ಯ್ಯುವವರಿಗೆ ಆತನ ಪರೋಕ್ಷದಲ್ಲಿ, ಬೇರೆ ಬೀಗದ ಕೈಗಳಿಂದ ಆತನ ಕಿರುಮನೆಯಲ್ಲಿದ್ದ ಪೆಟ್ಟಿಗೆಗಳಲ್ಲಿ ಇವನ್ನು ಅಡಗಿಸಬಾರದೇಕೆ? ಅಲ್ಲವೇ ಕಳಿಂಗ!
ಕಳಿಂಗ:- ಹೇಗೆ? ಅಷ್ಟು ಧೈರ್ಯ ಸಾಹಸಗಳು ಯಾರಿಗುಂಟು?
ಕ್ಷೇಮ:-ಮತ್ತಾರಿಗೂ ಇಲ್ಲ, ಹಿಂದೆಮುಂದೆ ನೋಡದೆ, ಅನ್ಯರ ಮೇಲೆ ಆರೋಪಿಸುವುದಕ್ಕೂ, ಅನ್ಯರ ಹೆಸರಿನಲ್ಲಿ ಅಲ್ಲದ, ಸಲ್ಲದ ಸುಳ್ಳು ಕಾಗದಗಳನ್ನು ಹುಟ್ಟಿಸುವುದಕ್ಕೂ, ಗುರುವಿಗೇ ನಾಮ ವಿಡುವುದಕ್ಕೂ ಯಾರು ಧೈರ್ಯ ಸಾಹಸಗಳನ್ನುಳ್ಳವರೋ, ಅವರೇ ಇದಕ್ಕೂ ಶಕ್ತರು.
ಉಪಾ:- ಇದೆಲ್ಲವನ್ನೂ ಹೇಗೆ ತಿಳಿದೆ?
ಕ್ಷೇಮ:- ಹೇಗೆಂದರೆ—ತಿಳಿದೇ ಇದೆಯಷ್ಟೆ; 'ಕಳ್ಳನ ಜಾಡೆ ಕಳ್ಳನಿಗರಿವು.'
ಉಪಾ:-ಏನು ಏನು! ನೀನೇ ಪತ್ತೇದಾರನೇ?
ಕ್ಷೇಮ:-ದುರಹಂಕಾರಿಗಳಾದ ರವಿವರ್ಮಾದಿಗಳ ಗರ್ವಭಂಗಕ್ಕೆ ಮತ್ತಾರು ನಿಲ್ಲಬೇಕು? ನನಗಲ್ಲದೆ ಮತ್ತಾರಿಗೆ, ಇವರ ಒಳಗುಟ್ಟು ತಿಳಿಯುವುದು?
ಉಪಾ:- ಏನು? ಇವರ ಒಳಗುಟ್ಟು ಬೇರೆ ಇದೆಯೆ?
ಕ್ಷೇಮ: ಮತ್ತೆ ಹೇಗೆ? ವೃಶ್ಚಿಕ ಸರ್ಪಗಳು ವಿಷವನ್ನು ಒಂದೇ ಬಾರಿಗೆ ಹೊರಗೆ ಚೆಲ್ಲುವವೆ? ಅಂತರಂಗದಲ್ಲಿ ಅಡಗಿಸಿಕೊಂಡಿದ್ದೇ ಜನವನ್ನು ಕೊಲ್ಲುವುವಲ್ಲವೆ?
ಉಪ:-ಹಾಗಾದರೆ ರಮಾನಂದನು ನಿರ್ದೋಷಿಯೆಂದು ಹೇಳಬಲ್ಲಿಯಾ?
ಕ್ಷೇಮ:-ನಾನೇಕೆ ಹೇಳಲಿ? ದ್ರೋಹಿಗಳ ಬಾಯಿಂದಲೇ ಹೊರಡಿಸಿ, ಅವನನ್ನು ಜಗತ್ತೇ ಹೊಗಳುವಂತೆ ಮಾಡುವೆನು, ಅಷ್ಟೆ!
ಪುಟ:ರಮಾನಂದ.djvu/೧೨೫
ಈ ಪುಟವನ್ನು ಪ್ರಕಟಿಸಲಾಗಿದೆ
೧೦೬
ಸತೀಹಿತೈಷಿಣೀ