ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೦೭

ಉಪಾ:-(ಆತುರದಿಂದ) 'ಹಾಗಿದ್ದರೆ, ವಿಳಂಬವೇಕೆ? ಈಗಲೇ ತೋರಿಸು: ರಮಾನಂದನ ಸತ್ಯಸಂಧತೆಯನ್ನು ಸಪ್ರಮಾಣವಾಗಿ ಪ್ರಸಿದ್ಧಪಡಿಸು.'
ಕ್ಷೇಮ:- ಇಷ್ಟೇಕೆ ಆತುರಪಡುವಿರಿ? ಸಾವಧಾನದಿಂದ ಪರಾಮರ್ಶಿಸಬೇಕು.' (ಪಕ್ಕಕ್ಕೆ ತಿರುಗಿ) " ಏನಯ್ಯ ರವಿವರ್ಮ! ಈಗ 5 ಹೇಳು; ರಮಾನಂದನ ಪೆಟ್ಟಿಗೆ, ಹಾಸಿಗೆಗಳಿಗೆ ಮಧುಕರಿಯ ಪತ್ರವೂ ಭಾವಚಿತ್ರವೂ ಹೇಗೆ ಸೇರಿದುವು?
ರವಿ:-ನಾವೇನನ್ನು ಹೇಳಬಲ್ಲೆವು? ತಿಳಿಯದ ವಿಷಯವನ್ನು ಕೇಳಿದರೆ ಉತ್ತರವನ್ನು ಕೊಡುವದು ಹೇಗೆ?
ಕ್ಷೇಮ:- ನಿಜನಿಜ? ನೀವೇನನ್ನೂ ತಿಳಿಯಿರಿ, ಬೆಕ್ಕು ಕಣ್ಣು 10 ಮುಚ್ಚಿ ಕೊಂಡೇ ಹಾಲನ್ನು ಕುಡಿಯುತ್ತದೆ. ಯಾರಿಗೂ ಗೊತ್ತಾಗುವುದೇ ಇಲ್ಲ, ಪಾಪ ಆಗಲಿ; ಮಧುಕರಿಗೆ ನೀವು ಕಾಗದಗಳನ್ನು ಬರೆಯುತ್ತಿದ್ದುದು ನಿಜವಷ್ಟೆ?
ರವಿ:-ಹಾಗಂದರೇನು? ಅವಳಿಗೆ ನಾನೇಕೆ ಬರೆಯುವೆವು? ಎಲ್ಲಿ ಬರೆದಿರುವೆವು?
ಕ್ಷೇಮ:- ಏಕೆ ಬರೆಯಬೇಕೊ, ಎಲ್ಲಿ ಬರೆದಿರೋ ಮುಂದೆ ಗೊತ್ತಾದೀತು, ಅದೂ ಹಾಗಿರಲಿ, ಮಧುಕರಿಯು ನಿಮಗೆ ಬರೆಯುತಿದ್ದುದಾದರೂ ನಿಜವಷ್ಟೇ?
ರವಿ:— ಎಲ್ಲವೂ ಸುಳ್ಳು.
ಕ್ಷೇಮ:-ಸುಳ್ಳೇ ಆಗಲಿ, ಮಧುಕರಿಗೆ ನೀವೇನೊ ವಾಗ್ದಾನ ಮಾಡಿರುವಿರಿ, ಅದರಂತೆ ತಕ್ಕಷ್ಟು ಅನುಕೂಲಪಡಿಸುತ್ತಲೂ ಇರುತ್ತೀರಿ. ಅಲ್ಲವೆ? ಕಳಿಂಗ! ನೀನು ಹೇಳು.
ಕಳಿಂಗ:- ಎಲ್ಲವೂ ಸುಳ್ಳು. ನಮಗಾಗದವರು ಯಾರೋ ಹೀಗೆ ಆರೋಪಿಸಿರಬೇಕು. ನಾವು ನಿರಪರಾಧಿಗಳು.
ಕ್ಷೇಮ:- ನಿಜ! ನೀವು ನಿರಪರಾಧಿಗಳು, ನಿಮ್ಮ ನಿರಪರಾಧಿ