ತ್ವದ ನಿಜಸ್ವರೂಪವನ್ನು ನಾನು ಚೆನ್ನಾಗಿ ತಿಳಿದಿರುವೆನು, ಹೇಗೂ ನೀವು ಅದನ್ನು ಬೈತಿಡಲಾರಿರಿ, ಈಗಲಾದರೂ ಹೇಳಿರಿ, ನಾಟಕಸಕತಿ ಸಭಾಧ್ಯಕ್ಷನಿಗೆ ನೀವು ರಮಾನಂದನ ಹೆಸರಿನಲ್ಲಿ ಬರೆದು ಕಳಿಸಿದ್ದುದೇನೆಂದು?
ರವಿ:- ನಾವು ಬರೆದುದೆಲ್ಲಿ ? ಕಂಡವರಾರು ? ಇವೆಲ್ಲಿಯ
ಆರೋಪಗಳು?
ಕ್ಷೇಮ:- ಪಾಪ! ಎಲ್ಲವೂ ಆರೋಪಗಳು, ಇರಲಿ, ಬರೆದವರು ನೀವೇ, ನೋಡಿದವನು ನಾನೇ.
ಉಪಾ-:ಅಯ್ಯ! ಇದಕ್ಕೆ ಸಾಕ್ಷ್ಯವೇನಾದರೂ ಇರುವುದೇ?
ಕ್ಷೇಮ:- ಇವರ ಮತ್ತು ಮಧುಕರಿಯ ಕೈ ಪೆಟ್ಟಿಗೆಗಳನ್ನೇ ತಂದು ಮುಂದಿಟ್ಟರೆ ಸಾಕಷ್ಟೇ !” (ತೆರೆಯಕಡೆ ನೋಡಿ) - ತಾರಣ ! ಪೆಟ್ಟಿಗೆಗಳನ್ನು ತೆಗೆದುಕೊಂಡು ಬಾ.'
(ಕಾರಣನು ಪೆಟ್ಟಿಗೆಗಳನ್ನು ತೆಗೆದುಕೊಂಡು ಬಂದು ಮುಂದಿಡುವನು. ರವಿವರ್ಮಾ ದಿಗಳು ನಿಸ್ತೇಜರಾಗಿ ತಲೆವಾಗಿ ನಿಲ್ಲುವರು)
ಕ್ಷೇಮ:-(ಎದ್ದು ನಿಂತು, ಪೆಟ್ಟಿಗೆಗಳ ಕದವನ್ನು ತೆಗೆದು ಕ್ರಮಕ್ರಮ ವಾಗಿ ಅದರಲ್ಲಿದ್ದ ಕಾಗದಗಳನ್ನು ತೆಗೆದು, ಉಪಾಧ್ಯಾಯನ ಮುಂದಿದ್ದ ಮೇಜಿನ ಮೇಲಿರಿಸಿ) ಪೂಜ್ಯನೆ! ಪರಾಮರ್ಶಿಸಬೇಕು. ಇದೇ ರವಿವರ್ಮನ ಪೆಟ್ಟಿಗೆ ಮತ್ತು ಅದರಲ್ಲಿದ್ದ ಮಧುಕರಿಯ ಪ್ರೇಮಪತ್ರಿಕೆಗಳು. ಇದೇ ಕಳಿಂಗನ ಕೈಪೆಟ್ಟಿಗೆ; ಅದರಲ್ಲಿದ್ದ ಇವನ ಇತರ ಸಹಚರರ ಮತ್ತು ಮಧುಕರಿಯ ಪತ್ರಗಳು, ಇದೇ ನಳನ ಪೆಟ್ಟಿಗೆ. ಇದರಲ್ಲಿ ಅಷ್ಟೇನೂ ಮಹತ್ವವಿರುವದಿಲ್ಲ. ಇದೇ ಈಗ ನಮಗೆ ಬೇಕಾಗಿರುವ ಮಧುಕರಿಯ ಕೈ ಪೆಟ್ಟಿಗೆ !ಇದರಲ್ಲಿ ಯೇ, ರವಿವರ್ಮನು ಮಧುಕರಿಗೆ ಬರೆದಿದ್ದ ಪ್ರಾರ್ಥನೆ, ವಾಗ್ದಾನ, ಅಭಿನಂದನ, ದುರ್ಬೋಧನ ಮೊದ
ಲಾದ ದುರ್ವಿಷಯಗಳನ್ನು ಅಡಗಿಸಿಕೊಂಡಿರುವ ಪತ್ರಿಕೆಗಳಿರುವುವು. ಇವೆಲ್ಲವನ್ನೂ ಅವಲೋಕಿಸಿದರೆ ಇವರ ಸದ್ವೃತ್ತಿಗಳು ವಿದಿತವಾಗು
ಪುಟ:ರಮಾನಂದ.djvu/೧೨೭
ಈ ಪುಟವನ್ನು ಪ್ರಕಟಿಸಲಾಗಿದೆ
೧೦೮
ಸತೀಹಿತೈಷಿಣೀ,