ಈ ಪುಟವನ್ನು ಪ್ರಕಟಿಸಲಾಗಿದೆ

ಆನ್ವಯಿಕ ಸಂಶೋಧನೆಯ ದೃಷ್ಟಿಯಿಂದ ಮಹತ್ವದ ಸಂಗತಿ. ಡಾ. ಪ್ರಭಾಕರ ಜೋಶಿ ಅವರಂತೆ ಕಲಾವಿದ, ಸಂಶೋಧಕ, ವಿಮರ್ಶಕ ಮತ್ತು ಸಂಘಟಕ ಆಗಿ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಸಕ್ರಿಯವಾಗಿ ತೊಡಗಿಸಿಕೊಂಡ ಇನ್ನೊಬ್ಬ ಹಿರಿಯ ವಿದ್ವಾಂಸರು ಕರ್ನಾಟಕದಲ್ಲಿ ಇಂದು ನಮ್ಮ ನಡುವೆ ಇಲ್ಲ.
ಡಾ. ಜೋಶಿಯವರು ತತ್ತ್ವಶಾಸ್ತ್ರಗಳ ವಿಮರ್ಶಾತ್ಮಕ ಅಧ್ಯಯನಗಳ ಮೂಲಕ ಕನ್ನಡದ ಒಬ್ಬ ವೈಚಾರಿಕ ವಿದ್ವಾಂಸರಾಗಿಯೂ ಮುಖ್ಯ ರಾಗಿದ್ದಾರೆ. ಸಾಹಿತ್ಯ, ಕಲೆ, ಜಾನಪದ, ರಂಗಭೂಮಿ, ಮೀಮಾಂಸೆಯ ಕ್ಷೇತ್ರಗಳನ್ನು ಅಂತರ್ ಶಿಸ್ತೀಯ ನೆಲೆಯಿಂದ ಅಧ್ಯಯನ ಮಾಡಿದ ಮತ್ತು ಇಂದಿಗೂ ಈ ಕ್ಷೇತ್ರಗಳ ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿ ಇರುವ ಡಾ. ಪ್ರಭಾಕರ ಜೋಶಿ ಅವರು ಕರ್ನಾಟಕದ ಬಹುಶ್ರುತ ವಿದ್ವಾಂಸರು.

10 / ಯಕ್ಷ ಪ್ರಭಾಕರ