ಈ ಪುಟವನ್ನು ಪ್ರಕಟಿಸಲಾಗಿದೆ

ರಮಾನಂದ

೨೧

ವಿಲ್ಲ. ರಮಾನಂದಕುಮಾರನಲ್ಲಿಯಾದರೂ ನೀವು ನನ್ನಲ್ಲಿ ತೋರುವ ಉಪೇಕ್ಷೆಯನ್ನು ತೋರಿಸದೆ, ಪೂರ್ಣಾಭಿಮಾನವನ್ನಿಟ್ಟಿರುವುದಕ್ಕಾಗಿ ಸಂತೋಷಿಸುತ್ತೇನೆ.

ವಸು:- ಸುಕುಮಾರ! ನೀನು ಹಾಗೆ ಹೇಳುವುದು ಸರಿಯಲ್ಲ. ಹೆತ್ತಮಕ್ಕಳಲ್ಲಿ ಪಕ್ಷಪಾತವನ್ನು ತೋರುವದು, ತಾಯಿ-ತಂದೆಗಳ ಶೀಲವಲ್ಲ. ಅವರ ಪ್ರೀತಿಯು ಮಕ್ಕಳೆಲ್ಲರಲ್ಲಿಯೂ ಒಂದೇ ಬಗೆಯದಾಗಿರುವುದು.

ರವಿ:- (ತಲೆದೂಗುತ್ತ ವ್ಯಂಗಸ್ವರದಿಂದ) ಅಮ್ಮ! ಅದು ಸುಳ್ಳು ಮಾತು; ನಾನು ಅದನ್ನು ನಂಬಲಾರೆನು, ಏಕೆಂದರೆ, ಈಗ ನೋಡಿರಿ; ರಮಾನಂದನೂ ನಿಮ್ಮ ಮಗನು; ನಾನೂ ನಿಮ್ಮ ಮಗನು. ರಮಾನಂದನ ವಿಷಯದಲ್ಲಿ ನಿಮ್ಮಿಬ್ಬರ ಪ್ರೇಮಾತಿಶಯವೂ ಅದರಿಂದ ಇತರರು ತೋರುವ ಗೌರವವೂ ಎಷ್ಟರಮಟ್ಟಿಗಿರುವುದೆಂಬುದನ್ನೂ, ನನ್ನ ವಿಚಾರವಾಗಿ ನಿಮಗಿರುವ ಆಗ್ರಹ, ಉದಾಸೀನಗಳೂ ಅದರಿಂದ ಇತರರು ತೋರುತ್ತಿರುವ ಅಗೌರವವೂ ಎಷ್ಟಿರಬಹುದೆಂಬುದನ್ನೂ ಚೆನ್ನಾಗಿ ವಿಚಾರಮಾಡಿ ನೋಡಿ ಹೇಳಿರಿ! ಹಾಗಾದುದೇಕೆ? ನನ್ನ ದುರದೃಷ್ಟ ಫಲವೊ? ಇಲ್ಲವೆ ನಿಮ್ಮ ಪಕ್ಷಪಾತವೋ? ಯಾವುದು?

ವಸು:- (ನಿಟ್ಟುಸಿರಿಟ್ಟು) ಮಗುವೆ, ನಿನ್ನ ಈ ವಿಕಲ್ಪವು ಸಾಧುವಾಗಿಲ್ಲ, ಹೆತ್ತವರ ವಿಶ್ವಾಸವು ಮಕ್ಕಳೆಲ್ಲರಲ್ಲಿಯೂ ಒಂದೇ ಬಗೆಯದಾಗಿರುವುದು, ಆದರೆ ಅದು ಮಕ್ಕಳ ವಿನಯ, ಸತ್ಯ, ಕ್ಷಮಾ, ಉದ್ಯಮಶೀಲತೆಗಳ ಮೇಲಿಂದ ಪ್ರಕಾಶಕ್ಕೆ ಬರುವುದು, ಮಕ್ಕಳಲ್ಲಿ ಆ ಗುಣಗಳು ಎಷ್ಟು ಹೆಚ್ಚುತ್ತ ಬರುವುವೋ, ಅಷ್ಟೂ ತಾಯಿತಂದೆಗಳ ಆಂತರಂಗದಲ್ಲಿರುವ ವಿಶ್ವಾಸವು ಹೊರಹೊಮ್ಮಿ, ಆ ಮಕ್ಕಳ ವಿಚಾರದಲ್ಲಿ ಅದೊಂದು ಬಗೆಯ ಗೌರವವುಂಟಾಗುವುದು, ಹಾಗೆಯೇ, ಮಕ್ಕಳಲ್ಲಿ ಅವಿಧೇಯತೆ, ಆಲಸ್ಯ, ಉದಾಸೀನ, ವಿಷಯಾತುರ, ಚೌರ್ಯ, ಪರದೂಷಣೆ, ದ್ವೇಷಾಸೂಯೆಗಳೇ ಉಂಟಾಗಿದ್ದರೆ, ಅವರ