ಈ ಪುಟವನ್ನು ಪರಿಶೀಲಿಸಲಾಗಿಲ್ಲ.

QQo ಸತೀಹಿತೈಷಿಣೀ ಯಲ್ಲಿರಿಸಿದ್ದ ಕಾಗದವನ್ನು ನೋಡಿ ಮತ್ತೂ ಸಡಗರದಿಂದ ಮೇಲೆ ನೋಡಿ)'ಭಲೆ! ಕುಹಕpಾಜ, ಭಭಲೆ11 ಗಟ್ಟಿ ಗ, ನೀನೇ ಬಲು ಗಟ್ಟಿಗನು. ಆದರೆ ನೋಡು... ನಿನ್ನ ಗತಿಗಾದ ಫಲವನ್ನು.” (ತಾರಣನನ್ನು ನೋಡಿ) 'ತಾರಣಕೇಳು, ಇದೇ ಉಪಾಧ್ಯಾಯರ ಅಂಗುಲೀಯಕವು, ಅದೇ 5 ರವಿವರ್ಮನು ಮಧುಕರಿಗೆ ಬರೆದ ಪತ್ರವ, ಇದರಲ್ಲಿ ರುವುದನ್ನು ಕೇಳು, ಹೇಳುವೆನು, ( ಈ ರಾತ್ರಿ ನಿನ್ನಲ್ಲಿಗೆ ಕಳಿಂಗನ ಕೈಯಲ್ಲಿ ಒಂದು ಹಸ್ತಾಭರಣವನ್ನೂ, ಮತ್ತು ಅಂಗುಲಿಯಕವನ್ನೂ ಕಳುಹಿ ರುವೆನು. ಇ೦ದಿಗೆ ರಮಾನಂದನೆಂಬ ಹೆಸರಿನ ಕಂಟಕವು ಪರಿಹಾರ ವಾಗಿ, ನಮ್ಮ ಸುಖದ ದಾರಿಯು ನಿಷ್ಕಂಟಕವೆನ್ನಿಸಿತೆಂದು ತಿಳಿ. 1೧ ಇವನ್ನು ಸ್ವೀಕರಿಸಿ, ಇನ್ನು ಮುಂದೆ ನಮ್ಮ ವಿಷಯದಲ್ಲಿ ಸಂಪೂರ್ಣ ಕೃಪೆಯನ್ನು ತೋರಿಸಬೇಕಲ್ಲದೆ, ಮುಂದಿನ ನಮ್ಮ ಸಮಸ್ತ ಸುಖ ಸಂಪತ್ತಿಗೂ ಆಶ್ರಯಳಾಗಿರಬೇಕೆಂದು ಕೇಳಿಕೊಳ್ಳುವೆನು.” ಎ೦ದು ಬರೆದಿರುವನು. ಇನ್ನು ಸಾಕು, ನಮ್ಮ ಕಾರ್ಯಸಿದ್ಧಿಗೆ ಬೇಕಾದ ಸಾಕ್ಷ್ಯವೆಲ್ಲವೂ ಇಲ್ಲಿ ಯೇ ದೊರೆತಿವೆ. ಇನ್ನು ನಡೆ, ಮನೆಗೆ ಹೋಗಿ, 15 ಸುಮುಖನ ಆಗಮನವನ್ನು ನಿರೀಕ್ಷಿಸುವ, ( ಇಬ್ಬರೂ ಹೊರಡುವರು. ) (ಬಳಿಕ ವಿದ್ಯಾಶಾಲೆಯ ಮುಂದೆ ಸತ್ಯಸೇನನ ಪ್ರವೇಶ.) ಸತ್ಯ:-(ವಿಸ್ಮಯದಿಂದ) : ಆಹಾ! ಗುರುವಿಗೇ ಮಂತ್ರವನ್ನು ಪ್ರ ಯೋಗಿಸುವ ಮಾಯಾವಿಯು ಮತ್ತಾರಿಗೆ ಬಿಡುವನು? ವಿದ್ಯಾಶಾಲೆ ಯಲ್ಲಿಯೇ ಇಂತಹ ಮೋಸವ್ಯಾಪಾರವು ನಡೆದುಹೋಗಿರುವಲ್ಲಿ, 89 ಉಳಿದ ಸ್ಥಳದಲ್ಲಿ ಹೇಳಿಕೊಳ್ಳುವದೇನು? ಆಹಾ! ಎಂತಹ ಅದ್ಭುತ ವಾದ ಕೆಲಸವು ನಡೆದುಹೋಗಿದೆ? ಇದಕ್ಕೆ ಕಾರಣರಾರು? ಕಾರ್ಯ ಕಾರಿಗಳಾರು? ಹೇಗೆ ತಿಳಿಯಬೇಕು? (ಸ್ವಲ್ಪ ಹೊತ್ತು ಚಿಂತಿಸುತ್ತಿದ್ದು ಮೇಲೆ ನೋಡಿ) ಹೇಗಾದರೂ ಇರಲಿ; ಈಗ ನಡೆಯುವ ವಿಚಾರಣೆಯಲ್ಲಿ ನಿಜಾಂಶವೂ ಹೊರಬೀಳಬಹುದು. ಆಗಲಿ, ಮೊದಲು ಗುರುಗಳನ್ನು 25 ಕಾಣುವೆನು.