ಹೇಗೆ ತಪ್ಪಿಸುವುದು?
ಸೂತ್ರ:- ನಟರಾಜ! ಅದನ್ನು ಯಾರೇ ಆಗಲಿ ಹತ್ತಿರಕ್ಕಾದರೂ ಸೇರಿಸುವುದು ಸರಿಯಲ್ಲ. ಮದ್ಯ ಸೇವನೆಯಿಂದ ಅವರ ಮಿದುಳಿನಲ್ಲಿ ಮತ್ತು ಅವರ ಹೃತ್ಕೋಶದಲ್ಲಿರುವ ಸಿಗ್ಧರಸವೇ ಮಾಯವಾಗಿ, ಅನೇಕ ದುರ್ವಿಷಯಗಳು ಅಂಕುರವಾಗುವುವು, ದೇಶಹಿತೈಷಿಗಳು ಅಂತಹ ತಾಮಸವೃತ್ತಿಯನ್ನು ಹಿಡಿಯದೆ, ಯಾವಾಗಲೂ ಸಾತ್ವಿಕವೃತ್ತಿಯನ್ನೇ ಅವಲಂಬಿಸಬೇಕು, ಸಾತ್ವಿಕವೃತ್ತಿಗೆ ಸಾಕಾಹಾರವೇಬೇಕು, ದುರಾಚಾರ, ಅಪೇಯಪಾನ, ದುರಿಷಯಚಿಂತನೆಗಳು ಸರ್ವಥಾ ಕೂಡದು
ನಟ:- ಹಾಗಾದರೆ, ಅವರ ಮನೋಲ್ಲಾಸಕ್ಕೂ, ಶಕ್ತಿವೃದ್ಧಿಗೂ ಸ್ವತ್ತೇಜನಕ್ಕೂ ಯಾವ ಅನುದಾನವನ್ನು ವಿಧಿಸಬೇಕು? -
ಸೂತ್ರ:- ನಟರಾಜ! ಕೇಳು, ನಮ್ಮ ಪೂರ್ವಜರು ಯಾವ ಸೂತ್ರವನ್ನು ಮುಂದಿಟ್ಟು ಕೊಂಡು ನಡೆಯುತ್ತಿದ್ದರೂ, ಅದನ್ನೇ ನಾವೂ ಅನುಸರಿಸಬೇಕಲ್ಲದೆ, ನಮ್ಮ ಜನ್ಮಭೂಮಿಗೂ, ದೇಹದರ್ಮಕ್ಕೂ ಮತ್ತು ನಮ್ಮ ಮತಾಚಾರ-ಪೂರ್ವಸಂಪ್ರದಾಯಗಳಿಗೂ ಹಾನಿಯನ್ನುಂಟು ಮಾಡುವ ಪಾಶ್ಚಾತ್ಯ ಪದ್ಧತಿಯನ್ನು ಹಿಡಿಯುವುದು ಸರಿಯಲ್ಲ. ಹಾಗೆ ನಮ್ಮ ನಾಟ್ಯ ವರ್ಗದವರು ಸೇವಿಸಬೇಕಾದರೆ, ಸಕ್ಕರೆ-ಕೇಸರಿಗಳಿಂದ ಕೂಡಿದ ಗೋಕ್ಷೀರವನ್ನೇ ಸೇವಿಸಲಿ, ಗೋಕ್ಷೀರಕ್ಕೂ ಮಿಗಿಲಾದ ಪಾನವೂ, ಆಹಾರವೂ ಮತ್ತೊ೦ದಿರುವದಿಲ್ಲ. ಅದರಿಂದ ಎಳೆಮಿದುಳಿಗೆ ಮತ್ತಷ್ಟು ರಸವಿಷಯವಿಜ್ಞಾನವು ಸುರಿಸುವದಲ್ಲದೆ, ಮನಸ್ಸು ಶಾಂತಸ್ಥಿತಿಯಲ್ಲಿದ್ದು, ಪ್ರತಿಯೊಂದು ಕೆಲಸವನ್ನೂ ಜಾಗರೂಕತೆಯಿಂದ ನಿರ್ವಹಿಸಿ, ಸತ್ಸಹವಾಸ-ನಾರಾಸಾರ ವಿಚಾರಗಳಿ೦ದ ಅರ್ಥಸಿದ್ಧಿ ಹೊಂದುವಂತೆ ಮಾಡುವುದು.
ತೆರೆಯಲ್ಲಿ: “ಸಾಧು! ಭರತಾಬಾರ್ಯನೆ! ಸಾಧುಸಾಧು!! ನಿನ್ನೀ ಉಪದೇಶಾಮೃತವರ್ಷವು ಸಕಲ ಜನಾಂಗಕ್ಕೂ ಜ್ಞಾನವನ್ನುಂಟುಮಾಡು ವುದಾಗಿದ್ದರೆ, ಆಗ