ಈ ಪುಟವನ್ನು ಪ್ರಕಟಿಸಲಾಗಿದೆ
೨೮
ಸತೀಹಿತೈಷಿಣೀ

(ಮಹಾಮಹೋಪಾಧ್ಯಾಯನೊಡನೆ ಶ್ರೀಮಂತನ ಪ್ರವೇಶ. )
ಶ್ರೀಮಂತ:-(ಮುಂದೆ ಬಂದು) ದೇವಿ! ಮಹನೀಯರ ಸುಖ ಗಮನದಿಂದ ನಾವೆಲ್ಲ ರೂ ಪವಿತ್ರರಾದೆವೆಂದೇ ಭಾವಿಸಬೇಕು. ಮೊದಲು ಈ ಪೂಜ್ಯರಿಗೆ ನಮಸ್ಕರಿಸು.
ವಸು:-(ತಲೆಬಾಗಿ) ಪೂಜ್ಯರಿಗೆ ವಂದನೆ.
ವಿದ್ಯಾ:-ಶುಭಾಂಗಿ ಭಗವಂತನು ನಿತ್ಯ ಕಲ್ಯಾಣವನ್ನು೦ಟು ಮಾಡಲಿ. ವಸು:-ತಪೋನಿಷ್ಠರಾದ ತಮ್ಮ ಅನುಗ್ರಹ ಬಲದಿಂದ ಎಲ್ಲವೂ ಸಿದ್ಧಿಸುವುದೆಂದೇ ನಂಬಿರುವೆನು. ವಿದ್ಯಾ:- ತಾಯಿ! ನಿನ್ನ ಈಗಿನ ಬೋಧನೆ, ಶಿಕ್ಷಣ, ವಿಚಾರ ವಿಮರ್ಶೆಗಳೆಲ್ಲವೂ ಉಚಿತ ರೀತಿ-ನೀತಿಗಳಲ್ಲಿ ನಡೆಸಲ್ಪಟ್ಟುದನ್ನು ನೋಡಿ, ನನಗಾದ ಸಂತೋಷವು ಅಪಾರವಾಗಿದೆ. ನಿನ್ನಂತೆಯೇ ಇತರ ಸೋದರಿಯರೆಲ್ಲರೂ ತಮ್ಮ ತಮ್ಮ ಮಕ್ಕಳ ಪೋಷಣೆ, ಶಿಕ್ಷಣ, ವಿಚಾರಣೆಗಳಲ್ಲಿ ಸಂಪೂರ್ಣ ಶ್ರದ್ಧೆಯನ್ನು ವಹಿಸುವುದಾದರೆ, ನಮ್ಮ ಈ ಮಾತೃಭೂಮಿಯಲ್ಲಿ ದಾರಿದ್ರ, ರೋಗ, ಭಯ, ಸಂತಾಪಗಳೊ೦ದೂ ನಿಲ್ಲುವುದಿಲ್ಲ ವೆಂದು ಧೈರ್ಯದಿಂದ ಸಾರಿಸಾರಿ ಹೇಳ ಬಲ್ಲೆನು, ಹಾಗಾಗಲು ಇನ್ನೆಷ್ಟು ಕಾಲದವರೆಗೆ ನಿರೀಕ್ಷಿಸಬೇಕೊ— ತಿಳಿಯದು, ಹೇಗೂ ನೀನು ಸತೀಕುಲಾದರ್ಶ ಮಹಿಳೆಯಾಗಿದ್ದು, ಸತ್ಪುತ್ರವತಿಯೆನ್ನಿಸಿರುವುದಕ್ಕಾಗಿ ಅಭಿನಂದಿಸುತ್ತಿರುವೆನು!
ವಸು:-ಪೂಜ್ಯರೆ! ಈ ಸ್ತುತಿಗೆ ಪಾತ್ರರಾದವರು ನಮ್ಮ ಪತಿ ರಾಜರಲ್ಲದೆ ನಾನಲ್ಲ: ನಾನು ನನ್ನ ಕರ್ತವ್ಯದಲ್ಲಿ ಅಲ್ಪಾಂಶವನ್ನು ಮಾತ್ರವೇ ಅದನ್ನೂ ಪತಿರಾಜರ ಅನುಗ್ರಹ ಬಲದಿಂದ ನಡೆಸುತ್ತಿರು ವೆನು, ಅದರಲ್ಲಿಯೂ ಕೃತಾರ್ಥಳಾಗಿರುವೆನೆಂದು ಹೇಳಲಾರೆನು!
ವಿದ್ಯಾ:-(ಸಂತೋಷದಿಂದ) ಹಾಗೆ ಹೇಳುವುದೇ ಹೆಂಗಸರಿಗೆ ಉಚಿತವು, (ಶ್ರೀಮಂತನಕಡೆಗೆ ತಿರುಗಿ)- " ಅಯ ಲೋಕಯಾತ್ರೆಗೆ ಸಹ