ಈ ಪುಟವನ್ನು ಪ್ರಕಟಿಸಲಾಗಿದೆ
71

ಮುಡಿ

6. ಪ್ರದರ್ಶನವೊಂದರೊಳಗಿನ ಅಂಗಗಳ ಮತ್ತು ಕಾಲ ವಿಭಾಗದ ಅಸಮತೋಲ
7. ವಿಶೇಷ ಆಕರ್ಷಣೆಗಳೆಂಬ ಕಳೆಗಳು

ಹೀಗೆ ಅಸಮತೋಲಗಳ ಸರಣಿ ಈ ಕಲೆಯಲ್ಲಿದೆ. ಇವುಗಳನ್ನು ಹೊತ್ತುಕೊಂಡೇ, ಈ ಕಲೆ ಸಮೃದ್ಧಿಯಿಂದ ಕೂಡಿ ಇರುವುದು ಅದರ ಆಂತರಿಕ ಶಕ್ತಿಗೆ ಪುರಾವೆ. ಆದರೆ, ಎಷ್ಟು ಕಾಲ ಈ ಬಗೆಯ, ಅಂಗಭಂಗ (tampering) ಮತ್ತು ವಿಚಿತ್ರ ಗತಿ ಭಂಗ (aberration)ಗಳನ್ನು ಅದು ತಾಳೀತೆಂದು ಹೇಳುವುದಕ್ಕಾಗುವುದಿಲ್ಲ.

ಯಕ್ಷಗಾನ ರಂಗದೊಳಗೆ ಇರುವ ವ್ಯಕ್ತಿಗತ ಪ್ರತಿಭೆ ಸಾಮರ್ಥ್ಯಗಳು ಮತ್ತು ಕಲೆಯ ರೂಪದಲ್ಲೆ ಇರುವ ಸತ್ತ್ವವೂ ಸಮೃದ್ಧವಾಗಿವೆ. ಈ ಸಮೃದ್ಧಿಯನ್ನು ಗೊಂದಲದಿಂದ ಬಿಡಿಸಿ, ರೂಪಿಸದಿದ್ದರೆ, ದೇಶದ ಬೇರೆ ಕೆಲವು ಕಡೆ ಆಗಿರುವ ಹಾಗೆ, ನಮ್ಮ ಕಲೆಯೂ "ಒಡವೆಯಿದ್ದೂ ಬಡವೆ " (ಶ್ರೀ ಕೆ. ಎಂ. ರಾಘವ ನಂಬಿಯಾರರ ನುಡಿಗಟ್ಟು).

ಪ್ರೊ. ಉದ್ಯಾವರ ಮಾಧವಾಚಾರ್ಯ ಅವರು, ಒಂದೆಡೆ ಹೇಳಿರುವ ಹಾಗೆ "ಶೈಲಿ ಬದ್ಧತೆ, ಗತಿಶೀಲತೆ ಮತ್ತು ಸಾಧ್ಯತೆಗಳ ಚಿಂತನಯುಕ್ತ ಪ್ರಯೋಗ"ದಿಂದ ಈ ಕಲೆಯ ಸಾರ್ಥಕವಾದ ಭವಿಷ್ಯ ರೂಪುಗೊಳ್ಳಬೇಕಿದೆ.




ಡಾ. ಎಂ. ಪ್ರಭಾಕರ ಜೋಶಿ