ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ SF ಚಾರಿಣೀ ಸಖಿಯಾದ ಇಂತಹ ಸಹಧರ್ಮಿಣಿಯನ್ನು ಹೊಂದಿರುವ ನೀನೇ ಸುಕೃತಶಾಲಿ.” - ಶ್ರೀಮಂತ:-(ವಿನಯದಿಂದ) ಎಲ್ಲ ವೂ ತಮ್ಮಂತಹ ಹಿರಿಯರ ಆಶೀರ್ವಾ ದಿಂದಾದುದು, (ವಸುಮತಿಯ ಕಡೆಗೆ ತಿರುಗಿ)-ದೇವಿ, ಸುಕು ಮಾರರಿಗೆ ಅವಶ್ಯಕವಾದ ಹಿತವನ್ನು ಹೇಳಿರುವೆಯಷ್ಟೆ? ವಸು:-ನನಗೆ ತಿಳಿದಷ್ಟನ್ನು ತಕ್ಕಮಟ್ಟಿಗೆ ಹೇಳಿರುವೆನು. ಇನ್ನು ಮುಂದೆ ಹೇಳುವ ಭಾಗವು ತಮ್ಮದಾಗಿಯೇ ಇರುವುದು. ಶ್ರೀಮಂತಃ-ಸಂತೋಷ ! (ರವಿವರ್ಮ-ರಮಾನಂದರನ್ನು ಕುರಿತು) ಸುಕುಮಾರರೆ! ಇನ್ನು ಇತ್ತ ಬನ್ನಿರಿ. ರವಿ-ರಮಾ:-(ಮುಂದೆ ಬಂದು) ಸಿದ್ಧರಾಗಿದ್ದೇವೆ: ಏನಪ್ಪಣೆ ? 10 ಶ್ರೀಮ೦ತ:-ಸುಕುಮಾರರೆ ನೀವು ಈವರೆಗೂ ಇದ್ದಂತ ಮುಂದೆಯೂ ಇರುವುದಕ್ಕಾಗದು, ಮುಂದೆ ನೀವು ಕಲಿಯತಕ್ಕ ಕಲೆಗಳೂ, ತಿಳಿಯತಕ್ಕ ವಿಚಾರಗಳೂ ಮತ್ತು ಮಾಡಬೇಕಾದ ಅಭ್ಯಾಸಗಳೂ ಹೇರಳವಾಗಿರುವುವ, ನೀವು ಇನ್ನೂ ಬಾಹ್ಯ ಪ್ರಪಂಚ ವನ್ನು ನೋಡಿದವರೇ ಅಲ್ಲವಾದುದರಿಂದ, ನಿಮಗೆ ಈಗ ನಾವು 15 ಹೇಳುವ ಒಂದೆರಡು ನೀತಿವಾಕ್ಯಗಳನ್ನು ಚನ್ನಾಗಿ ಕಿವಿಗೊಟ್ಟು ಕೇಳಿರಿ. ರವಿ-ರಮಾ:-ಆಜ್ಞಾಧೀನರಾಗಿಯೇ ಇರುವೆವು. ಶ್ರೀಮಂತ:-ಬಾಲಕರೆ! ಕೇಳಿರಿ,- ಮೊದಲು ವಿದ್ಯಾರ್ಥಿ ಗಳಾಗಿರುವ ನೀವು, ನಿಮ್ಮ ಗುರು ಕುಲವಾಸದಲ್ಲಿ, ನೀವು ಮನೆತನದ 20 ಹೆಮ್ಮೆಯನ್ನು ದೂರದಲ್ಲಿ ಕಟ್ಟಿಟ್ಟು, ನಿಮ್ಮ ಇತರ ಸಂಗಡಿಗರೊಡನೆ ಸಹಜಭಾವನೆಯಿಂದಿರುವುದನ್ನು ಅಭ್ಯಸಿಸಬೇಕು, ಆ ಬಳಿಕ, ನಿಮ್ಮ ಸಂಗಡಿಗರನ್ನು ಹೀಯಾಳಿಸಿ--ನಿಮ್ಮನ್ನು ನೀವೇ ಹೊಗಳಿಕೊಳ್ಳುವ ಕೆಟ್ಟ ನಡತೆಯನ್ನು ಬಿಟ್ಟು ಬಿಡಬೇಕು. ಒಂದೇ ಗುರುಪೀಠದಲ್ಲಿ ಅಭ್ಯಸಿಸುತ್ತಿರುವ ನೀವೆಲ್ಲ ರೂ ಒಬ್ಬ ತಂದೆಯ ಮಕ್ಕಳೆಂದೇ ತಿಳಿದು: 25