೧೬] ರಘುಕುಲಚರಿತ. ೧೦೯ ತೋರುತಲಿದ್ದಿತು. ನಾಯಕನಾದ ಕುಕನ ಆ ವಾಹಿನಿಯಲ್ಲಿ ಮುಂದೆ ಬರು ತಲಿರುವ ಮದಗಜಗಳವೆಯಿಂದ ಹರಿವ ಮದಜಲಧಾರೆಯಿಂದ ನನೆದ ನೆಲವೆಲ್ಲ ಕೆಸರಾಗುತಲಿದ್ದಿ ತು, ಹಾಗೆಯೇ ಹಿಂದೆಬರುವ ಕುದುರೆಗಳಖುರ ಪುಟಗಳ ತುಳಿತದಿಂದ ನಿಮಿಷಮಾತ್ರದಲ್ಲಿ ಧೂಳಿಯಾಗುತ್ತಲೂ ಇದ್ದಿತು. ಇಂತು ಹರಿದು ಬರುತಲಿರುವ ಆ ಸೇನೆಯು - ವಿಂಧ್ಯಪರ್ವತದ ತಪ್ಪಲಿ ನಲ್ಲಿ ರ್ಮುದಾರಿಯನ್ನು ಹುಡುಕುತ ಕಪಲುಕವಲಾಗಿ ಒಡೆದ, ರೇವಾನ ದಿಯಂತೆ ಕೋಲಾಹಲ ಧ್ವನಿಯುಳ್ಳುದಾಗಿ, ಗವಿಗಳಿಂದ ಪ್ರತಿವನಿಯನ್ನು ಹೊರಡಿಸುತಲಿದ್ದಿ ತು, ಕಾವಿಮೊದಲಾದ ಕಲ್ಲುಗಳಮೇಲೆ ಹರಿವುದರಿಂದ ಕೆಂಪಾದ ತೇರಿನಗಾಲಿಯಪಟ್ಟೆಗಳುಳ್ಳುದೂ, ಪಯಣದ ಕಲಕಲದಿಂದ ವಿಶ್ರವಾದವಾಗೃಧ್ವನಿಯುಳ್ಳುದೂ ಆಗಿರುವ ದಂಡಿನಿಂದೊಡಗೂಡಿದ ಕುಶನು -ಅಲ್ಲಲ್ಲಿ ಬೇಡರೊಪ್ಪಿಸುವ ಹಣ್ಣು ಹಂಪಲು ಮೊದಲಾದ ಉಪಹಾ ರಗಳನ್ನು ನೋಡಿ ಸಂತೋಷಿಸುತ್ತಾ ತೆರಳಿದನು, ಆ ವಿಂಧ್ಯಪರ್ವತದ ಹತ್ತಿರದಲ್ಲಿನ ಹೊಳೆಯಲ್ಲಿ ಆನೆಗಳು ಸೇತುವೆಯಾಗಿ ನಿಲ್ಲಲು, ಪಶ್ಚಿಮ ವಾಹಿನಿಯಾದ ಗಂಗೆಯನ್ನು ದಾಟುತಲಿದ್ದ ಕುಶನಿಗೆ, ಆಗಸಕ್ಕೆ ಹಾರ.ತ ಹರಡಿ ಅಲುಗುತಲಿರುವ ರೆಕ್ಕೆಗಳನ್ನೊಳಗೊಂಡಿರುವ ಅಂಚೆಗಳು ಪ್ರಯತ್ನ ವಿಲ್ಲದೆಯೇ ಅಣಿಯಾದ ಚಾಮರಗಳಾದವು. ಆಗ ಕುಶನು - ಹಿಂದೆಕಪಿಲ ಮುನಿಯ ಕೋಪಾಗ್ನಿಯಿಂದ ಬೂದಿಯಾಗಿ ಉಳಿದ ದೇಹಗಳುಳ್ಳವಳೂ, ತನ್ನ ಪೂರ್ವಪುರುಷರೂ ಆದ ಸಗರಪುತ್ರರ ಸ್ವರ್ಗಪ್ರಾಪ್ತಿಗೆ ಮೂಲಕಾ ರಣವಾದುದೂ, ನಾವೆಗಳ ಸಂಚಾರದಿಂದ ಚಂಚಲವಾದುದೂ ಆಗಿರುವ ಭಾಗೀರಥೀಜಲಕ್ಕೆ ಅಭಿವಂದಿಸಿದನು. ಇಂತು ಕುಶಮಹಾರಾಜನು - ಕೆಲವುದಿವಸಗಳವರೆಗೂ ಹಾದಿಯನ್ನು ಕಳೆದು, ಸರಯತೀರವನ್ನು ಸೇರಿ, ಅಲ್ಲಿ ತನ್ನ ಹಿರಿಯರಿಂದ ವಿಸ್ತರಿಸಲ್ಪಟ್ಟು, ವೇದಿಗಳಲ್ಲಿ ನೆಲೆಗೊ೦ ಡಿರುವ ನೂರಾರು ಯೂಪಸ್ತಂಭಗಳನ್ನು ಕಂಡನು, ಹೂತಿರುವ ಮರಗಳಮೇಲೆ ಹಾಯ್ದು, ತಂಪಾದ ಸರಯೂತರಂಗಗಳಮೇಲೆನುಗ್ಗಿ, ಹೊರಟುಬಂದ ಕುಲರಾಜಧಾನಿಯ ಉದ್ಯಾನವಾಯುವು - ಕುಶಮಹಾ ರಾಜನನ್ನು ಇದಿರೊ೦ಡಿತು. ಆಬಳಿಕ-ಹಗೆಗಳೆದೆಯಲ್ಲಿ ಅಲಗನ್ನು ನಡತಕ್ಕವನೂ, ರಘುಕುಲಲಲಾ
ಪುಟ:ರಘುಕುಲ ಚರಿತಂ.djvu/೧೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.