ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ.
೩೫

ಹಾ, ಕಷ್ಟ! ಕಷ್ಟ!! ಪ್ರಬಲನಾಗಿರುವ ಈತನ ಕಿರುಕುಳವನ್ನು ನಮ್ಮ ಕುಮಾರನು ನಿರ್ವಹಿಸುವುದೆಂದರೆ ಬಹುಕಷ್ಟ!!!
(ತೆರೆಯಲ್ಲಿ ) ಮಿತ್ರರೆ! ದುಷ್ಟನ ಏಳಿಗೆಯು ಸಹನಾತೀತವಾಗಿದೆ. ?
ಸುಮುಖ:-(ತೆರೆಯಕಡೆ ನೋಡಿ ಗಾಬರಿಯಿಂದ) ಬಂದೇ ಬಂದನು-ಧೂರ್ತನಾದ ರವಿವರ್ಮನು ತನ್ನ ಸಹಚರರೊಡನೆ ಆಲೋಚಿಸುತ್ತ ಬರುವಂತಿದೆ. ಈತನಲ್ಲಿ ಅಷ್ಟಾಗಿ ಭರವಸೆಯಿಡಬೇಡವೆಂದು ನಾವು ಎಷ್ಟು ಹೇಳಿದರೂ ರಮಾನಂದನು ಕೇಳದೆ, ಅಣ್ಣನೆಂದೂ ಗುರುವೆಂದೂ ಹಿತೈಷಿಯೆಂದೂ ಗೌರವಬುದ್ದಿಯಿಂದ ನೋಡುತ್ತಿರುವನು. ಈ ಮಾಯಾವಿಯಾದರೋ ಕೃತ್ರಿಮಸಂಧಾನದಿ೦ದ, ತಮ್ಮನ ಜೀವಿತ ನನ್ನ ಕೊನೆಗಾಣಿಸಬೇಕೆಂದು ಪ್ರಯತ್ನಿ ಸುತ್ತಿ ರುವನು. ಏನು ಮಾಡುವುದು? ಭಗವಂತನೇ ಸಹಾಯಕನಾಗಿರಲಿ, ನಾನು ಈಗಲೇ ಹೋಗಿ, ಶಾಲೆಗೆ ಹೊತ್ತಾಯಿತಂದು ಕುಮಾರನನ್ನು ಎಚ್ಚರಿಸಿ ಕರೆತರುವೆನು, (ಎಂದು ಹೋಗುವನು.)
( ನಳ-ಕಳಿಂಗ-ರೆಂಬ ಸಹಚರರೊಡನೆ ರವಿವರ್ಮನ ಪ್ರವೇಶ. )
ರವಿ:-ಪ್ರಿಯಮಿತ್ರರೆ! ಆ ರಮಾನಂದ-ಹಂತಕನಿಂದ ನಮಗಾಗುತ್ತಿರುವ ಅಪಮಾನವನ್ನು ಹೇಗೆ ಸಹಿಸಬೇಕು ? ಕುಂತಲನಗರ ದಲ್ಲಿಯೇ ಇದ್ದಿದ್ದರೆ, ನಮಗೆ ಇಷ್ಟರಸಂತಾಪಕ್ಕೆ ಕಾರಣವಿರುತ್ತಿರಲಿಲ್ಲ, ಅಲ್ಲಿ ಮಾವನನ್ನು ವಂಚಿಸಿ, ಆತನ ಮನೆಯವರೊಡನೆ ವಿರೋಧವನ್ನು ಕಟ್ಟಿಕೊಂಡು, ಇಲ್ಲಿಗೆ ಬಂದುದಕ್ಕೆ ನಮಗಿದೆ ಸನ್ಮಾನವೇನು?
ಕಳಿಂಗ:-ಕುಮಾರನ | ಮಿಂಚಿದ ಕಾವ್ಯದಲ್ಲಿ ಚಿಂತಿಸಿ ಫಲವಿಲ್ಲ ; ಮುಂದೆ ಮಂದತ್ವದಿಂದಿರುವುದು ಮಾತ್ರ ಸರಿಯಲ್ಲ.
ರವಿ:-ಮಿತ್ರರೆ! ಆ ನೀಚನ ಏಳಿಗೆಯು ನನ್ನ ಸರ್ವನಾಶ ಮಾಡುವಂತಿದೆಯೆಂದೂ, ಆತನ ಕುಟಿಲನಡತೆಯಿಂದ ವಂಚಿತರಾಗಿ ರುವ ತಾಯಿತಂದೆಗಳು ನನಗೆ ವಿರೋಧಿಗಳಾಗಿಯೇ ತಿರುಗಿರುವ