ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಸತೀಹಿತೈಷಿಣೀ ವಿದ್ಯಾ ವಾಗೀಶನ ಪ್ರವೇ ಶ ) ಶ್ರೀಮತಿ:- ಸಾಧುವರೇಣ್ಯರಿಗೆ ಸುಖಾಗಮನವ; ವಿಶ್ರಮಿ ಸಿಕೊಳ್ಳಬೇಕಾಗಿ ಕೋರಿಕೆ. ವಿದ್ಯಾ:- (ಪೀರದಲ್ಲಿ ಕುಳಿತು, ಅಯ್ಯ, ರಮಾನಂದನನ್ನು ಪುತ್ರ 5 ನನ್ನಾಗಿ ಪಡೆದ ನೀನೇ ಸುಕೃತಶಾಲಿ, ರವಿವರ್ಮನಿಗಾಗಿ ನೀನು ದುಃಖಿಸಬೇಕಾಗಿಲ್ಲ, ರಮಾನಂದನ ಸೌಶೀಲ್ಯಕ್ಕೆ ತಕ್ಕ ಫಲವಾಗಿ ರುವ ವಿಜಯಾಭ್ಯುದಯದಿಂದಲೂ, ಆತನ ಕ್ಷಮಾಗುಣದಿ೦ದಲೂ, ರವಿವರ್ಮನು ಈಗಲೀಗ ಪರಿಪಕ್ವಸ್ಥಿತಿಗೆ ಬಂದಿರುವನು. ಆತನನ್ನು ಆತನ ದುಷ್ಕಾರ್ಯಕ್ಕಾಗಿ ಬಂಧನದಲ್ಲಿರಿಸಿದ್ದೆನಾದರೂ ರಮಾನಂದನ 10 ಉಚ್ಛ ಭಾವನೆಗೆ ವಿರೋಧವಾಗಿ ನಡೆಯಿಸಲಾರದೆ ಅವನನ್ನು ಅವನ ಸಂಗಡಿಗರೊಡನೆ ಇಲ್ಲಿಗೆ ಕರೆತರುವಂತೆ ಸುಮುಖನಿಗೆ ಹೇಳಿ ಬಂದಿ ರುವೆನು. ಇಷ್ಟರಲ್ಲಿ ಅವರೂ ಬರಬಹುದು, ಎಲ್ಲಿ ? ರಮಾನಂದ ನೆಲ್ಲಿ ? ( ರಮಾನಂದನ ಕೆ ಎಂ ದು ರವಿವರ್ಮ ಸುಮುಖರೂ, ಹಿಂದೆ ಮುಂದೆ ಯುವಾನ್, ಸೌಮ್ಮ , ನಳ, ಕಳಿಂಗರೂ ಪ್ರವೇತಿಸುವರು.) ಕ್ಷೇಮ:- (ಸಂಭ್ರಮದಿಂದ) ಈಗಲೀಗ ನಮ್ಮ ಪ್ರಭುವು ಪುತ್ರ ವಂತನೆನ್ನಿ ಸಿದನು. ಬನ್ನಿರಿ, ಕುಮಾರ ಶೇಖರರೆ ! ಇತ್ತ ಒಂದು ಗುರು ಜನರನ್ನು ವಂದಿಸಿರಿ. - ರವಿ:- (ಮುಂದೆಬಂದು ವಿದ್ಯಾವಾಗೀಶ, ಶ್ರೀಮಂತ, ಕ್ಷೇಮದರ್ಶಿಗಳ 20 ಮುಂದೆ ದೀರ್ಘ ಪ್ರಣಾಮ ಮಾಡಿ, ವಿನಯದಿಂದ) ಪೂಜ್ಯ ಪಾದರಿಗೆ ಮಹಾಪ ರಾಧಿಯಾದ ಈ ಅಧಮುನು ಇದೇ ವಂದಿಸುವನು. ಕೃಪಾಕಟಾಕ್ಷ ದಿಂದ ಕ್ಷಮಿಸಿ, ಅನುಗ್ರಹಿಸಬೇಕು. ಶ್ರೀಮಂತ:- (ಕಣ್ಣೀರು ಸುರಿಸುತ್ತ) ವತ್ರನೆ ನಿನಗೆ ಇಷ್ಟರ ಪ್ರಜ್ಞೆಯುಂಟಾಗುವುದೆಂದು ತಿಳಿದಿರಲಿಲ್ಲ. ಇದೆಲ್ಲವೂ ಭಗವತಿಯ 25 ಅನುಗ್ರಹವ, ಈಗಲೀಗ ನಿನ್ನ ತಾಯಿಯು ನಿಶ್ಚಿಂತಳಾದಳು. ದೇವರು