ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೮೬ ರಂಕಾಗೆ ತನತ್ತು ಸವಿಯ ನಿನಿಸುಳಿದಪುದೇ ” || ಸೌಮ್ಯ:- ಇರಬಹುದು, ಆದರೆ, ಈಗ ನೋಡು; ನಿನ್ನ ಸದುದ್ದೇಶ, ಸತ್ಕಾರ್ಯಗಳಿಗಾಗಿರುವ ಮಹತ್ಸಲವನ್ನು | ರಮಾ:- ಸೌಮ್ಯನೆ ! ಆತುರಪಟ್ಟ ಮಾತ್ರದಿಂದ ಅಕಾಲದ ಯೇ ನಾವು ಫಲವನ್ನು ಹೊ೦ದುವೆವೆ ? ಅದಕ್ಕೂ ದೈವಾನುಕೂಲ 5 ವಂಟಾದ ಮೇಲೆಯೇ ಫಲವು ದೊರೆವುದೆಂದು ಆರ್ಯರು ಹೀಗೆ ಹೇಳಿಲ್ಲವೇ ? ಕಂದ | ಅಳವಂ ಮೀರಿಬಳಲ್ಲೇ || ನೆಳಸಿದ ಕಟ್ಟಿಮನುಕೂಲ ಕಾಲದೆ ಫಲಿಕುಂ || ನಳನಳಿಸಿ ಬೆಳದೊಡಂ ತರು | ಫಳಮಂ ತಳೆದಪುದೆ ಕೈ ಕಾಲಕೆ ಮುನ್ನಂ || ಯುವಾನ:- ಅದು ಯುಕ್ತವೇ ಸರಿ. ಆದರೂ ಮನಸ್ಸು ನಿಲ್ಲು ವದು ಮಾತ್ರ ಕಷ್ಟ. ರಮ:-- ಮನಸ್ಸು ನಿಲ್ಲುವುದಿಲ್ಲ ವೆಂದು ಅದು ಹೋದಂತೆ ಬಿಡುವುದು ನಮ್ಮ ಶೀಲವಲ್ಲ, ಅದನ್ನು ನಮ್ಮ ಬುದ್ಧಿಯ ವಶದ 15 ಲ್ಲಿಟ್ಟು, ನಾವು ಜಾಗೃತರಾಗಿರಬೇಕಾದುದು ಅವಶ್ಯಕವು. ಅದಿರಲಿ, ಸುಮುಖನನ್ನು ನೀನು ನೋಡಲಿಲ್ಲ ವೇನು ? ಯುವಾನ:- ಇಲ್ಲ. ಆತನು ಎಲ್ಲಿ ರುವನೋ, ಮನೆಗೇನಾ ದರೂ ಹೋಗಿರುವನೋ ತಿಳಿಯಲಿಲ್ಲ. ರಮಾನಂದ:- ಎಲ್ಲಿದ್ದರೂ ಬಂದೇಬರುವನು ಭಗವಂತನು 20 ನಮ್ಮನ್ನು ಕೈ ಬಿಡಲಾರನೆಂಬ ಭರವಸೆ ನನಗೆ ಚೆನ್ನಾಗಿದೆ. ಇನ್ನು ನಡೆಯಿರಿ, ಮಂದಿರಕ್ಕೆ ತೆರಳುವ. ( ಮೂವರೂ ಹೊರಟು ಗಮನವನ್ನಭಿನಯಿಸಿ ಮುಂದೆ ಬರುವರು. ) ಯುವಾನ:- ರಮಾನಂದ } ಸ್ವಲ್ಪನಿ, ಯಾರೋ ಇತ್ರ ಕಡೆಗೇ ನಡೆತರುವಂತೆ ತೋರುತ್ತಿದೆ. 25