ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೮೩

 ಯುವಾನ:-ಆ ಬಳಿಕ ನಿನ್ನ ಕಿರುಮನೆಗೆ ಹಾಕಿದ್ದ ಬೀಗವನ್ನು ಒಡೆದುಹಾಕಿ ಕಿರುಮನೆಯೊಳಹೊಕ್ಕು ನಿನ್ನ ಪುಸ್ತಕ, ಪೆಟ್ಟಿಗೆ, ಬಟ್ಟೆ, ಹಾಸಿಗೆ ಮೊದಲಾದುವನ್ನು ಕ್ರಮಕ್ರಮವಾಗಿ ತೆಗೆಯಿಸಿ ನೋಡುತ್ತ ಬಂದರು.

ರಮಾ:- ಏನಿದ್ದಿತು ? ಏನೇನು ಕಂಡುಬಂದಿತು ? ಯಾವಾವುದು ಸಿಕ್ಕಿತು?
ಯುವಾನ:-(ಒಣಗಿದ ತುಟಿಯನ್ನು ನಾಲಿಗೆಯಿಂದ ಸವರಿಕೊಳ್ಳುತ್ತ) ನಾನೇನನ್ನಲಿ? ರಮಾನಂದ! ನಿನ್ನ ಹಾಸಗೆಯ ಕೆಳಗೆ ಒಬ್ಬ ಹೆಂಗಸಿನ ಭಾವಚಿತ್ರವೂ, ಪುಸ್ತಕದೊಳಗೆ ಮತ್ತು ನಿನ್ನ ಕೈ ಪೆಟ್ಟಿಗೆಗಳೊಳಗೆ ಕೆಲವು ಕಾಗದಗಳೂ ಸಿಕ್ಕಿದುವು. ಅಲ್ಲದೆ ನಿನ್ನ ಹಾಸಿಗೆಯ ಹಿಂದಿರುವ ಪೆಟ್ಟಿಗೆಯಲ್ಲಿ ಕೆಲವು ಸುಂಗಧದ ಸೀಸೆಗಳೂ ಇದ್ದುವು.

ರಮಾ:- ಇದೇನೋ ಐಂದ್ರಜಾಲವೇ ಸರಿ. ದೇವರೇ ನೋಡಿ ಕೊಳ್ಳಲಿ, ಮುಂದೆ ಹೇಳು.

ಯುವಾನ:- ಆ ಮೇಲೆ ಗುರುಗಳು ಅವೆಲ್ಲವನ್ನೂ ತೆಗೆದು ತಮ್ಮ ಅಂಗಿಯ ಕಿಸೆಗೆ ಸೇರಿಸಿಟ್ಟು, ಅವರನ್ನು ಕುರಿತು-“ಸರಿ, ಈಗಲೀಗ ಸಂದೇಹವ ಅರೆಪಾಲು ಕಳೆಯಲ್ಪಟ್ಟಿತು, ಆಗಲಿ, ಈ ಒಳ ಸಂಚು ಎಷ್ಟು ದಿನಗಳಿಂದ ನಡೆಯುತ್ತಿದ್ದುವು ಗೊತ್ತುಂಟೊ  ?” ಎಂದು ಕೇಳಿದರು, ಕಳಿಂಗನು- ಅದೆಷ್ಟು ದಿನಗಳಿಂದ ನಡೆಯುತ್ತಿದ್ದುವೋ ಹೇಳಲಾರೆವು, ಆದರೆ ಈಗ ಒಂದೆರಡು ವಾರಗಳ ಹಿಂದೆ ನಾವೆಲ್ಲರೂ ಮಾತನಾಡುತ್ತಿರುವಾಗಲೇ, ರಮಾನಂದನೊಬ್ಬನೇ 20 ಅಲಂಕೃತನಾಗಿ ಠೀವಿಯಿಂದ ಮಂದಿರವನ್ನು ಬಿಟ್ಟು ಹೊರಹೊರಟನು. ಅದನ್ನು ನೋಡಿದ ನಾವು ಅದೆಲ್ಲಿಗೆ ಹೋಗುವನೋ ಪರೀಕ್ಷಿಸ ಬೇಕೆಂದು ಹಿಂದೆ ಹೊರಟೆವು. ಆತನು ಸ್ವಲ್ಪ ದೂರ ಹೋಗಿ, ಒಂದು ಸಂದಿಬೀದಿಯಲ್ಲಿ ನಮ್ಮ ಕಣ್ಣಿಗೆ ಸಿಕ್ಕದಂತ ಮರೆಯಾಗಿ ಹೊರಟು ಹೋದನು. ಅಂದಿನಿಂದ ಪ್ರತಿದಿನವೂ ರಾತ್ರಿಯ ವೇಳೆಯಲ್ಲಿ ನಾವು 25