ಈ ಪುಟವನ್ನು ಪ್ರಕಟಿಸಲಾಗಿದೆ
7

ಮುಡಿ


ಪ್ರಕಾಶಕರ ಮಾತು

ನಮ್ಮ ಯಕ್ಷಗಾನ ಕೇಂದ್ರದ ಮೂವತ್ತೈದನೆಯ ವರ್ಷಾಚರಣೆ, ಹೊಸ ಕಟ್ಟಡ 'ಶಿವಪ್ರಭಾ'ದ ಉದ್ಘಾಟನೆ ಮತ್ತು 'ಕಲಾಸಂಭ್ರಮ' ಉತ್ಸವದ ಈ ಶುಭ ಸಂದರ್ಭದಲ್ಲಿ ಹಿರಿಯ ಕಲಾವಿದ, ವಿಮರ್ಶಕ, ಮಿತ್ರ ಡಾ. ಎಂ. ಪ್ರಭಾಕರ ಜೋಶಿಯವರ ಯಕ್ಷಗಾನ ವಿಮರ್ಶಾ ಸಂಕಲನ 'ಮುಡಿ'ಯನ್ನು ಪ್ರಕಟಿಸಲು ಸಂತೋಷಪಡುತ್ತೇವೆ.


ಶ್ರೀ ಜೋಶಿ ಅವರ ಮತ್ತು ನಮ್ಮ ಸಂಸ್ಥೆಗಳ ಸಂಪರ್ಕಕ್ಕೂ ಮೂವತ್ತೈದು ವರ್ಷಗಳು ಸಂದಿವೆ. ಯಕ್ಷಗಾನ ಕೇಂದ್ರ, ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಆರ್.ಆರ್.ಸಿ.) ಗೋವಿಂದ ಪೈ ಸಂಶೋಧನ ಕೇಂದ್ರ ಈ ಮೂರು ಸಂಸ್ಥೆಗಳೊಂದಿಗೆ ಅವರು ನಿಕಟಸಂಪರ್ಕ ವಿರಿಸಿಕೊಂಡು ಬಂದವರು. ನಮ್ಮ ಮೂರೂ ಸಂಸ್ಥೆಗಳ ರೂವಾರಿ ದಿ| ಪ್ರೊ. ಕು. ಶಿ. ಹರಿದಾಸ ಭಟ್ಟರ ಆತ್ಮೀಯರಲ್ಲೊಬ್ಬರು. ಕಾರಕ್ರಮ, ಕಮ್ಮಟ, ಪ್ರದರ್ಶನಗಳಲ್ಲಿ ಭಾಗಿಗಳಾಗಿ, ಸಂಸ್ಥೆಗಳ ಸಲಹೆಗಾರರಾಗಿ ಅವುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವರು. ಅವರ ಪಿ.ಎಚ್.ಡಿ. ಅಧ್ಯಯನ ನಮ್ಮ ಸಂಸ್ಥೆಗಳ ಮೂಲಕವೆ ಆಗಿದೆ. ಅವರ ಮಹಾಪ್ರಬಂಧ (ಶ್ರೀಕೃಷ್ಣ ಸಂಧಾನ : ಪ್ರಸಂಗ ಮತ್ತು ಪ್ರಯೋಗ), ಅಂತೆಯ ಅವರ ಇನ್ನೊಂದು ಮುಖ್ಯ ಕೃತಿ 'ಯಕ್ಷಗಾನ ಪದಕೋಶ" ಇವು ನಮ್ಮ ಸಂಸ್ಥೆಯ ಮೂಲಕ ಪ್ರಕಾಶಗೊಂಡಿವೆ.

ಸ್ವತಃ ಕಲಾವಿದರಾದ ಜೋಶಿಯವರು ಯಕ್ಷಗಾನದ ಪ್ರಮುಖ ವಿಮರ್ಶಕ ಸಂಶೋಧಕರಲ್ಲಿ ಒಬ್ಬರಾಗಿ, ಆ ಕ್ಷೇತ್ರಕ್ಕೆ ಆಕಾಡಮಿಕ್ ರೂಪವನ್ನೀಯಲು ಶ್ರಮಿಸಿದವರು. ಅನುಭವ, ಪಾಂಡಿತ್ಯ, ಕಾಳಜಿಗಳಿಂದ ಬರೆದವರು. ಅವರ ಬರಹಗಳಿಗೆ ಈ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವಿದೆ.

ಈ ಹೊಸ ಸಂಕಲನಕ್ಕಾಗಿ ಅವರನ್ನು ಅಭಿನಂದಿಸುತ್ತ, ಅವರ ಈ 'ಮುಡಿ'ಯು ಕಲಾವಿದ, ಕಲಾಭಿಮಾನಿಗಳ ಮುಡಿಯನ್ನು ಅಲಂಕರಿಸಿ ಚಿಂತನಕ್ಕೆ ಕಾರಣವಾಗಲಿ, ಗ್ರಾಸ ಒದಗಿಸಲಿ ಎಂದು ಹಾರೈಸುತ್ತೇನೆ.


ಯುಗಾದಿ
14-4-2006
ಎಂ.ಜಿ.ಎಂ. ಕಾಲೇಜು, ಉಡುಪಿ
ಹೆರಂಜೆ ಕೃಷ್ಣ ಭಟ್ಟ
ನಿರ್ದೇಶಕ, ಯಕ್ಷಗಾನ ಕೇಂದ್ರ
ಮತ್ತು
ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ
. ಡಾ. ಎಂ. ಪ್ರಭಾಕರ ಜೋಶಿ