ಈ ಪುಟವನ್ನು ಪ್ರಕಟಿಸಲಾಗಿದೆ
೮೬
ಸತಿಹಿತೈಷಿಣೀ

ಯುವಾನ;- ದ್ರೋಹಿಗಳ ಸ್ವಭಾವವೇ ಹಾಗಲ್ಲವೆ ? ಅವರು ತಮಗೆ ಉಪಕಾರ ಮಾಡಿದವರನ್ನು ಕೆಡಿಸುವುದೊಂದನ್ನೇ ಬಲ್ಲ ರಲ್ಲದೆ ಮತ್ತೇನಾದರೂ ಕೃತಜ್ಞತೆಯನ್ನು ಸೂಚಿಸಬಲ್ಲ ರೋ

ಕಂದ | "ಕರುಣೆಯಿನತಿ ನೀಚರ್ಗುಪ |
ಕರಿಪುದು ನಿಷ್ಕಲಮಪಾಯ ಕರಮಪ್ಪುದು ಮೇಣ್ | ಉರಿಯಲ್ಲಿ ಬಿಳ್ದ ತೇಳಂ |
ಕರದಿಂ ಪೊರೆಗಣ್ಗೆ ತೆಗೆಯಲೋಡಮಿರಿಯದೆ ಪೇಳ್ "'| |


ಎಂಬ ನೀತಿಯನ್ನು ನೀನು ತಿಳಿದಿರುವೆಯಷ್ಟೆ ?

ಸೌಮ್ಯ:— ಅಷ್ಟೇ ಅಲ್ಲ -

ಕಂದ | "ಕುಲಜಂಗೊಡರಿಸಿದುಪಕೃತಿ |
ಶಿಲೆಯೊಳ್ ಕಂಡಕ್ಕರಂ ಬೋಲ್ ಮೆರೆಗುಂ || ಜಲದೊಳ್ ' ಬರೆದಕ್ಕರದಂ |
ತೆ ಲಯಿಪುದಾಗಳೆ ಖಳಂಗೊಡರ್ಚಿದಸಾಹ್ಯಂ ” ||


ಎಂದೂ, ಬಲ್ಲವರಾಡುವರು, ಆದುದರಿಂದಲೇ, ಕುಮಾರನನ್ನು 15 ಎಷ್ಟೋ ತಡೆದೆವು.

ರಮಾ:- (ನಿಟ್ಟುಸಿರಿಟ್ಟು) ಮಿತ್ರರೆ ! ನಿಮ್ಮ ವಿಶ್ವಾಸವು ಎಂದೆಂ ದಿಗೂ ಹೀಗೆಯೇ ದೃಢವಾಗಿರಲಿ, ನನ್ನ ಸಂಕಲ್ಪವನ್ನೂ , ಶ್ರಮ ವನ್ನೂ ಪರಮಾತ್ಮನು ಸಾರ್ಥಕಗೊಳಿಸಲಿ, ಆತನ ಸಹಾಯವೊಂದಿ ದ್ದರೆ, ಇಂತಹ ವಿಚಾರಗಳಿಗೆ ಮನಸ್ಸನ್ನು ಬಲಿಕೊಟ್ಟು ಕರ್ತವ್ಯ 20 ವನ್ನು ಮಾತ್ರ ಬಿಡುವವನಲ್ಲ ವೆಂದು ತಿಳಿಯಿರಿ, ಏಕೆಂಬಿರೋ, ಮಹ ನೀಯರು ತಮಗೆ ಸಂಕಟವುಂಟಾಯಿತೆಂದು ಕರ್ತವ್ಯವನ್ನು ಹೇಗೂ ಬಿಡಲಾರರು, ಹೇಗೆಂದರೆ, ಕೇಳಿರಿ_

ಕಂದ || ಸಂಕಟಮಡಸಿರ್ದೊಡಮಕ |
ಳಂಕರ್ ನಿಜಸುಗುಣ ಲೇಶಮುಮನುಳಿದಸರೇಂ | 25
ಸಂಕಂ ಸುಡಬೆಳ್ಪಂ ಕೀ |

5