೆಯಲ್ಲ ? ಇದು ಇಂದಿನ ಈ ಕಲೆಯ ಮತ್ತು ಕಲಾವಿದರ ಸಿದ್ಧಿಯ ಯೋಗ್ಯತೆ,ಇದೇ ಅದರ ಉತ್ತಮ ಸ್ಥಿತಿ ಎಂದು ಭಾವಿಸುವುದು ಭ್ರಮೆ. ನಿಜವೆಂದರೆ ಇಂದಿನ ಸ್ಥಿತಿ ಅದರ ಒಳ ಯೋಗ್ಯತೆಯ ಫಲ. ಕಲಾರಸಿಕರ 'ಅದೃಷ್ಟ' ಅದು. ಇಂದಿನ ಸ್ಥಿತಿ ಕೆಲಕಾಲ ಮುಂದುವರಿದರೆ ಸ್ವಂತ ಸ್ವರೂಪ, ಸ್ವತ್ವದಿಂದ ಅದು ಗಳಿಸಿದ ಅಂಶಗಳು ನಾಶವಾಗಿ, ಕಳಪೆತನವು ಬೆಳೆಯುತ್ತಾ ಹೋಗಿ, ಅದನ್ನೇ ಸರಿಪಡಿಸಲಾಗದ ಸ್ಥಿತಿಗೆ ತಲಪುತ್ತೇವೆ. ಆಗ ಗೊತ್ತಾಗುತ್ತದೆ, ಈ ವರೆಗೆ ಬದುಕಿ ಮೆರೆದದ್ದು ಈ ಕಲೆಯ ಒಳಗಿನ ಯೋಗ್ಯತೆಯಿಂದ, ಅದು ಈಗ ನಷ್ಟವಾಗಿದೆ ಎಂದು. ಆದುದರಿಂದ ಶೈಲಿ ಸಂರಕ್ಷಣೆ ಯಕ್ಷಗಾನಗಳಂತಹ ಕಲೆಗಳಿಗೆ ಅನಿವಾರ್ಯ; ಶೈಲಿಯನ್ನು, ಕಲೆಯ ಘಟಕಗಳನ್ನು ಸೌಂದರ್ಯಾಂಶಗಳನ್ನು ಕಡೆಗಣಿಸಿ ಕೇವಲ ಗುಣಮಟ್ಟ ಸುಧಾರಣೆಯನ್ನು ಉದ್ದೇಶಿಸಿದರೂ ಅದು ಅಪಾಯಕಾರಿ.

ಕಲೆಯ ಆವರಣದೊಳಗೆ ಸತ್ವವನ್ನು ಹೆಚ್ಚಿಸುವ ಕೆಲಸಗಳು ನಡೆದಾಗ ಕಲೆಯು ಶ್ರೀಮಂತನಾಗುತ್ತದೆ. ಇಲ್ಲವಾದರೆ ಯಾವುದೋ ಮಾಧ್ಯಮದ ಮಾನದಂಡವನ್ನು ತೆಗೆದುಕೊಂಡು ಇನ್ನೊಂದು ಮಾಧ್ಯಮದ ಯೋಗ್ಯತಾ ನಿರ್ಣಯ ಮಾಡಿದಂತಾಗುತ್ತದೆ. ಒಂದು ಉದಾಹರಣೆ ನೋಡಿ; ಯಕ್ಷಗಾನದ ಬಣ್ಣದ ವೇಷವನ್ನು ಕುರಿತು ಸಾಮಾನ್ಯವಾಗಿ

* ಡಾ. ಎಂ. ಪ್ರಭಾಕರ ಜೋಶಿ