ಈ ಪುಟವನ್ನು ಪ್ರಕಟಿಸಲಾಗಿದೆ

84
-

ಮುಡಿ

2-

ತೆರು ಎಂದರೆ ಬೀದಿ, ಕೂತ್ತು ಎಂದರೆ ಆಟ, ಬೀದಿಯಲ್ಲಿ ಆಡುವ ಆಟ ಎಂದು ಅರ್ಥ. ನಮ್ಮಲ್ಲೂ ಬಯಲಾಟ, ಬೈಲಾಟ ಎಂಬ ಶಬ್ದಗಳೇ ಹಿಂದೆ ಪ್ರಚಲಿತವಿದ್ದವು. ಯಕ್ಷಗಾನ ಎಂಬ ಶಬ್ದವು ಪ್ರದರ್ಶನ ಎಂಬುದಕ್ಕೆ ಸಮಾನಾರ್ಥಕವಾಗಿ ಬಂದದ್ದೂ ಈಚೆಗೆಯೆ, ತೆರುಕೂತ್ತು ಎಂಬುದು ವೀಧಿನಾಟಕ ಎಂಬ ಪದದ ಅನುವಾದ. 'ವೀಧಿ ನಾಟಕಂ ಆಂಧ್ರಪ್ರದೇಶದಲ್ಲಿರುವ ಒಂದು ಪ್ರಕಾರ. ತೆರುಕೂತ್ತು ಸಕ್ರಿಯವಾಗಿದ್ದ ಅದರ ಆದ್ಯಸ್ಥಾನಗಳು, ತಮಿಳುನಾಡು-ಆಂಧ್ರಗಳ ಸೀಮೆಯಲ್ಲಿವೆ. ಇದನ್ನು ಗಮನಿಸಿದರೆ, ತೆರುಕೂತ್ತು ಎಂಬುದು ಆಂಧ್ರದಿಂದ ತಮಿಳುನಾಡಿಗೆ ವಲಸೆ ಹೋಗಿ, ರೂಪಾಂತರ - ಭಾಷಾಂತರ ಹೊಂದಿದ ಕಲೆ ಎಂದು ಊಹಿಸಲೂ ಅವಕಾಶವಿದೆ.
ಇನ್ನೊಂದು ಜನಪ್ರತೀತಿಯಂತೆ, ತೆಲುಗುನಾಡಿನ ಒಂದು ಸಮಾಜವಾದ ತುಳುವ ವೆಲ್ಲಾಲ ಸಮುದಾಯದವರು, ಆಂಧ್ರದಿಂದ ಇದನ್ನು ತಮಿಳುನಾಡಿನ ಆರ್ಕಾಟ್ ಮೊದಲಾದ ಪ್ರದೇಶಗಳಿಗೊಯ್ದರು. ಈ ತುಳುವ ವೆಲ್ಲಾಲರು, ಮೂಲತಃ ತುಳುನಾಡಿನವರಾಗಿದ್ದು, ಆಂಧ್ರಕ್ಕೆ ಹೋಗಿ, ತೆಲುಗರಾದವರು. ಇದು ನಿಜವಾಗಿದ್ದರೆ, ಒಂದು ಸಂದೇಹಕ್ಕೆ ಉತ್ತರ ದೊರೆಯುತ್ತದೆ. ಅದೇನೆಂದರೆ ತೆರುಕೂತ್ತಿನ ಮುಖವರ್ಣಿಕೆಗಳಿಗೂ ತೆಂಕುತಿಟ್ಟಿನ ಮುಖವರ್ಣಿಕೆಗಳಿಗೂ ಇರುವ ಸಾಮ್ಯ. ಹಾಗೆಯೆ, ವೇಷಗಳ ಕುಣಿತದ ಲಾಗ(ಗಿರ್ಕಿ)ಗಳ ಹೋಲಿಕೆಗಳಿಗೆ ವಿವರಣೆ ಸಿಗುತ್ತದೆ.
ಅಂದರೆ - ತುಳುನಾಡಿನಿಂದ ವಲಸೆ ಹೋದ ತೆಂಕುತಿಟ್ಟಿನ ಯಕ್ಷಗಾನದ ಪ್ರಭಾವದಿಂದ ರೂಪಿಸಲ್ಪಟ್ಟು, ತೆಲುಗಿನಲ್ಲಾಗಲೇ ಇದ್ದ ವೀಧಿ ನಾಟಕದ ಒಂದು ಪ್ರಕಾರವು ತಮಿಳುನಾಡಿಗೆ ಹೋಗಿ ತೆರುಕೂತ್ತೆನಿಸಿತು ಎಂಬ ಊಹೆಗೆ ಬರುತ್ತೇವೆ. ಈ ಊಹೆ ವಿವಾದಾಸ್ಪದ ನಿಜ. ಈ ಕುರಿತು ಹೆಚ್ಚಿನ ಮಾಹಿತಿ, ಅಧ್ಯಯನ ಉಳ್ಳವರು ಪರಿಶೀಲಿಸಬೇಕಾದ ಅಗತ್ಯವಿದೆ.
ಹಾಗೆಯೆ, ತೆರುಕೂತ್ತು ಪರಿಷ್ಕೃತವಾಗಿ, ಕ್ರಮವಾಗಿ ಪ್ರದರ್ಶಿತವಾದಾಗ ಅದಕ್ಕೆ 'ಕರ್ನಾಟಕ ಕೂತ್ತು' ಎಂಬ ಪ್ರಶಂಸಾತ್ಮಕವಾದ ಹೆಸರಿದೆ! ಇದೇಕೆ? ಇಲ್ಲಿ ಕರ್ನಾಟಕ ಶಬ್ದ ಹೇಗೆ ಬಂತು ? ಮೇಲಿನ ಊಹೆಗೂ ಇದಕ್ಕೂ ಸಂಬಂಧವಿರಬಹುದು. ಇದೂ ಪರಿಶೀಲನಾರ್ಹ.
ತಮಿಳುನಾಡಿನಲ್ಲಿ ಹಿಂದೆ ವಸೈಕೂತ್ತು, ಪುಗಳ್ ಕೂತ್ತು, ವರಿಕೂತ್ತು, ಆರ್‍ಯಂ ತಮಿಳ್ ಕೂತ್ತು, ದೇಶಿಕೂತ್ತು, ಕೊರವೈಕೂತ್ತು, ಮೊದಲಾದ ಹಲವಾರು ಕೂತ್ತುಗಳಿದ್ದವೆಂದು ತಮಿಳು ಕೋಶಗಳಲ್ಲಿದೆ. ಇವುಗಳು ವಿಕಾಸಗೊಂಡು, ಮುಂದೆ ತೆರುಕೂತ್ತಿನ

°ಡಾ. ಎಂ. ಪ್ರಭಾಕರ ಜೋಶಿ