ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೯೩

ವಿಷಾದವನ್ನು ಹೊಂದಿರುವರು. ಅವರ ವ್ಯಕ್ತತೆಯನ್ನು ನೋಡಿ ಸಹಿಸಲಾರದೆ ಸಂಗತಿಯೇನೆಂಬುದನ್ನು ತಿಳಿಯಲು ನಿನ್ನ ನ್ನು ಕರೆಯಿಸಿದೆನು. ಇನ್ನು ಮುಂದಿನ ವಿಚಾರವು ಅವರನ್ನೇ ಸೇರಿರುವುದು, ಈ ರಾತ್ರಿಯೆಲ್ಲಾ ಹೀಗೆಯೇ ಕಳೆಯುತ್ತಿದ್ದರೆ, ದೇಹಾಯಾಸವು ಬಲವಾಗುವುದು, ನೀನಿನ್ನು ಹೋಗಿ ಮಲಗು."
ರಮಾ:- ಮಲಗುವುದೆಲ್ಲಿ? ಮಿಥ್ಯಾ ಪವಾದಗ್ರಸ್ತನಾಗಿರುವ ವನು ತನ್ನ ನಿಷ್ಕಲ್ಮಷ ಹೃದಯವನ್ನು ಸ್ಪಷ್ಟ ಪಡಿಸುವವರೆಗೂ ಆತನಿಗೆ ಆಹಾರ ನಿದ್ರೆಗಳಾದರೂ ರುಚಿಸುವುದೇ? ತಾಯಿ! ನನ್ನ ಈ ದೈನ್ಯ ಪ್ರಾರ್ಥನೆಗಳನ್ನು ಗುರುಸನ್ನಿಧಿಗೆ ನಿವೇದಿಸಬೇಕು. ಇನ್ನು ನಾನು. ಅಪ್ಪಣೆಯನ್ನು ತೆಗೆದುಕೊಳ್ಳುವೆನು.

( ರಮಾನಂದನು ಹೊರಟು ಹೋಗುವನು. )

ಗುರುಪತ್ನಿ:- ಹೇ, ಜಗಜ್ಜನನೀ ಅನುಗ್ರಹಿಸು, ಇಂತಹ ಸುಗುಣ-ಚಿಂತಾಮಣಿಗಳಾದ ವಿದ್ಯಾರ್ಥಿಗಳನ್ನು ಈ ರೀತಿಯಾದ ಸಂಕಟಕ್ಕೆ ಗುರಿಪಡಿಸುವುದು ಸರಿಯಲ್ಲ, ಅದು ನಿನಗೆ ತಿಳಿಯದುದಲ್ಲವಾಗಿ, ರಮಾನಂದನ ದಿಗ್ವಿಜಯಕ್ಕೆ ಈಗ ನೀನೇ ಬೆಂಬಲವಾಗಿ ನಿಲ್ಲಬೇಕಲ್ಲದೆ, ಮತ್ತಾರೂ ನಿಲ್ಲುವವರಿಲ್ಲ, ಇನ್ನು ನಿನ್ನ ಇಷ್ಟ.'

(ಎಂದು ಎದ್ದು ಹೊರಡುವಳು.)


ಪ್ರಾರ್ಥನೆ .

ರಾಗ - ನೋಟ್.
(ಕಾಯೈ ದೇವಕಿತನಯ.)

ಕಾಯೆ ಶ್ರೀರಮಾ ದೇವಿಯೆ ಸದಾ।ತೋಯಜಾಂಬಕಿಯೆ ಭಯವ-ಬಿಡಿಸಿ-ಭರದಿಂದ ॥ ಕಾಯೆ ॥ ಪ॥.

ಕ್ಷೀರಾಂಬೋ ನಿಧಿತನಯೆ ಪೊರೆ। ಮಾರನಯ್ಯ ನರಸಿಕರುಣಾ-ವೆರಸೀ ನಲವಿಂದ ॥ ಕಾಯೆ