ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೧೭

ಸನ್ನಿ ಧಾನದಲ್ಲಿ ಸವಿನಯವಾಗಿ ಪ್ರಾರ್ಥಿಸುತ್ತಿರುವ ಬಾಲಕ, ರಮಾನಂದ,"
ಉಪಾಧ್ಯಾಯ:• ' ( ಎದ್ದು ನಿಂತು ಸಂಭ್ರಮದಿಂದ ) ಭಾಪು || ಭಾಪು!! ಸುಕುಮಾರನೆ! ಭಾಪು !!! ನೀನೇ ಸತ್ಪುತ್ರನು, ನೀನೇ ನಿಜವಾದ ವಿದ್ಯಾರ್ಥಿಯು, ನೀನೇ ಸನ್ಮಿತ್ರನು ; ನೈಜಸೋದರನು: ಕುಲರಂಜನನು (ಸುಮುಖನ ಕಡೆಗೆ ತಿರುಗಿ) : ಅಯ್ಯ ! ಇದೇ ಪತ್ರವನ್ನೆ ರವಿವರ್ಮನಿಗೆ ತೋರಿಸಿ, ಆತನನ್ನೂ ನಯನೀತಿಗಳಿಂದ ಸಮಾಧಾನಪಡಿಸಿ, ನೀನು ಅವರನ್ನು ಕರೆದುಕೊಂಡು ಬಾ, ನಾನಿನ್ನು ನನ್ನ ಪತ್ನಿಗೆ ಇ೦ದಿನ ಶುಭವಾರ್ತೆಯನ್ನು ತಿಳಿಸಿ, ಆಕೆಯೊಡಗೊ೦ಡು ಉತ್ಸವಕ್ಕೆ ನಡೆತರುವೆನು.

(ಇಬ್ಬರೂ ಹೊರಡುವರು )

ಸ್ನಾನ ೨:- ಕಲ್ಯಾಣ ಮಂಟಪ.

(ಕ್ಷೇಮದರ್ಶಿ ಮತ್ತು ಸಾಮಾಜಿಕರೊಡನೆ ಪೀರಸ್ಪನಾದ ಶ್ರೀಮಂತನ ಪ್ರವೇಶ. )
ಶ್ರೀಮ೦ತ:-- ಆರ್ಯನೆ! ನಿನ್ನ ಕಾರ್ಯದಕ್ಷತೆಯಿಂದ ನನ್ನ ಶೋಕಾ೦ಧಕಾರವು ನಿವಾರಣೆಯಾಯಿತು, ಆತ್ಮಾನಂದಕ್ಕೆ ಸಾಧನವೂ ಮಾಡಲ್ಪಟ್ಟಿತು. ಇನ್ನು ಭಗವಂತನು ರವಿವರ್ಮನನ್ನ ದಾರಿಗೆ ಬರುವಂತೆ ಮಾಡಿದರೆ, ನನ್ನ ಅದೃಷ್ಟಕ್ಕೆ ತುದಿಮೊದಲೇ ಇಲ್ಲವು.
ಕ್ಷೇಮ:-ಭಗವತ್‌ಕೃಪೆಯು ಪರಿಪೂರ್ಣವಾಗಿರುವುದು, ರವಿವರ್ಮ ಕುಮಾರನೂ ಸನ್ಮಾರ್ಗಗಾಮಿ'ಯಾಗುವನು, ಸಂದೇಹವಿಲ್ಲ.
ಸೌಮ್ಯ:-(ಪ್ರವೇಶಿಸಿ) ಗುರುಗಳು ಪತ್ನಿ ಸಮೇತರಾಗಿ ಬಂದು ಅಂತಃಪುರದ ಬಳಿಯಲ್ಲಿ ದೇವಿಯವರ ಆತಿಥ್ಯವನ್ನು ಸ್ವೀಕರಿಸುತ್ತಿರುವರು.
ಶ್ರೀಮ೦ತ:-ಹಾಗಿದ್ದರೆ ಪೂಜ್ಯರನ್ನು ಇಲ್ಲಿಗೆ ಬರಬೇಕೆಂದು ತಿಳಿಸಿ, ನೀನು ಕುಮಾರನನ್ನು ಜಾಗ್ರತೆಯಾಗಿ ಕರೆದುಕೊಂಡು ಬಾ.

[ಸೌಮ್ಯನು ಹೊರಟುಹೋಗುವನು]