18 ರಜಸಿ vvvvvv • • • • • • • • • • • • +Y Y Y ಚಿಕ್ಕ ಬಾಬು ಪುನಃ, ರಜನಿ ! ಅಳುವದೇತಕ್ಕೆ ? ಎಂದನು. ನನ್ನ ಹೃದಯವು ಆನಂದದಿಂದ ತುಂಬುತ್ತ ಬಂತು, ಕಣ್ಣಿನ ನೀರು ಇನ್ನೂ ಹೆಚ್ಚಾಗಿ ಉಕ್ಕಿತು. ನಾನು ಮಾತನಾಡಲಿಲ್ಲ. ಮತ್ತೂ ಕೇಳಲಿ, ಮನಸ್ಸಿನಲ್ಲಿ, ನಾನು ಎಂತಹ ಭಾಗ್ಯವತಿ ! ಎಧಾತನು ನನ್ನನ್ನು ಅಂಧಳನ್ನಾಗಿ ಮಾಡಿದನೇ ಹೊರ್ತು ದೇವರದಯದಿಂದ ಕಿವುಡಳನ್ನಾಗಿ ಮಾಡಲಿಲ್ಲ ಎಂದು ಹೇಳಿಕೊಂಡೆ ಅವನು ಪುನಃ, ಏತಕ್ಕೆ ಅಳುತ್ತಿ ? ಯಾರಾದರೂ ಏನಾದರೂ ಹೇಳಿದರೆ ? ಎಂದು ಕೇಳಿದನು, ನಾನು ಈಸಲ ಉತ್ತರವನ್ನು ಕೊಟ್ಟೆನು-ಅವನ ಸಂಗಡ ಮಾತನಾಡುವ ಸುಖವನ್ನು ಈ ಜನ್ಮದಲ್ಲಿ ಸಿಕ್ಕಿರುವಾಗ ಏತಕ್ಕೆ ಬಿಡಬೇಕು ?-ಚಿಕ್ಕಮ್ಮನು ತಿರ ಸ್ಕಾರ ಮಾಡಿದಳೆಂದು ಹೇಳಿದೆನು, ಚಿಕ್ಕ ಬಾಬುವು ನಕ್ಕು, ಅವಳ ಮಾತನ್ನು ಮನಸ್ಸಿಗೆ ತೆಗೆದುಕೊಳ್ಳಬೇಡ ; ಅವಳ ಬಾಯಿಯೇ ಅಂತಹದು. ಆದರೆ ಅವಳ ಮನಸ್ಸು ಬಹಳ ಒಳ್ಳೇದು, ಯಾವು ದನ್ನೂ ಮನಸ್ಸಿನಲ್ಲಿಡುವುದಿಲ್ಲ. ನೀನು ನನ್ನ ಜತೇಲಿ ಬಾ, ಈ ಕೂಡಲೆ ಪುನಃ ಅವಳು ಒಳ್ಳೆ ಮಾತನಾಡುತ್ತಾಳೆ ಎಂದನು. ಅವನ ಸಂಗಡ ಹೋಗ :ರಬೇತಕ್ಕೆ ? ಅವನು ಕರೆದರೆ ಪುನಃ ಕೋಪವಳಿಯು ಇದೆ ? ನಾನೆದ್ದೆನು, ಅವನ ಜತೇಲಿ ಜೆಪೀದೆ, ಅವನು ಮೆಟ್ಟು ಹತ್ತಲಾರಂಭಿಸಿದನು, ನಾನೂ ಅವನ ತಿ ಇದೆ ಹತ್ತಿದೆ ಅವ ನೀನು ನೋಡಲ೪ರೆ, ವೆಟ್ಟು ಹತ್ತುವುದಕ್ಕೆ ಗುವುದಿಲ್ಲ. ನಾನು ಕೈ ಹಿಡಿದು ಕರೆದುಕೊಂಡು ಹೋಗುತ್ತೇನೆಂದನು. ನನ್ನ ಮೈ ಕಂಪಿತವನಿಯಿತು. ಸರ್ವ ಶರೀರವು ರೋಮಾಂಚವಾಯಿತು, ಅವನು ನನ್ನ ಕೈ ಹಿಡಿದುಕೊಂಡನು ! ಹಿಡಿಯಕೂಡದು, ಜನರು ಆಡಿಕೊಳ್ಳುತ್ತಾರೆ, ನಿಂದಿಸುತ್ತಾರೆ. ನಿಂದಿಸಿಕೊಳ್ಳಲಿ. ನನ್ನ ನಾರಿ ಜನ್ಮವು ಸತಿರ್ಧಕವಾಗಲಿ ! ನಾನು ಇತರರ ಸಹಾಯವಿಲ್ಲದೆ ಕಲಿಕತ್ತಾದಲ್ಲಿ ಸಂದಿ ಸಂದಿಯಲ್ಲಿಯೂ ತಿರುಗಬಲ್ಲೆ. ಆದರೆ ಚಿಕ್ಕಬಾಬುವನ್ನು ನಿಷೇಧಿಸಲಿಲ್ಲ. ಚಿಕ್ಕ ಬಾಬು-ಏನೆಂದು ಹೇಳಲಿ ? ಯಾವ ಹೆಸರಿ ನಿಂದ ಕರೆ ಮಲಿ ? ಸರಿಯಾದ ಮಾತೇ ಸಿಕ್ಕದು-ಚಿಕ್ಕಬಾಬು ಕೈ ಹಿಡಿದುಕೊಂಡನು. ಪ್ರಭಾತದಲ್ಲಿ ಪದ್ಮವು ಪ್ರಫುಲ್ಲವಾಗಿ ಅದರ ದಳಗಳಿಂದ ನನ್ನ ಕೈ ಸುತ್ತಿ ಹಿಡಿದುಕೊಂಡಿತೋ, ಅಥವಾ ಗುಲಾಬಿ ಹೂಗಳನ್ನು ಮಾಲೆ ಕಟ್ಟಿ ಯಾರಾದರೂ ನನ್ನ ಕೈಗೆ ಸುತ್ತಿದರೋ ಎಂಬಹಾಗೆ ತೋರಿತು ! ನನಗೆ ಇನ್ನೇನೂ ತೋರಲಿಲ್ಲ. ಆಗ ಮನಸ್ಸಿನಲ್ಲಿ ಈ ಪ್ರಾಣ ಹೊರಗೆ ಹೊರಡಲಿಲ್ಲ ವೇತಕ್ಕೆ ? ಎಂದು ಹೊಳಿಯಿತು
ಪುಟ:ರಜನೀ.djvu/೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.