ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನಯ ಚರಿತ್ವದ 18 AAAAAAAA AA AAAA Ahhhhhhhhhhhhhhhhhhhhhhhhh bhi KhttAAAAAAAA M ಕರಗಿ ನೀರಾಗಿ ಅವನೊಂದಿಗೆ ನಾನು ಸೇರಿಹೋಗಕೂಡದೆ ಎಂದು ಇಷ್ಟವುಂಟಾ ಯಿತು. ಶಚೀಂದ್ರನೂ ನಾನೂ ಸಹ ಎರಡು ಹೂಗಳಾಗಿ ಒಬ್ಬರಿಗೊಬ್ಬರು ಈರೀತಿ ಯಾಗಿ ಮುಟ್ಟಿಕೊಂಡು ಒಂದು ವನವೃಕ್ಷದ ಕೊಂಬೆಗೆ ನೇತಾಡಕೂಡದೆ ಎಂದು ಆಶೆಯುಂಟಾಯಿತು. ಇನ್ನೂ ಏನೇನೋ ಆಶೆಯುಂಟಾಯಿತು. ಜ್ಞಾಪಕವಿಲ್ಲ, ಮೆಟ್ಟು ಹತ್ತಿದಮೇಲೆ ಚಿಕ್ಕ ಬಾಬುವು ಕೈ ಬಿಟ್ಟನು, ಆಗ ನಿಟ್ಟುಸಿರು ಬಿಟ್ಟನು. ಆಗ ಪುನಃ ಪ್ರಪಂಚದ ಜ್ಞಾನವು ಬಂತು, ಅದರೊಂದಿಗೆ, ಏನುಮಾಡಿದೆ, ಪ್ರಾಣೇ ಶ್ವರ ! ತಿಳಿಯದೆ ಏನು ಮಾಡಿದೆ ! ಎಂದು ಜ್ಞಾನೋದಯವಾಯಿತು. ನೀನು ನನ್ನ ಪಾಣಿಗ್ರಹಣಮಾಡಿದೆ. ನೀನು ನನ್ನನ್ನು ಗ್ರಹಿಸಿದರೆ ಗ್ರಹಿಸು, ಇಲ್ಲದಿದ್ದರೆ ಬಿಡು. ನೀನು ನನಗೆ ಸ್ವಾಮಿ ; ನಾನು ನಿನಗೆ ಪತ್ನಿ, ಇಹಜನ್ಮದಲ್ಲಿ ಅಂಧಳಾದ ಈ ಹೂವಾ ಡಗಿತ್ತಿಗೆ ಮತ್ಯಾರ ಸ್ವಾಮಿಯಾಗಲಾರರು, ಎಂದು ಮನಸ್ಸಿನಲ್ಲಿ ಹೇಳಿಕೊಂಡೆನು. ಐದನೆಯ ಪರಿಚ್ಛೇದ. - ಚಿಕ್ಕಬಾಬು ಚಿಕ್ಕಮ್ಮನ ಬಳಿಗೆ ಬಂದು, ರಜನಿಗೆ ಏನು ಹೇಳಿದೆ ? ಎಂದು ಕೇಳಿ, ಅವಳು ಅಳುತ್ತಾಳೆಂದನು. ಚಿಕ್ಕ ತಾಯಿಯು ನನ್ನ ಕಣ್ಣುಗಳಲ್ಲಿ ನೀರನ್ನು ನೋಡಿ; ಅಪ್ರತಿಭಳಾಗಿ, ನನ್ನ ಸಂಗಡ ಒಳ್ಳೆ ಮಾತನಾಡಿ ಹತ್ತಿರ ಕೂಡಿಸಿಕೊಂಡು, ತನ್ನ ಸವತಿಯ ಮಗನ ಸಂಗಡ ನಡೆದ ಮಾತುಗಳನ್ನೆಲ್ಲಾ ಬಿಚ್ಚಿ ಹೇಳಲಾರದೆ ಹೋದಳು. ಚಿಕ್ಕಬಾಬುವು ಚಿಕ್ಕ ತಾಯಿಯು ಪ್ರಸನ್ನಳಾಗಿರುವುದನ್ನು ಕಂಡು ತನ್ನ ತಾಯಿಯ ಬಳಿಗೆ ಬೇರೆ ಕೆಲಸ ಆಗಿ ಹೊರಟುಹೋದನು. ನಾನು ಮನೆಗೆ ಬಂದುಬಿಟ್ಟೆ, ಇತ್ತ೮ಾಗಿ ಗೋಪಾಲಬಾಬುವಿಗೆ ಕೊಟ್ಟು ನನ್ನ ಮದುವೆಯ ಪ್ರಯತ್ನವು ನಡೆಯಲಾರಂಭವಾಯಿತು. ನಾನೇನು ಮಾಡಲಾಪೆ ? ಹೂ ಕಟ್ಟುವುದು ನಿಲ್ಲಿಸಿ ಬಿಟ್ಟು ಈ ಮದುವೆಯನ್ನು ಹೇಗೆ ಆಗದಹಾಗೆ ಮಾಡಲಿ ? ಎಂದು ಹಗಲೂ ರಾತ್ರಿ ಯೋಚನೆಗೆ ಪ್ರಾರಂಭಿಸಿದೆ, ಈ ವಿವಾಹದಲ್ಲಿ ತಾಯಿಗೆ ಆನಂದ ; ತಂದೆಗೆ ಉತ್ಸಾಹ; ಲವಂಗಲತೆಯ ಪ್ರಯತ್ನ, ಚಿಕ್ಕ ಬಾಬು ಘಟಕ ! ನನು ಅಂಧಳೊಬ್ಬಳು ಇದರ ಪ್ರತಿಬಂಧಕವನ್ನು ಹೇಗೆ ಮಾಡಲಿ ? ಯಾವ ಉಪಾಯವೂ ತೋರಲಿಲ್ಲ. ಹೂ ಕಟ್ಟುವುದು ನಿಂತುಹೋಯಿತು, ತಾಯಿತಂದೆಗಳು ನಾನು ವಿವಾಹ ಆನಂದದಿಂದ ವಿಹ್ವಲಚಿತ್ಥಳಾಗಿ ಮಾಲೆ ಕಟ್ಟುವುದನ್ನು ನಿಲ್ಲಿಸಿಬಿಟ್ಟನೆಂದು ತಿಳಿದುಕೊಂಡು,