ಈ ಪುಟವನ್ನು ಪ್ರಕಟಿಸಲಾಗಿದೆ
65

ಮುಡಿ

ನೇರ ನೀಟ, ಓರೆಕೋರೆಗಳಿಂದ, ಮಧ್ಯೆ ಮಧ್ಯೆ ಜಲಪಾತ, ಹೊಂಡ, ನಿಶ್ಯಬ್ದ ಪ್ರವಾಹಗಳಿಂದಲೂ, ಇಂಗಿ ಮಾಯವಾಗಿ ಮತ್ತೊಮ್ಮೆ ಕಾಣಿಸುವ ಹರಿವಿನಂತೆಯೂ ಇರುವ ನದಿಯ ಹಾಗೆ ಇರುವುದು ಸಹಜ. ಅದರಲ್ಲಿ ನೀರು, ಕಲ್ಲು, ಮಣ್ಣು ಹೊಗೆ, ಕಸಕಡ್ಡಿ, ಒಸರು, ಕೆಸರು, ಮಾಧುರ, ಸ್ವಚ್ಛತೆ, ಅಶುಚಿಗಳೆಲ್ಲ ಇರುವುದೂ ಸಹಜ. ಅದೇ ವಾಹಿನಿ, ಅದೇ ಜಗತ್, ಅದೇ ಪರಂಪರೆ, ಹೀಗೆ ಹೇಳುವುದು, ಅದರ ಎಲ್ಲ ಸ್ಥಿತಿಗಳ ಒಪ್ಪಿಗೆಯಲ್ಲ, ವಸ್ತು ಸ್ಥಿತಿಯ ವರ್ಣನೆ ಅಷ್ಟೆ. ಉತ್ತಮಿಕೆಯ ಹಂಬಲವು ಅಪೇಕ್ಷಣೀಯ. ಸಂಸ್ಕೃತಿಯ ಬೆಳೆಯ ಕುರಿತು ಹೆಮ್ಮೆಯೊಂದಿಗೆ ಅತೃಪ್ತಿಯೂ ಅಗತ್ಯವಷ್ಟೆ ? ಬಯಲಾಟ
ಹೇಳಿ ಕೇಳಿ ಇದು ಬಯಲಾಟ, ಬೈಲಾಟ, ಬಯಲು ಎಂಬುದು ಸಾಂಕೇತಿಕ, ಮುಕ್ತ, ಫ್ರೀ ಎಂದು ಅರ್ಥ. ಹಾಗೆಂದು ಪೂರ್ತಿ ಬಂಧನ ರಹಿತವಲ್ಲ. ಬಯಲಿಗೂ ಸೀಮೆ ಉಂಟು. ಬಯಲಾಟಕ್ಕೂ ಉಂಟು. ಅದೇ ಶೈಲಿ, ಸ್ವರೂಪದ ಸೀಮೆ, ಬಯಲಾಟವನ್ನು, ಅಂದರೆ ಮೊದಲೇ ಜನರಲ್ಲಿ ಇದ್ದ ಅಂಶಗಳನ್ನು ಸ್ವೀಕರಿಸಿ, ಪರಿಷ್ಕರಿಸಿ ಭಾಗವತರಾಟವಾಯಿತು, ದಶಾವತಾರವಾಯಿತು. ಈ ನಾಮಾಂತರವೂ ಇತಿಹಾಸವನ್ನು ಹೇಳುತ್ತದೆ. ಸ್ವಲ್ಪ ಮೊದಲೇ ಇದ್ದ, ಸ್ವಲ್ಪ ತಯಾರಿಸಿ ಸೇರಿಸಿದ ಅಂಶಗಳಿಂದ ಬಯಲಾಟವನ್ನು ಭಾಗವತಮತ (ವೈಷ್ಣವ ಭಕ್ತಿ ಪಂಥವು) ಸ್ವೀಕರಿಸಿತು. ಮತಗಳು ಕಲೆಯನ್ನೂ, ಕಲೆಗಳು ಮತವನ್ನೂ ಅಭಿವ್ಯಕ್ತಿಗಾಗಿ ಸ್ವೀಕರಿಸುವುದು ವಿಶ್ವಸಾಮಾನ್ಯ (Universal) ವಿದ್ಯಮಾನ.
ದೇವರ ಸೇವಾರ್ಥವಾಗಿ, ನಿರ್ಮಿತವಾಗಿ ಅಥವಾ ಬಳಕೆಯಾಗುತ್ತ ಬಂದು, ವಿಶಾಲ ಜನ ಸಮುದಾಯಕ್ಕಾಗಿ ಬಯಲಿಗೆ ಬಂದ ಬಯಲಾಟ, ರಂಜನಾರ್ಥವಾದ ಅಂಶಗಳಿದ್ದರೂ ಮೌಲಿಕವಾಗಿ ಅದು ಸೇವೆ, ಆರಾಧನೆ, ಅರ್ಪಣೆ, ಸೇವೆಯ ಮೂಲಕ ರಂಜನೆ, ರಂಜನೆಯ ಮೂಲಕ ಸೇವೆ - ಹೀಗೆ ಅದರ ದ್ವಂದ್ವಮಾನ.
ರಂಜನೆ ಇಲ್ಲವಾದರೆ ಬರಿಯ ಕಥನವಾಗುತ್ತದೆ, ಉಪದೇಶವಾಗುತ್ತದೆ, ಅಥವಾ ಕೇವಲ ವಿಧಿ, ಕಟ್ಟುಕಟ್ಟಲೆ ಅಥವಾ ಶಾಸ್ತ್ರವಾಗಿ ಬಿಡುತ್ತದೆ. ರಂಜನೆಯನ್ನು ಕೇಂದ್ರೀಕರಿಸಿದಾಗ, ರಂಗ ಪ್ರಕಾರ ಬೆಳೆಯುತ್ತದೆ. ಹಾಗೆಂದು, ರಂಜನೆಯ ಒತ್ತು ಅತಿಯಾದರೆ, ರಂಜನೆಯೆಂಬುದು ಕೇವಲ ಕ್ಷಣಿಕ ವಿನೋದವಾಗಿ, ರಂಜನೆಯ ದೃಷ್ಟಿ ಹಗುರವಾದರೆ, ಕಲೆ ತಮಾಶೆಯಾಗಿ ಬಿಡುತ್ತದೆ. ಅದೇ, ಕೊನೆಗೆ ಗೌಜಿ ಗದ್ದಲವಾಗಿ,

ಡಾ. ಎಂ. ಪ್ರಭಾಕರ ಜೋಶಿ