ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೧

 ವಿದ್ಯಾ- ಬಂದುದೇನು ?
ಕ್ಷೇಮ:- ಶ್ರೀಮಂತನ ಆಜ್ಞಾನುವರ್ತಿಯಾಗಿ ಬಂದಿರುವೆನು.
ವಿದ್ಯಾ :- ಉದ್ದೇಶವೇನು ?
ಕ್ಷೇಮ:- “ ಮಕ್ಕಳಿಗೆ ತಂದೆ ಬಾಲ್ಯದೊಳಕ್ಕರ ವಿದ್ಯೆಗಳ ನರುಪದಿರ್ದೊಡೆ ಕೊಂದಂ ” ಎಂಬ ನಾಣ್ನುಡಿಯುಂಟಷ್ಟೆ?
ವಿದ್ಯಾ :- ಮತ್ತೇನು ?
ಕ್ಷೇಮ:- ಶ್ರೀಮಂತನಿಗೆ ರಮಾನಂದನೆಂಬ ಕುಮಾರನಿರು ವನು.
ವಿದ್ಯಾ :- (ತಲೆದೂಗಿ) ಅಭಿಪ್ರಾಯವಾಯಿತು. ಸಂತೋಷ !
ಕ್ಷೇಮ:- ಹಾಗಿದ್ದರೆ, ದರ್ಶನಾಕಾಂಕ್ಷಿಯಾಗಿರುವ ಶ್ರೀಮಂತ 10 ನಲ್ಲಿ ಅನುಗ್ರಹಿಸಬೇಕೆಂದು ಕೋರುವೆನು.
ವಿದ್ಯಾ :- ಅಗತ್ಯವಾಗಿಯೂ ಆಗಲಿ, ಮತ್ತೇನು ?
ಕ್ಷೇಮ:- ಆತುರನಾಗಿರುವ ಶ್ರೀಮಂತನಲ್ಲಿ ಗೆ ಹೊರಡಲು ಈಗಲೇ ಸುಮುಹೂರ್ತವಾಗಿದೆ.
ವಿದ್ಯಾ:- (ಎದ್ದುನಿಂತು) ಹಾಗಿದ್ದರೆ ಹೊರಡಬಹುದು; ನನ್ನ 15 ತಡೆಯಿಲ್ಲ. (ಕ್ಷೇಮದರ್ಶಿಯು ವಿದ್ಯಾವಾಗೀಶನೊಡನೆ ಹೊರಡುವನು.)
ಸಾ ನ ೨:-ಶ್ರೀಮಂತನ ಮಂತ್ರಾಲಯ.
( ಮಂತ್ರಾಲಯದಲ್ಲಿ ಕರಣಿಕನೊಡನೆ ಶ್ರೀಮಂತನ ಪ್ರವೇಶ.)
ಶ್ರೀಮಂತ:- ಅಯ್ಯ, ವಿನಯಂಧರ ಸಮಾಚಾರವೇನು? 20
ವಿನಯಂ:- ಮಹಾಸ್ವಾಮಿ ! ತಮ್ಮ ಮೈದುನರ ಪತ್ರವು ಬಂದಿದೆ.
ಶ್ರೀಮಂತ:→ ವಿಚಾರವೇನಿರಬಹುದೋ ವಾಚಿಸು.
ವಿನಯಂ:- (ಕಾಗದವನ್ನು ಬಿಚ್ಚಿ ಓದುವನು.)

( ಪೂಜ್ಯರಾದ ಶ್ರೀಮಂತರ ಸಮ್ಮುಖದಲ್ಲಿ, ವಿಧೇಯನಾದ 25