೧೫] ರಘುಕುಲಚರಿತಂ, ೯೫ ಯನ್ನು ಸ್ವಲ್ಪಮಟ್ಟಿಗೆ ಕಡಮೆ ಮಾಡುತಲಿದ್ದರು. ಅತ್ತ ಅಯೋಧ್ಯಾನಗರದಲ್ಲಿ - ತೇತಾಗ್ನಿಗಳಂತೆ ತೇಜಸ್ಸುಳ ಘರ ತನೇ ಮೊದಲಾದ ಮೂವರೂ ತಂತಮ್ಮ ಧಮ್ಮ ಪತ್ನಿಯರಲ್ಲಿ ಕ್ರಮವಾಗಿ ಇಬ್ಬಿಬ್ಬರು ಮಕ್ಕಳನ್ನು ಪಡೆದರು, ಆ ಹಿಂದೆ ಅಗ್ರಜಭಕ್ಕನಾದ ಶತ್ರು 4ನು - ಅರಿಗಳನ್ನಿರಿಯುವವನೆಂದು ಹೆಸರುವಾಸಿಯನ್ನು ಪಡೆದಿರುವ ತನ್ನ ಹಿರಿಯಮಗನಾದ ಸುಬಾಹುವಿಗೆ ಮಧುರಾನಗರದ ರಾಜ್ಯಭಾರ ವನ್ನೂ, ಕಿರಿಯವನಾದ ಬಹುಶ್ರುತನಿಗೆ ವಿವಿಶಾನಗರಿಯ ದೊರೆತನವನ್ನೂ ಒಪ್ಪಿಸಿದನು, ಮತ್ತು - ಮರಳಿ ವಾಲ್ಮೀಕಿ ಮುನಿಗೆ ತಪಃಫಲದ ವೆಟ್ಟ ವಾಗಬಾರದೆಂದು ನೆನೆದು, ಮೈಥಿಲೀ ತನಯರಾದ ಲವಕುಶರ ರಾಮಾ ಯಣಗಾನದಿಂದ ನಿಶ್ಯಬ್ದ ಗಳಾಗಿರುವ ಮೃಗಗಳನ್ನೊಳಗೊಂಡಿರತಕ್ಕೆ ಆತನ ತಪೋವನವನ್ನು ಹೋಗದೆಯೇ ಮುಂದರಿದನು. ಲವಣಾಸುರ ವಧೆಯ ಸುದ್ದಿ ಯು ಮೊದಲೇ ಪುರಜನರಿಗೆ ವಿದಿತವಾಗಿದ್ದಿತು, ನಗರವನ್ನು ತೋರಣಾದಿಗಳಿಂದ ಬಲು ಅಂದವಾಗಿ ಅಲಂಕರಿಸಿದ್ದರು, ಬಹುಮಾನ ಪೂರ್ವಕವಾಗಿ ಜಿತೇಂದ್ರಿಯನಾದ ಶತ್ರುಘ್ನನನ್ನು ಇದಿರೊ ಂಡರು, ಶತ್ರು ಘ್ನನೂ ಬಗೆಬಗೆಯ ಶೃಂಗಾರಗಳಿಂದ ಸಂಶೋಭಿಸುತಲಿರುವ ಅಯೋಧ್ಯೆ ಯನ್ನು ಹೊಕ್ಕನು, ಸಭಾಮಧ್ಯದಲ್ಲಿ ಸಭಾಸದರಿಂದ ಸೇವಿಸಲ್ಪಡುತ, ಸೀತೆಯನ್ನು ಪರಿತ್ಯಾಗ ಮಾಡಿರುವ್ರದರಿಂದ ಭೂಮಿಗೆ ಅಸಾಧಾರಣಪತಿ ಯಾಗಿರುವ ಅಣ್ಣನಾದ ದಾಶರಥಿಯನ್ನು ಕಂಡನು, ಕೂಡಲೆ ಅಭಿವಂದಿ ನಿದನು, ರಾಮನು - ಲವಣಾಂತಕನೆನಿಸಿ ಪಣತನಾದ ಶತ್ರುಘ್ನನನ್ನು, ಕಾಲನೇಮಿಯೆಂಬ ಅಸುರನನ್ನು ಕೊಂದು ಬಂದ ಉಪೇಂದ್ರನನ್ನು ಇದ್ರನು ಹೇಗೋ ಹಾಗೆ ಅಭಿನಂದಿಸಿದನು, ಮತ್ತು ಅಂದಿನವರೆಗಿನ ಕುಶಲ ವೃತ್ತಾಂತವನ್ನು ತಿಳಿಸುವಂತೆ ಪ್ರಶ್ನೆಮಾಡಿದನು, ಆದರೆ-ಶತ್ರುಘ್ರನು ಕಾಲವಿಕ್ಷೇಪದಲ್ಲಿ ಪ್ರತೃರ್ಪಣಮಾಡುವೆನು ಎಂದು ಮುನಿಯ ಶಾಸನವಾ ಗಿದ್ದು ದರಿಂದಮೈಥಿಲೀ ಸಂತತಿ ವೃತ್ತಾಂತವೊಂದನ್ನುಳಿದು ಮಿಕ್ಕ ಸನಾ ಚಾರವನ್ನೆಲ್ಲ ಅಣ್ಣನಿಗೆ ಅರಿಕೆಮಾಡಿದನು. ಆ ಮೇಲೆ ಒಂದು ಸಮಯದಲ್ಲಿ - ಆ ನಾಡಿನವನಾದ ಒಬ್ಬ ವಿಪ್ರ ನು - ಕೇವಲ ಬಾಲ್ಯದಲ್ಲಿಯೇ ಮೃತನಾದ ತನ್ನ ಬಾಲನನ್ನು ಎತ್ತಿ
ಪುಟ:ರಘುಕುಲ ಚರಿತಂ.djvu/೧೦೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.