II
ವಿದ್ಯಾಭ್ಯಾಸದ ನಿಜವಾದ ಇಚ್ಛಿತಫಲವನ್ನು ಹೊಂದಬೇಕಾದರೆ ಗುರುಕುಲವಾಸದಿಂದ ತನ್ನ ಬಾಲ್ಯ ಮತ್ತು ತಾರುಣ್ಯ-ಇವೆರಡು ಅಂತರಗಳನ್ನೂ ತಕ್ಕಮಟ್ಟಿಗೆ ವ್ಯವಸ್ಥೆಗೊಳಿಸಿ, ಆ ವಿಧದ ಬ್ರಹ್ಮಚರ್ಯೆಯಿಂದ ಮನಸ್ಸನ್ನು ಬುದ್ಧಿಯ ವಶದಲ್ಲಿರಿಸಿ, ಜಿತೇಂದ್ರಿಯನೆನ್ನಿಸಬೇಕಾದುದೇ ಅತ್ಯಾವಶ್ಯಕವು, ಇದಕ್ಕೆ ವಿರಹ, ವಿಹಾರ, ಸ್ತ್ರೀ ವರ್ಣನೆ, ವನವರ್ಣನೆ ಮೊದಲಾದ ಶೃಂಗಾರವಿಲಾಸಗಳು ಪ್ರತಿಬಂಧಕಗಳಾದುದರಿಂದ, ರಮಾನಂದಾಭಿಧಾನ ಪ್ರಬಂಧವು, ವಿದ್ಯಾರ್ಥಿವರ್ಗಕ್ಕೆ, ಮುಖ್ಯವಾಗಿ ವಿದ್ಯಾರ್ಧಿಗಳನ್ನು ಉತ್ತಮ ಶಿಕ್ಷಣೆಯಿಂದ ಸುಸ್ಪಿತಿಗೆ ತರಬೇಕಾದ ಗುರುಜನರ ಮಂಡಲಿಗೆ ಉಪಹಾರವಾಗಿ ಒಪ್ಪಿಸಬೇಕೆಂಬ ಸಂಕಲ್ಪದಿಂದ ಮೇಲಿನ ಮನೋವಿಕಲ್ಪ ಹೇತುಗಳಾದ ವಿಚಾರಗಳಾವುವನ್ನೂ ಇದರಲ್ಲಿ ಕೊಡಲಿಲ್ಲ. ಹಾಗೂ ಕೇವಲ ಕಾದಂಬರಿ ರೂಪದಲ್ಲಿ ವಿಷಯ ವಿಚಾರಗಳನ್ನು ಪ್ರತಿವಾದಿಸುವುದರಿಂದ, ನಮ್ಮ ಬಾಲಕರ ಮನಸ್ಸಿಗೆ ಸುಲಭವಾಗಿ ಬೋಧೆಯಾಗುವುದಿಲ್ಲವೆಂದೆಣಿಸಿ, ಈ ಬಗೆಯ ನಾಟಕರೂಪದಲ್ಲಿ, ಕೇವಲ ಗದ್ಯಾನುವಾದದಲ್ಲಿ ಮಾತ್ರವೇ ರಚಿಸಿರುವುದಲ್ಲದೆ, ಅಭಿನಯಕ್ಕೆಂದು ಬರೆದುದಲ್ಲ.
೨. ಇನ್ನು ರಮಾನಂದನಲ್ಲಿ ವಿನಯಶೀಲತೆಯು ವಿಶೇಷವಾಗಿರಬೇಕಾಗಿತ್ತೆಂದು ಹೇಳುವ ಆಕ್ಷೇಪಕ್ಕೆ ಸಮಾಧಾನವೆಂದರೆ, ಕೇವಲ ಬೂದಿಮುಚ್ಚಿದ ಕೆಂಡದಂತೆ ಮನವನ್ನು ಹಿಡಿದು ನಡೆವುದು ಈ ಕಾಲದಲ್ಲಿ ಅಷ್ಟಾಗಿ ಸಹಜವೆನ್ನಿಸಲಾರದು. ಏಕೆಂದರೆ, ಎಷ್ಟೇ ವಿದ್ಯಾವಂತರಾಗಿದ್ದರೂ, ಬಾಯಿ೦ದೇನನ್ನೂ ಹೇಳದೆ, ಅರಿಯದವರಂತಿರುವುದು ಬಹು ಪ್ರಯಾಸ. ಈಗಿನ ಸ್ಥಿತಿಯಲ್ಲಿ ತಮ್ಮ ಘನತೆಯಲ್ಲಿ ಅಲ್ಪ ಸ್ವಲ್ಪವಾದರೂ, ಎಂದರೆ ಕಾವ್ಯ-ಕರಣ-ಕಲಾಪಗಳಲ್ಲಿ ಯಾವುದರಿಂದಲೇ ಆಗಲಿ, ಹೇಗಾದರೂ ಪ್ರದರ್ಶನವಾಗದಂತೆ ಅಡಗಿಸಿಕೊಂಡಿರಲು ಆಗುವುದಿಲ್ಲ. ಸುತ್ತಮುತ್ತಲಿನ ಬಗೆಯನ್ನು ನೋಡಿ ಹೇಗಾದರೂ ಅದನ್ನು ಹೊರಗೆಡಹಲೇ ಬೇಕಾಗುತ್ತದೆ, ಹಾಗೂ ವಸ್ತು ವಿಚಾರದಲ್ಲಿ, ನ್ಯಾಯ ವಿಮರ್ಶೆಯಲ್ಲಿ ಪ್ರಮತ್ತರನ್ನು ಪರಿಪಕ್ವಸ್ಥಿತಿಗೆ ತರಬೇಕೆಂಬ ಬಲವತ್ಪ್ರಯತ್ನದಲ್ಲಿ ತಕ್ಕಂತೆ ತಮ್ಮ ಪಾಜಾಳಕತ್ರ, ನಿಸ್ಪೃಹತೆ, ಆಧ್ಯತೆಗಳನ್ನು ಪ್ರದರ್ಶಿಸದೆ ಬಿಟ್ಟರೆ, ಉದ್ದೇಶಸಿದ್ಧಿಯಾಗುವುದೂ ಕಷ್ಟ. ಈ ಕಾರಣದಿಂದಲೇ ರಮಾನಂದನು ಸಮಯಾನುಸಾರವಾಗಿ ತನ್ನ ಸ್ಥಿರತೆ ಧೈರ್ಯ, ಸಾಹಸಾದಿ ಬುದ್ಧಿಸಂಪನ್ನತೆಯನ್ನು ತಕ್ಕಷ್ಟು ಪ್ರದರ್ಶಿಸಲೇಬೇಕಾಯಿತು. ಇಷ್ಟು ಮಾತ್ರಕ್ಕೆ ರಮಾನಂ