ಈ ಪುಟವನ್ನು ಪ್ರಕಟಿಸಲಾಗಿದೆ

ಮುದಿ 85 ಬೆಳವಣಿಗೆಯಾಗಿರಬಹುದು. ಹಲವು ಮೂಲಗಳಿಂದ ಒಂದು ಕಲೆ ಸ್ವೀಕರಿಸಿ ಬೆಳೆಯುವುದೂ, ಒಂದು ಕಲೆ ಕವಲಾಗಿ ಹಲವಾಗುವುದೂ ಕಲೆಯ ಇತಿಹಾಸದಲ್ಲಿ ಸಹಜ ಸಂಗತಿಯಾಗಿದೆ. (ಕೂತ್ತು ಎಂಬುದು ಆಟ, ಕುಣಿತ ಎಂಬ ವಿಶಾಲವಾದ ಒಂದು ಶಬ್ದ.)
ಎಂತಿದ್ದರೂ, ತೆರುಕೂತ್ತಿನ ಅಸ್ತಿತ್ವದ ಕುರಿತು 16ನೇಯ ಶತಮಾನದಿಂದ ಖಚಿತ ಮಾಹಿತಿಗಳಿವೆ ಎಂದು ವಿದ್ವಾಂಸರು ಹೇಳುತ್ತಾರೆ. ತೆಲುಗಿನ ಯಕ್ಷಗಾನ ಸಾಹಿತ್ಯವೂ, ಕನ್ನಡದ ಬಯಲಾಟಗಳೂ ಇದಕ್ಕಿಂತ ಪೂರ್ವದವುಗಳು ಎನ್ನಲು ಅವಕಾಶವಿದೆ. 12 ಶತಮಾನದ ಚೌಂಡರಸನ ಅವತಾರಾಕಾರ ನಟ್ಟುವ (ದಶಾವತಾರ), ಯಶೋಧರ ಚರಿತೆಯ ಕೇಳಿಕೆಯ ಉಲ್ಲೇಖ (ಕೇಳಿಕೆ = ಆಟ-ಆಂಧ್ರದಲ್ಲೂ ಕೇಳಿಕೆ), 1400-1500ರಲ್ಲಿ ಉತ್ತರಕನ್ನಡದ ಸೋಂದಾದಲ್ಲಿ, ಕಾಸರಗೋಡಿನ ಕೂಡ್ಲಿನಲ್ಲಿ ಮೇಳಗಳಿದ್ದುವೆಂಬ ಉಲ್ಲೇಖ, ಆಂಧ್ರದಲ್ಲಿ 13-14 ಶಮಾನಗಳಲ್ಲಿ ಲಿಖಿತವಾದ ಯಕ್ಷಗಾನ ಸಾಹಿತ್ಯ ಲಕ್ಷಣಗಳ ವಿಚಾರ ಇತ್ಯಾದಿಗಳು ಇದಕ್ಕೆ ಆಧಾರ. ಇವುಗಳಿಂದ ಕರ್ನಾಟಕದಲ್ಲೂ, ಆಂಧ್ರದಲ್ಲೂ ಯಕ್ಷಗಾನವು ಪ್ರಾಚೀನವೆಂಬುದು ಸ್ಪಷ್ಟ. ಅಂತೂ ಆಂಧ್ರ - ಕರ್ನಾಟಕ - ತಮಿಳುನಾಡುಗಳ ಬಯಲಾಟಗಳು ಏಕಮೂಲವಾಗಿರಬಹುದು. ಅದರ ಒಂದು ವಿಶಿಷ್ಟ ಶಾಖೆ - ತೆರುಕೂತ್ತು.

-3-

ತೆರುಕೂತ್ತು ತಮಿಳುನಾಡಿನಲ್ಲಿ, ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲೂ, ಆರ್ಥಿಕ- ಸಾಮಾಜಿಕವಾಗಿ ಕೆಳವರ್ಗಗಳ ಜನರಲ್ಲೂ ಜನಪ್ರಿಯವಾದ ರಂಗಕಲೆ. ಇದಕ್ಕೆ ಆಧಾರವಾಗಿರುವ ಕಾವ್ಯಗಳು, ಪ್ರಬಂಧಗಳು 'ಯಕ್ಷಗಾನ'ಗಳು, ತೆಲುಗು, ತಮಿಳುಗಳಲ್ಲಿ ಯಕ್ಷಗಾನವೆಂದರೆ, ಪದ್ಯಗಳಲ್ಲಿ ರಚಿತವಾದ ಕತೆ, ಸಾಹಿತ್ಯ ಪ್ರಕಾರ. ನಾವು ಯಕ್ಷಗಾನ ಪ್ರಸಂಗ ಎನ್ನುತ್ತೇವೆಲ್ಲ ಅದು. ತಮಿಳಿನಲ್ಲಿ ಆಟಕ್ಕೆ ಯಕ್ಷಗಾನ ಎನ್ನುವುದಿಲ್ಲ. ತೆರುಕೂತ್ತು ಎನ್ನುವರು. ಅದರ ಪದ್ಯ ಸಾಹಿತ್ಯಕ್ಕೆ ಯಕ್ಷಗಾನ ಎಂದು ಹೆಸರು. ತಮಿಳು, ತೆಲುಗು, ಕನ್ನಡ ಭಾಷೆಗಳ ಯಕ್ಷಗಾನ ಪ್ರಬಂಧಗಳು ಸುಮಾರಾಗಿ ರಚನಾ ಸ್ವರೂಪದಲ್ಲಿ ಒಂದೇ ರೀತಿಯಾಗಿವೆ. ಯಕ್ಷಗಾನವೆಂಬ ಶಬ್ದವು ದೊರಕುವುದು, ಮೊದಲಾಗಿ ತೆಲುಗಿನಲ್ಲಿ. ಆದುದರಿಂದ ಈ ಪ್ರಕಾರವು ಅಲ್ಲಿ ರೂಪುಗೊಂಡು, ಉಳಿದೆಡೆಗಳಿಗೆ ಹರಡಿರಬಹುದೆಂದು ಊಹಿಸಬಹುದು. ಪ್ರಸಂಗ ಸಾಹಿತ್ಯದ ಆಧಾರದಲ್ಲಿ, ಹಾಡುಗಾರಿಕೆ, ಹಿಮ್ಮೇಳ, ವೇಷ, ಕುಣಿತ, ಮಾತು, ರಂಗ ತಂತ್ರಗಳನ್ನು ಅಳವಡಿಸಿ ತೆರುಕೂತ್ತು ಎಂಬುದು ರೂಪಿತವಾಗಿದೆ. ನಮ್ಮ ಬಯಲಾಟದ ಹಾಗೆ.

0 ಡಾ. ಎಂ. ಪ್ರಭಾಕರ ಜೋಶಿ