ಈ ಪುಟವನ್ನು ಪ್ರಕಟಿಸಲಾಗಿದೆ

66

ಮುಡಿ

ಜಾತ್ರೆಯಾಗಿ, ಗಲಭೆಯಲ್ಲಿ ಮೂಲೆಗುಂಪಾಗಿ, ಹೇಗೋ ಉಳಿದ ಕಲೆಯೆಂದಾಗಿ ಬಿಡುತ್ತದೆ. ನಮ್ಮ ಹರಕೆ ಬಯಲಾಟಗಳು, ವಿಶೇಷತಃ ಒಂದು ಪ್ರದೇಶದಲ್ಲಿ, ಈ ದಾರಿಯಲ್ಲಿರುವುದು ಸ್ಪಷ್ಟ.
ಆಟವೆಂಬುದು ಸಭಾಲಕ್ಷಣ (ಪೂರ್ವರಂಗ), ಮತ್ತು ಪ್ರಸಂಗ ಸೇರಿ ಆರಾಧನೆ, ಪೂಜೆ ಎಂಬ ಭಾವ ಬಲವಾಗಿದ್ದರೆ, ಆಗ ಅದರಲ್ಲಿ ಮತ್ತೊಂದು 'ರಂಜನೆ'. 'ಆಕರ್ಷಣೆ' ಬೇಕೆನಿಸಲಾರದು. ಬಯಲಾಟವನ್ನು ಬಯಲಾಟವಾಗಿ ಆಡಿಸಿ ದೇವರಿಗೊಪ್ಪಿಸುವ ಭಾವನೆಯ ಹರಕೆ ಆಟದ ಪ್ರೇರಕ ಅಭಿಪ್ರಾಯ. ಆಟವೇ ಅಲ್ಲಿ ಪೂಜೆ, ಸೇವೆ.
ನವಶ್ರೀಮಂತಿಕೆಯ ಪ್ರಭಾವ
ಆದರೆ ಬಯಲಾಟ ಆಡಿಸುವುದರಲ್ಲಿ, ಇದು ಸೇವೆ ಎಂಬುದಕ್ಕಿಂತ ಆಟವನ್ನು ನಿಮಿತ್ತ ವಾಗಿಸಿ ಮಾಡುವ ಹಬ್ಬ, ಜಾತ್ರೆ ಎಂಬುದು ಬಲವಾದರೆ, ಕಲೆಯು ಅದರ ಕೇಂದ್ರದಿಂದ ಬದಿಗೆ ಸರಿಯುತ್ತದೆ. ಪ್ರದರ್ಶನಕ್ಕಿಂತ, ವಿಶಿಷ್ಟ ಪ್ರದರ್ಶಕತ್ವ ಮುಂದೆ ಬರುತ್ತದೆ. ಜಗತ್ತಿನಾದ್ಯಂತ ಕಲೆಗಳು, ಮುಖ್ಯವಾಗಿ ಪ್ರದರ್ಶನ ಕಲೆಗಳು ನವಶ್ರೀಮಂತಿಕೆ (neorich)ಯಿಂದಾಗಿ ಥಳಕುಗಳನ್ನು, ಗೌಜಿಗಳನ್ನು ಹೆಚ್ಚು ಹೆಚ್ಚು ಅಳವಡಿಸುತ್ತಿವೆ ಎನ್ನುತ್ತಾರೆ ಕಲಾವಿಮರ್ಶಕರು.
ನವಶ್ರೀಮಂತಿಕೆಯಿಂದ ಕಲೆಗೆ ಪ್ರೋತ್ಸಾಹ ಬರುತ್ತಿರುವುದು ಸ್ತುತ್ಯವೇ ಆಗಿದೆ. ಆದರೆ ಈ ಪ್ರೋತ್ಸಾಹದ ಸ್ವರೂಪಕ್ಕೆ ತಕ್ಕ ದಿಕ್ಕುದೆಸೆ (orientation) ನೀಡುವ ಕೆಲಸ ಕಲೆಗಳಲ್ಲಿ, ಅಸಕ್ತರಾದವರ ಮೇಲೆ ಇದೆ. ಈ ಜವಾಬ್ದಾರಿಯನ್ನು ನಿರ್ವಹಿಸುವ ಒಂದು ಸಾಮೂಹಿಕ ಯತ್ನವನ್ನು ಯಕ್ಷಗಾನದಲ್ಲಿ ಪ್ರವೃತ್ತರಾದವರೆಲ್ಲ ಯೋಚಿಸಿ ರೂಪಿಸಬೇಕಾದ ಅಗತ್ಯವುಂಟು.
ಜಾನಪದವೆ, ಶಾಸ್ತ್ರೀಯವೆ ?
ಇದೊಂದು ಹಳೆಯ ಚರ್ಚೆ, ಈ ಚರ್ಚೆಗೆ ಮಹತ್ತ್ವವಿಲ್ಲ ಎಂದು ಕೆಲವರು ಭಾವಿಸಿದರೆ ಇದೆ, ಶಾಸ್ತ್ರೀಯತೆಯ ನಿರ್ವಚನವೇ ಸರಿ, ಅದರಿಂಂದ ಕಲಾಮೌಲ್ಯದ ರಕ್ಷಣೆಯು ಸಾಧ್ಯ ಅನ್ನುತ್ತಾರೆ ಕೆಲವರು.
ಶಾಸ್ತ್ರೀಯ, ಮತ್ತು ಜಾನಪದ-ಜನಪದ (Folk) ಎಂಬ ನೆಲೆಗಳಲ್ಲಿ ಪರಿಶೀಲಿಸುತ್ತ ಹೋದ ಹಾಗೆ, ಎರಡೂ ವಾದಗಳಿಗೂ ಪೋಷಕವಾಗಿ ಯಕ್ಷಗಾನದಲ್ಲಿ ಅಂಶಗಳೂ, ವಿವರಗಳೂ ಇವೆ. ನಾಟ್ಯಶಾಸ್ರೋಕ್ತವಾದ ಪೂರ್ವರಂಗ, ಮತ್ತು ನಾಟ್ಯಗಳು ನಮ್ಮ ಬಯಲಾಟಗಳನ್ನು ನೋಡಿಯೆ ರೂಪಿಸಿದಂತಿದ್ದು ಅವು ಶಾಸ್ತ್ರಕ್ಕೆ ಮಾತೃಕೆಗಳು, ಅಂತೆಯೆ

0 ಡಾ. ಎಂ. ಪ್ರಭಾಕರ ಜೋಶಿ