ಅಸದ್ವೃಕ್ತಿಗೆ ಮುಂದೆ ಒದಗಬಹುದಾದ ಅಲಂಫ್ಯಫಲಾನುಭವವನ್ನು ಕುರಿತು, ತಾಯಿತಂದೆಗಳ ಹೃದಯದಲ್ಲಿ ಸಹಿಸಲಾಗದಷ್ಟು ಕ್ಲೇಶವುಂಟಾಗುವುದು. ಕ್ಲೇಶವು ಹೆಚ್ಚಿದಷ್ಟೂ ವಿಶ್ವಾಸವು ಅಂತಸ್ಥವಾಗುತ್ತ ಬಂದು, ಆ ಮಕ್ಕಳನ್ನು ದಾರಿಗೆ ತರಬೇಕೆಂಬ ಆಕಾಂಕ್ಷೆಯಿಂದ ಪ್ರಬಲಪ್ರಯತ್ನವನ್ನು ಹಿಡಿಯಬೇಕಾಗುವುದು. ಹಾಗೆ ಹಿಡಿಯುವ ಪ್ರಯತ್ನದಿಂದ ಮಕ್ಕಳ ವಿಚಾರದಲ್ಲಿ ತಮ್ಮ ಸಂಪೂರ್ಣ ಸ್ವಾತಂತ್ರ್ಯ , ದರ್ಪ, ಕಾಠಿಣ್ಯಗಳನ್ನು ಕಾಲಕ್ಕೆ ತಕ್ಕಂತೆ ಉಪಯೋಗಿಸುತ್ತ ಬರ್ ಬೇಕಾದೀತು, ಈ ಮರ್ಮವನ್ನು ತಿಳಿಯದೆ, ತಮ್ಮ ಮಕ್ಕಳಲ್ಲಿ ತಾವೇ ಪಕ್ಷಪಾತಬುದ್ಧಿಯುಳ್ಳವರಾಗಿರುವರೆಂಬ ಅಪವಾದವ, ಪಾಪು ತಾಯಿ ತಂದೆಗಳ ತಲೆಯ ಮೇಲೆ ಬೀಳುತ್ತಿರುವುದು, ಈಗಲಾದರೂ ತಿಳಿಯಿತೆ?
ರವಿ:- ಅಮ್ಮ ! ಹೋಗಲಿ; ರಮಾನ೦ದನೇ ನಿಮ್ಮ ಮೆಚ್ಚಿಕೆಗೆ ತಕ್ಕ ಮಗನಾಗಿರಲಿ: ಸಂತೋಷ, ನಾನು ನಿಮ್ಮ ಉದಾಸೀನಕ್ಕೆ
ಕಾರಣನಾಗಿದ್ದ ಮಾತ್ರದಿಂದ ಕೊರತೆಯೇನು ? ನೀವು ನನ್ನನ್ನು ಉಪೇಕ್ಷಿಸಿ ಹೊಡೆದಟ್ಟಿದರೂ, ನಾನು ನಿಮ್ಮನ್ನು ಬಿಟ್ಟು, ಅನ್ಯರ
ಆಶ್ರಯದಲ್ಲಿರಲಾರನು; ಇದು ನಿಜ!
ವಸು:- ಅಪ್ಪ ! ಇನ್ನೂ ನಿನ್ನ ಮನಸ್ಸಿನ ಸಂಶಯ-ಕ್ಲೇಶಗಳು ಹೋಗಲಿಲ್ಲವೇ ರಮಾನಂದನ ವಿಷಯದಲ್ಲಿ ನಿನಗಿಷ್ಟರ ಅಸಮಾಧಾನವಿರಬಾರದು, ನೀನು ನನಗೆ ಹಿರಿಯ ಮಗನು; ರಮಾನಂದನಿಗೆ ದೊಡ್ಡವನು. ಹೀಗಿರುವ ನೀನು ನಮಗೂ, ನಮ್ಮ ಮನೆತನಕ್ಕೂ, ನಮ್ಮ ನೆಂಟರಿಷ್ಟರಿಗೂ ಆಜ್ಞಾದಾಯಕನಾದ ಮಗನೆನ್ನಿಸುವುದು ನಿನ್ನ ಕರ್ತವ್ಯವೆಂದೇಕೆ ತಿಳಿಯಲಿಲ್ಲ ? ಹಿರಿಯನ ಚಾಳಿ ಕಿರಿಯನಿಗೆ' ಎಂಬ ನಾಣ್ಣುಡಿಯಂತೆ ನಿನ್ನ ನಡೆನುಡಿಯನ್ನೇ ನಿನ್ನ ಸಹಜಾನುಜರೂ ಅನುಸರಿಸಬೇಕಾಗಿರುವಲ್ಲಿ, ಅವರನ್ನು ವಿದ್ಯಾಬುದ್ದಿಗಳಲ್ಲಿ ಸುಶಿಕ್ಷಿತರನ್ನಾಗಿ ಮಾಡುವ ಪಾಂಡಿತ್ಯವು, ನಿನ್ನಲ್ಲಿರಬೇಕು