ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೦೫

ಪ್ರವೇಶಿಸುವನು,
ಉಪಾ:-(ಕೈ ನೀಡಿ, ಕ್ಷೇಮದರ್ಶಿಯ ಕೈಹಿಡಿದು, ಸಮೀಪದಲ್ಲಿದ್ದ ಪೀಠ ದಲ್ಲಿ ಕುಳ್ಳಿರಿಸಿಕೊಂಡು) ಸುಬ್ರಾಹ್ಮಣ ! ಸುಖಾಗಮನವಷ್ಟೆ
ಕ್ಷೇಮ:- (ರವಿವರ್ಮನನ್ನು ನೋಡಿ, ತಲೆದೂಗಿ, ಮುಗುಳುನಗೆಯಿಂದ) ಸಾಧುವರೇಣ್ಯ! ದುರಾಚಾರಪರರ ದ್ರೋಹಗಳನ್ನು ಕಂಡುಹಿಡಿದು, 5 ಕೃತಕಾರ್ಯನಾಗಿ ಬಂದಿರುವ ನನಗೆ, ತಮ್ಮ ಆಶೀರ್ವಾದ ಮತ್ತು ಭಗವದನುಗ್ರಹದಿಂದ ಸುಖಾಗಮನವೇ ಸರಿ.
(ಸೌಮ್ಯಾದಿಗಳು ಸಂತೋಷದಿಂದ ಕ್ಷೇಮದರ್ಶಿಯನ್ನೇ ನೋಡುವರು.)
ಉಪಾ :-(ಕುತೂಹಲದಿಂದ) ದ್ರೋಹವಾವುದು ? ದುರಾಚಾರಿಗ೪ಾರು?
10ಕ್ಷೇಮ:-- ಆರ್ಯ | ಮೊದಲು ನನ್ನಲ್ಲಿಗೆ ಸತ್ಯಸೇನನನ್ನು ಅಟ್ಟಿ ದುದಕ್ಕೆ ಉದ್ದೇಶವೇನೆಂಬುದನ್ನು ನಿರೂಪಿಸಬೇಕು
ಉಪಾ:- ರಮಾನಂದನ ನಡೆ, ನುಡಿ (ಶೀಲಸ್ವಭಾವ) ಗಳಲ್ಲಿ ಉಂಟಾಗಿರುವ ಸಂಶಯ......
ಕ್ಷೇಮ:-( ಅಷ್ಟಕ್ಕೇ ತಡೆದು) ಏನು ಏನು ರಮಾನಂದನಲ್ಲಿಯೂ ಸಂಶಯವೇ? ತಪನನಲ್ಲಿಯೂ ಕೃಪಣತೆಯೇ?
ಉಪಾ:-ಸ೦ದೇಹಕ್ಕೆ ಸಾಕಷ್ಟು ನಿದರ್ಶನಗಳು ದೊರೆತಿವೆ. ಇದೋ ನೋಡು; ಈ ಪತ್ರಗಳಿಂದಲೇ ಎಲ್ಲವೂ ತಿಳಿದು ಬರುವುವು. (ಮುಂದಿದ್ದ ಪತ್ರಗಳನ್ನು ಕ್ಷೇಮದರ್ಶಿಯ ಕೈಯ್ಗೆ ಕೊಡುವನು.)
ಕ್ಷೇಮ:-(ಪತ್ರಗಳನ್ನು ಒಮ್ಮೆ ನೋಡಿ ತಲೆದೂಗಿ ನಕ್ಕು) ಇದರಿಂದಲೇ ರಮಾನಂದನನ್ನು ದುರ್ವೃತ್ತನೆಂದು ಹೇಗೆ ಹೇಳಬಹುದು?
ಉಪಾ:-ಆತನು ಸದ್ವೃತ್ತನೇ ಆಗಿದ್ದರೆ, ಆತನ ಪೆಟ್ಟಿಗೆಯಲ್ಲಿ ಈ ಪತ್ರಗಳೂ, ಮತ್ತೊಂದು ಚಿತ್ರಪಟವೂ ಇರಲಿಕ್ಕೆ ಕಾರಣವೇನು?
ಕ್ಷೇಮ :- (ಪರಿಹಾಸದಿಂದ ನಕ್ಕು ) ರಮಾನಂದನು ವಿಚಾರ ವಿಮರ್ಶೆಯಲ್ಲಿ ಕುಳಿತಿದ್ದಾಗ ಸುಳಿವಾಗದಂತೆ ಆತನ ಪುಸ್ತಕವನ್ನು ಕದ್ದೋ 25