ಈ ಪುಟವನ್ನು ಪ್ರಕಟಿಸಲಾಗಿದೆ

70

ಮುಡಿ

ಗಾತ್ರ ವಿಸ್ತಾರ ಇಳಿದಾಗ, ಗುಣವೃದ್ಧಿ ಹೆಚ್ಚಬಹುದು. ಆದುದರಿಂದ ಗಾತ್ರದ ಇಳಿಕೆ, ಕಲೆಗೆ ಪ್ರಯೋಜನಕಾರಿಯಾಗುವ ಸಂಭವವುಂಟು.
ಸಾಧ್ಯತೆಗಳ ಶೋಧ
ಕಲೆ, ಎಷ್ಟೇ ಸಶಕ್ತವಾಗಿರಲಿ, ಬೆಳೆದಿರಲಿ, ನಾಜೂಕಾಗಿರಲಿ ಅದಕ್ಕೆ ಪೂರ್ಣತೆ ಎಂಬುದಿಲ್ಲ. ಬೆಳೆಯದಿದ್ದಾಗ, ಬೆಳವಣಿಗೆ ಸಾಧ್ಯತೆ ಇದ್ದ ಹಾಗೆಯೆ, ಬೆಳೆದಾಗ, ಇನ್ನಷ್ಟು ಪ್ರಯೋಗದ ವಿಭಿನ್ನ ಅಭಿವ್ಯಕ್ತಿಯ ಸಾಧ್ಯತೆಗಳೂ ಇವೆ. ಪ್ರಾಯೋಗಿಕ ರಂಗಭೂಮಿ ಎಂಬುದು, ಪಾರಂಪರಿಕ ರಂಗಕ್ಕೆ ಮಾರಕವಲ್ಲ, ಸ್ಪರ್ಧಿಯೂ ಅಲ್ಲ. ಅದು ಪೂರಕ. ಅಂತಹ ಸಾಧ್ಯತೆಗಳ ಶೋಧವು ಕಲೆಯ ಬೆಳವಣಿಗೆಯ ಒಂದು ದಾರಿ, ಈ ಕೆಲಸ, ಮಿತ ಪ್ರಮಾಣದಲ್ಲಾದರೂ ಯಕ್ಷಗಾನದಲ್ಲಿ ಆಗಿದೆ. ಅತಿವಾದದಿಂದ ಕಲಾಪರಂಪರೆಯು ಉಳಿಯುವುದಿಲ್ಲ. ತೀರ ಸಡಿಲಾದ, ಅನುಕೂಲ ಸಿಂಧು ಸುಧಾರಣಾವಾದವೂ ಕಲೆಗೆ ಪೋಷಕವಾಗದು. ಈ ಕುರಿತು ಇರುವ ಗೊಂದಲದಿಂದಲೆ, ಗಂಭೀರವಾದ ನೂತನ ಪ್ರಯೋಗಗಳನ್ನು (ಉದಾ- ಯಕ್ಷರಂಗ, ಸಮೂಹ, ಯಕ್ಷಕೌಮುದಿ, ಭಾಮಿನಿ) ಮತ್ತು ಕೇವಲ ಬದಲಾವಣೆಗಳನ್ನು ಒಂದೇ ಬಗೆಯವೆಂದು ಭಾವಿಸಿ, ಅವರು ಹೀಗೆ ಬದಲಾವಣೆ ಮಾಡಿಲ್ಲವೆ?” ಎಂದು ಕೇಳಲಾಗುತ್ತದೆ! ಪ್ರಶ್ನಾರ್ಹವಾಗುವುದು ನಾವೀನ್ಯವಲ್ಲ, ಆ ನಾವೀನ್ಯದ ಕಲಾರೂಪ ಮತ್ತು ಸಿದ್ಧಾಂತವೇ ವಿವೇಚಿಸಿಸಬೇಕಾದುದು.
ಅಸಮತೋಲ
ಸಮಷ್ಟಿ ಅಥವಾ ಸಂಯುಕ್ತ ಕಲೆಯಾಗಿರುವ ಯಕ್ಷಗಾನದಲ್ಲಿ, ಅಂಗೋಪಾಂಗ ಸಮತೋಲನವು ಮುಖ್ಯ ಆವಶ್ಯಕತೆ. ಆದರೆ, ಅಸಮತೋಲನದ, ಅತ್ತಿತ್ತ ವಾಲುವ ಒಂದು ಸತತ ಸಾಧ್ಯತೆ ಯಕ್ಷಗಾನದಂತಹ ಕಲೆಯೊಳಗೆ ಇದೆ. ಅದು ಕಾಣುತ್ತಲೂ ಇದೆ.

  1. . ಹಿಮ್ಮೇಳ-ಮುಮ್ಮೇಳ ಅಸಾಂಗತ್ಯ
  2. . ಹಿಮ್ಮೇಳದ ಬಳಕೆಯ ಅಸಮತೋಲ
  3. . ವೇಷಗಳಲ್ಲಿ ಮಿಶ್ರಣ
  4. . ಕುಣಿತದ ಬೆಳವಣಿಗೆ ವಿಚಿತ್ರವಾಗಿರುವುದು.
  5. . ಯಕ್ಷಗಾನೋಚಿತವಲ್ಲದ ವಸ್ತುಗಳ ಕಥೆಗಳ ಬಳಕೆ
• ಡಾ. ಎಂ. ಪ್ರಭಾಕರ