೧೧8 ಶ್ರೀ ಶಾ ರ ದಾ. [೧೬ ಮತ್ತಷ್ಟು ಅಂದನೆಂದು ಹೇಳಬೇಕಾದುದೇನು ? ಆಗಲಾ ವಿಶಾಲನಯನ ಯರಾದ ವರವರ್ಣಿನಿಯರು-ಬಂಗಾರದ ಕೊಂಬಿನಕೊಳವಿಯಲ್ಲಿ ತುಂಬಿದ ಬಣ್ಣದ ನೀರನ್ನು ಪ್ರೇಮಾತಿಶಯದಿಂದ ಕುಶನಮೇಲೆ ಚೆಲ್ಲಿದರು, ಅದರಿಂ ದಾತನು-ಗೈರಿಕಧಾತುಗಳಿಂದ ತುಂಬಿರುವ ಬೆಟ್ಟದಂತೆ ವಿಶೇಷವಾಗಿ ಬೆಳಗು ತಲಿದ್ದನು, ಮತ್ತು ಅಂತಃಪುರಸುಂದರಿಯರೊಡನೆ ಉತ್ತಮವೆನಿಸಿದ ಸರಯೂ ನದಿಯ ನಡುವೆ ಇರುವ ಕುಶನು-ಅಪ್ಪರಸ್ತ್ರೀಯರೊಡನೆ ದೇವ ಗಂಗೆಯಲ್ಲಿ ಕ್ರೀಡಾ ಸಕ್ಕನಾದ ಅಮರೇಂದ್ರನನ್ನು ಹೋಲುತಲಿದ್ದನು. - ಹೀಗಿರುವಲ್ಲಿ - ಹಿಂದೆ ರಾಮನು ಅಗಸ್ಯ ಮಹಾಮುನಿಯಿಂದ ಒಂದು ಅಮೂಲ್ಯವಾದ ಒಡವೆಯನ್ನು ಪಡೆದಿದ್ದು, ಕುಶನ ಪಟ್ಟಾಭಿಷ ಕದ ಸಮಯದೊಳಗೆ ರಾಜ್ಯದೊಂದಿಗೆ ಆ ಆಭರಣವನ್ನೂ ಈತನಿಗೆ ಕೊಟ್ಟಿದ್ದನು. ಅದುಯಾವಾಗಲೂ ಕುಶನಕರದಲ್ಲಿಯೇ ಇದ್ದಿತು. ಕ್ರೀಡಾ ಸಕನಾಗಿದ್ದ ಕುಶನಿಗೆ ಅರಿವಿಲ್ಲದೆಯೇ ಮಹಾಜಯ ಸೂಚಕವಾದ ಆ ಆಭರಣವು ನೀರಿನಲ್ಲಿ ಬಿದ್ದು ಮುಳುಗಿತು ಕುಶನೃಪತಿಯು – ತನ್ನ ಪ್ರಿಯ ಸತಿಯರೊಡನೆ ಸ್ನಾನಮಾಡಿ, ತೀರ ಕೈತಂದು ಗುಡಾರವನ್ನು ಹೊಕ್ಕ ಕೂಡಲೇ ಶೃಂಗರಿಸಿಕೊಳ್ಳುವುದಕ್ಕಿಂತಮುಂಚೆಯೇ ದಿವ್ಯಕಟಕದಿ? ಶೂನ್ಯವಾಗಿರುವ ತನ್ನ ತೋಳನ್ನು ನೋಡಿಕೊಂಡನು, ಆ ಒಡವೆಯು ಜಯಲಕ್ಷ್ಮಿಯನ್ನು ಸಂಪಾದಿಸಿ ಕೊಡತಕ್ಕದು, ಮತ್ತು -ತಂದೆಯೆ? ತನ್ನ ಕೈಗೆ ತೊಡಿಸಿದ್ದು ದು; ಈ ಕಾರಣದಿಂದ ಮಾತ್ರವೇ ಅ ಭೂಷಣವು ಕಳೆದು ಹೋದುದನ್ನು ಕುರಿತು ಕುಶನು ಕಳವಳಿಸಿದನು, ಬೇರಾವ ನಿಮಿ ತದಿಂದಲೂ ಅಲ್ಲ. ಆ ಧೀರನು ಸ್ವಾಭಾವಿಕವಾಗಿ ಆಭರಣಗಳನ್ನು ನಿರ್ಮಲ್ಯಪುಷ್ಪಗಳಂತೆ ಭಾವಿಸತಕ್ಕವನಾಗಿದ್ದನು. ಒಳಿಕ ಹೊಳೆಯೊಳಗೆ ಮುಳುಗುವುದರಲ್ಲಿ ಪಳಗಿರುವ ಜಾಲಿಕರನ್ನು ಕರೆಯಿಸಿದನು, ಆ ಆಭರಣವನ್ನು ಬೇಗನೆ ಹುಡುಕಿ ತರುವಂತೆ ಆಜ್ಞಾ ಏನಿಸಿದನು, ಆ ಬಲೆಗಾರರು ಸರಯೂನದಿಯಲ್ಲಿ ಮುಳು ಮುಳಗಿ, ನೀರಿ ನೊಳಗೆ ಜಲಗಾಡಿ, ತಮ್ಮ ಪ್ರಯತ್ನವೆಲ್ಲ ವ್ಯರ್ಥವಾದರೂ ಕಳೆಗುಂದದ ಮೊಗದ ಸೊಬಗುಳ್ಳವರಾಗಿ, ಅರಸಿನ ಬೆಳಿಗೈತಂದು ಎಲೈ ದೇವನೇ ! ಪ್ರಯತ್ನವನ್ನೇನೋ ಮಾಡಿದೆವು, ನೀರಿನಲ್ಲಿ ಮುಳುಗಿದ ಆ ನಿನ್ನ ಉತ್ತ ಮಾಭರಣವು ನಮಗೆ ದೊರೆಯಲಿಲ್ಲ, ಆದರೆ ಈ ಆಪಗೆ ಯೊಳಗಡಗಿರುವ
ಪುಟ:ರಘುಕುಲ ಚರಿತಂ.djvu/೧೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.