ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೦೧

ಸ್ನಾನ ೨:-ವಿದ್ಯಾಶಾಲೆ

(ಪೀಠಸ್ಥನಾದ ಗುರುವಿನ ಪ್ರದೇಶ. )

ಸತ್ಯ:- (ಮುಂದೆಬಂದು) ಪೂಜ್ಯ! ಎಲ್ಲರನ್ನು ಕರೆದುಬಂದಿ ರುವೆನು, ರಮಾನಂದನು ಮಾತ್ರ ಗೋಚರನಾಗಿಲ್ಲ. ಉಳಿದವರೆಲ್ಲರೂ ಬರುವೆವೆಂದು ಹೊರಟಿದ್ದರು,

ಉಪಾಧ್ಯಾಯ:- ಅವನೇ ಸಿಕ್ಕಲಿಲ್ಲವೆ? ನೋಡು; ಸರ್ವ ಪ್ರ ಯತ್ನ ದಿಂದಲೂ ಆತನನ್ನು ಹುಡಿಕಿ, ಕರೆತರಬೇಕು.

ಕ್ಷೇಮ:- “ನೋಡುವೆನು'
(ಹೋಗುವನು)

(ರವಿವರ್ಮ, ನಳ, ಕಳಿಂಗ ಸೌಮ್ಯ, ಸುಮುಖ, ಯುವಾನರ ಪ್ರವೇಶ.)
ಎಲ್ಲ ರೂ:-(ಮುಂದೆ ಬಂದು ಕೈಮುಗಿದು) : ಪೂಜ್ಯರಿಗೆ ವಂದನೆ.'
ಉಪಾ:-(ತಲೆದೂಗಿ) 'ಹೂಂ ! ನಿಯತಸ್ಯಾನದಲ್ಲಿ ನಿಲ್ಲಿರಿ.'

(ಎಲ್ಲರೂ ಸರಿಯಾಗಿ ನಿಲ್ಲುವರು.)


ಉಪಾ:- ಸೌಮ್ಯನೆ ರಮಾನ೦ದನೆಲ್ಲಿ ? ಏಕೆ ಬರಲಿಲ್ಲ ?
ಸೌಮ್ಯ:- ಈ ದಿನ ಪ್ರಾತ:ಕಾಲದಿಂದಲೂ ಅವನ ಸುಳಿವೇ ಇಲ್ಲ.
ಉಪಾ:- ನಿನ್ನೆ ರಾತ್ರಿ ಎಲ್ಲಿದ್ದೇನು ?
ಸೌಮ್ಯ :- ಅರ್ಧ ರಾತ್ರಿಯವರೆಗೆ ತೋಟದಲ್ಲಿದ್ದು, ಆ ಬಳಿಕ ತಮ್ಮ ದೇವಿಯರು ಬರಹೇಳಿದುದರಿಂದ, ಅವರನ್ನು ನೋಡಲು ಹೋದನು, ಮತ್ತೆ ಬಂದು ಮುಂದಿರದಲ್ಲಿಯೇ ಮಲಗಿರಬೇಕು.
ಉಪಾ:- ಸತ್ಯವಾಗಿ ಹೇಳುತ್ತಿರುವಿಯೊ ?
ಸೌಮ್ಯ:- ಸಪ್ರಮಾಣವಾಗಿ ಸತ್ಯವನ್ನೇ ಹೇಳುವೆನು.
ಉಪಾ:- ನಮ್ಮ ಮನೆಯಿಂದ ಹೊರಟುಬಂದ ಬಳಿಕಾಗಲೀ, ಅಲ್ಲಿಗೆ ಬರುವುದಕ್ಕೆ ಮೊದಲಾಗಲೀ ಮತ್ತೆಲ್ಲಿಗೂ ಗೂ ಹೋಗಿರಲಿ ಲ್ಲವೇ ?
ಸೌಮ್ಯ:-ಮತ್ತೆಲ್ಲಿಗೂ ಹೋಗಿರಲಿಲ್ಲ ವೆಂದು ಹೇಳಬಲ್ಲೆನು.