ಈ ಪುಟವನ್ನು ಪ್ರಕಟಿಸಲಾಗಿದೆ
೮೪
ಸತೀಹಿತೈಷಿಣೀ

ಅಲ್ಲಿ ಆತನಿರುವುದನ್ನು ಕಂಡುದಿಲ್ಲ' ಎಂದರು.
ಸೌಮ್ಯ:-(ಹಲ್ಕಡಿಯುತ್ತ ರೋಷದಿಂದ ನೆಲವನ್ನು ನೋಡಿ ಪಾಪಿ ಚೆಂಡಾಲ!ಅಸಂಬದ್ಧ ಪ್ರಲಾಪಿ! ನಿನ್ನ ನಾಲಿಗೆ ಇನ್ನೂ ಸೇದಲಿಲ್ಲ ವೇಕೆ ? ಹೀಗೆಲ್ಲಾ ಅಪಲಪಿಸಿ ನೀನು ಹೊಂದುವುದೇನೆಂದು ತಿಳಿದಿರುವೆ?
ರಮಾ:-( ಶಂಕಾತಂಕದಿಂದ ) ಸೌಮ್ಯನೆ | ನನ್ನಾಣೆಯಿಟ್ಟು ಕೇಳುವೆನು, ಸುಮ್ಮನಿರು, ಅವರನ್ನೇಕೆ ಬಯ್ಯುವೆ ? ನ್ಯಾಯಾನ್ಯಾಯ ವಿಧಾಯಕನಾದ ಭಗವಂತನಿಲ್ಲವೆ ? ಚಿತ್ರಗುಪ್ತನಂತೆ ನಮ್ಮ ಪ್ರತಿ ಯೊಂದು ಕಾರ್ಯ ಕಲಾಪವನ್ನೂ ಗುರುತುಮಾಡಿಟ್ಟಿರುವ ಆತನೇ ನಮ್ಮ ಕಡೆಯ ಸಹಾಯಕನಾಗಿಲ್ಲವೆ? ಆಗಲಿ, ಆತನ ಸಂತೋಷವಿ ದ್ದ೦ತೆ ನಡೆಯಲಿ, ನಾನು ಮಾತ್ರ ನಮ್ಮ ತಾಯಿತಂದೆಗಳು ಹೇಳಿರುವ ಮಾತನ್ನು ಮೀರಿ, ಗುರುಗಳಲ್ಲಿಯೂ ರವಿವರ್ಮಾದಿಗಳಲ್ಲಿಯೂ ವಿರೋಧವಾಗಿ ನಡೆಯಲಾರೆನು. ಇದರ ಮೇಲೆ ದೇವರು ಮಾಡಿದು ದನ್ನು ಅನುಭವಿಸಲು ಸಿದ್ದನಾಗಿಯೇ ಇರುವೆನು, ಮತ್ತೇನು ?
15 ಯುವಾನ:- ಕಳಿಂಗನ ಮಾತನ್ನು ಕೇಳಿ ಗುರುಗಳು ಖತಿ ಯಿಂದ-ಭಗವಂತ ನೀನೆಷ್ಟು ನಿರ್ದಯನು? ಸಾಧುವರ್ಯನಾದ ಶ್ರೀಮಂತನಿಗೆ ಅದೆಂತಹ ಮನೋವ್ಯಾಕುಲವನ್ನುಂಟುಮಾಡಿರುತ್ತಿ ಯೆ? ಇದೇಕೆ ಹೀಗೆ ಮಾಡಿದೆ? ಎಂದು ಹೇಳಿಹೇಳುತ್ತ ವಿಕೃತ ಸ್ವರದಿಂದ-'ಎಲ್ಲಿ, ಹೋಗಿರಿ; ಈಗಲೇ ಬುದ್ದಿ ಹೀನನಾದ ರಮಾನಂದನನ್ನು ಎಲ್ಲಿದ್ದರೂ ನೋಡಿ ಎಳೆದುಕೊಂಡು ಬನ್ನಿರಿ, ಆತನ ಅಪರಾಧಗಳನ್ನು ಸಪ್ರಮಾಣವಾಗಿ ತೋರಿಸಿ ವಿಚಾರಿಸುವೆನು ಎಂದು ಕೂಗಿದರು. ಆ ಕೂಡಲೇ ರವಿವರ್ಮನು ಮೆಲ್ಲನೆ "ಗುರು ದೇವು ಕ್ಷಮಿಸಬೇಕು. ರಮಾನಂದನು ನನ್ನ ಮೇಲೆ ದ್ವೇಷವನ್ನು ಕಾರುತ್ತಿದ್ದರೂ ನಾನು ಆತನನ್ನು ದ್ವೇಷಿಸಲಾರೆನು. ಆತನು ಮಾಡುತ್ತಿರುವ ಕೆಲಸಗಳಿಗಾಗಿ ಮತ್ತು ಅವಿಧೇಯನಾಗಿ ನಮ್ಮ ಮಾತಿಗೆ