ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಶ್ರೀ ಶಾ ರ ದಾ , ಮನೂ, ಪ್ರಜಾಪ್ರಿಯನೂ ಆಗಿರುವ ಕುಶನರಪಾಲನು - ಚಲಿಸುತಲಿ ರವ ಧಜಪಟಗಳನ್ನೊಳಗೊಂಡ ಸೈನ್ಯವನ್ನು , ಪುರವ ಹೊರವಳಯ ದಲ್ಲಿ ಇಳಿಸಿದನು, ಆ ಹಿಂದಕುಶರಾಜನಾಣತಿಯನಾಂತು, ಬಹುಮಂದಿ ಕೈವಾಡಗಾರರು - ಅಣಿಯಾಗಿದ್ದ ಸಕಲಸಲಕರಣೆಗಳಿಂದ, ಅದುವರೆಗೆ ಹಳಾಗಿದ್ದ ಅಯೋಧ್ಯಾನಗರವನ್ನು ಮೋಡಗಳು ಮಳೆಗರೆವುದರ ಮೂಲಕ ಬೇಸಗೆಯ ಬೇಗೆಯಿಂದ ಬೆಂದಿದ್ದ ಭೂಮಿಯನ್ನು ಹೇಗೆ ಹಾಗೆ ಹೊಸದಾಗುವಂತೆ ಅಲಂಕರಿಸಿದರು. ತರುವಾಯ ಆ ರಘು ವೀರನು - ಪ್ರಶಸ್ತಗಳಾದ ದೇವಾಲಯಗಳೊಳಗೆ ಉಪವಾಸವೇ ಮ೦ತಾದ ನೇಮಗಳಿಂದೊಡಗೂಡಿರುವ ವಾಸ್ತುವಿದರಮೂಲಕ ಬಗೆಬಗೆಯಾದ ಪೂಜಾಸಾಮಗ್ರಿಗಳಿಂದ ಅರ್ಚನೆಯಕ್ರಮವನ್ನು ನೆರ ವೇರಿಸಿದನು, ಆಮೇಲೆ ಕಾಮುಕನು ಕಾಮಿನಿಯ ಮನವನ್ನು ಹೊಗು ವಂತೆ ರಾಜಸದನವನ್ನು ಪ್ರವೇಶಿಸಿ, ತದನಂತರದಲ್ಲಿ ಮಂತ್ರಿಗಳ ಮುಂತಾದ ಪರಿಜನರಿಗೆಲ್ಲ ಅವರವರ ಯೋಗ್ಯತಾನುಸಾರವಾದ ಭವನ ಗಳನ್ನು ಸಜ್ಜುಗೊಳಿಸಿ ಸಂಭಾವಿಸಿದನು, ಆಗಲಾ ದಿವರಾಜಧಾನಿಯುಅಂದವಾಗಿ ಅಣಿಯಾದ ದವಸಧಾನ್ಯಗಳಿಂದೊಡಗೂಡಿದ ಅಂಗಡಿಬಿ ದಿಗಳಿಂದಲೂ, ಅಶ್ವಶಾಲೆಗನ್ನಾಶ್ರಯಿಸಿರುವ ತುರಂಗಮಗಳಿಂದಲೂ, ಗಜಶಾಲೆಗಳ ಕಂಬಗಳಿಗೆ ಕಟ್ಟಿರುವ ಕರಿಗಳಿಂದಲೂ, ಸರ್ವಾಂಗಗಳ ಲ್ಲಿಯ ಅಲಂಕರಿಸಿಕೊಂಡಿರುವ ಸುಮಂಗಲಿಯಂತ ಸಂಶೋಭಿಸುತಲಿ ದ್ವಿತು. ಇಂತು ಸರ್ವಸಂಪತ್ಸಮೃದ್ಧಿಯಿಂದ ರಘುಕುಲದರಸರ ನಗರಿಯು ಪೂರ್ವದಂತೆ ರಾರಾಜಿಸುತಲಿರಲು, 'ಮೈಥಿಲೀಕುಮಾರನು - ಅಮರಾಧಿಪ ತಿಯನ್ನೂ, ಅಲಕೇಶ್ವರನನ್ನೂ ಗಣನೆವಾಡದಿದ್ದನು. ಹೀಗಿರುವಲ್ಲಿ - ಮುಕ್ತಾಮಣಿಮಯವಾದ ಉತ್ತರೀಯವನ್ನು ಹೊದೆದು, ವಿಶೇಷವಾಗಿ ಬೆಳ್ಳಗಿರುತ, ಎದೆಯಲ್ಲಿ ಜೋಲಾಡುತಲಿರುವ ಹಾರಗಳನ್ನೊಳಗೊಂಡು, ನಿಟ್ಟುಸಿರಿನ ಮಾತ್ರದಿಂದ ಅಲುಗುವಷ್ಟು ನವು ರಾದ ಬಟ್ಟೆಯನ್ನುಟ್ಟಿರುವ ಕುಶನಿಗೆ ನಾಯಕಿಯವೇಷವನ್ನು ಉಪದೇ ಶಿಸಲೆಳಸಿರುವುದೋ ಎಂಬಂತೆ ಬೇಸಗೆಯು ಬಂದಿತು. ಅಗಸ್ತ್ರಮುನಿ ಗಾಸರೆಯಾದ ಕ್ಷಣವನ್ನು ಬಿಟ್ಟು, ರವಿಯು ತನ್ನ ಕಡೆಗೆ ಬರತೊಡಗಲು