ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಸತೀಹಿತೈಷಿಣೀ

ರೆಂದೂ ನನ್ನ ಅಂತರಾತ್ಮವು ಹಗಲೂ ಇರಳೂ ಕೊರಗಿ ಕೊರಗಿ ಬೇಸತ್ತು ಹೋಗುತ್ತಿರುವುದು. ಇದಕ್ಕೇನು ಮಾಡಲಿ ? ಉಪಾಯ ವೇನು?
ನಳ:- ಮಿತ್ರನೆ! ವೃಧಾಶೋಕದಿ೦ದ ಫಲವಿಲ್ಲ. ಮಾಡಬೇಕಾದುದೇನಿದ್ದರೂ, ಚರ್ಚಿಸಿ ಮಾಡುವುದರಿಂದ ಲಾಭವುಂಟು. ಈ ಸ್ಥಳವು ನಮ್ಮ ಮಂತ್ರಾಲೋಚನೆಗೆ ತಕ್ಕುದಾಗಿರುವುದರಿಂದ ಇಲ್ಲಿಯೇ ಕುಳಿತು ಸಾವಧಾನವಾಗಿ ಸಮಾಲೋಚಿಸುವ?
ಕಳಿಂಗ:-ಸಹಜ, ಇದೊ ಇಲ್ಲಿರುವ ಕಲ್ಲು ಮಂಟಪದಲ್ಲಿ ಕುಳಿತು, ನಮ್ಮ ಕೆಲಸಗಳನ್ನು ನಿರ್ಧರಿಸಬಹುದು.
ರವಿ:- ಹಾಗಿದ್ದರೆ ಬನ್ನಿರಿ, (ಮಿತ್ರರೊಡನೆ ಮುಂದೆಬಂದು ಕುಳಿತು)
ನನ್ನ ಪ್ರಾಣಾಪ್ತಮಿತ್ರರೆ! ನನಗೆ ತಾಯಿತಂದೆಗಳೇ ಮೊದಲಾದ ಸಮಸ್ತ ಬಾಂಧವರಿಗೂ ಹೆಚ್ಚಾದ ಆಪ್ತರೇ ನೀವೆಂದು ನಂಬಿರುವೆನು. ಇದನ್ನು ನಾನು ತ್ರಿಕರಣಶುದ್ಧವಾಗಿ ಹೇಳಿದ ಮಾತೆಂದು ನಂಬಿರಿ.
ನಳ:-ಆಯುಷ್ಯಂತನೇ! ಇದೇನಿ೦ದು ಇಷ್ಟು ಕಾತರನಾಗಿರುವೆ ? ನೀನಿದನ್ನು ಬಾಯ್ದೆರೆದು ಹೇಳಬೇಕೆ ? ನಿನ್ನ ವಿಶ್ವಾಸವು ಎಷ್ಟರದೆಂಬುದನ್ನು ನಾವು ಅರಿತಿಲ್ಲವೇ? ಸುಮ್ಮನೇಕೆ ಬಳಲುವೆ? ಯಾವ ವಿಚಾರವಿದ್ದರೂ ನಮ್ಮಲ್ಲಿ ಸಂಪೂರ್ಣ ಭರವಸೆಯಿಟ್ಟು ಹೇಳು, ನಮಗೆ ತೋರಿದಂತ ಸರಿಪಡಿಸುವೆವು.
ರವಿ:-(ನಳನ ಕೈಹಿಡಿದು) ನಳನೆ? ಆ ದುರಭಿಮಾನಿಯಾದ ರಮಾನಂದನು ನನಗೆ ಪ್ರಬಲ ವೈರಿಯಾಗಿದ್ದಾನೆಂಬುದು ನಿಮಗೆ ತಿಳಿದೇ ಇದೆಯಷ್ಟೆ?
ನಳ-ಕಳಿ೦ಗ:-ಬಲ್ಲೆವು, ಬಲ್ಲೆವು.
ರವಿ:- ಅವನು ತಾನೇ ತಾಯ್ತಂದೆಗಳ ಮತ್ತು ಗುರುಗಳ ಪೂರ್ಣಾನುಗ್ರಹಕ್ಕೆ ಪಾತ್ರನಾದವನೆಂಬ ಹೆಮ್ಮೆಯಿಂದಲೂ ತಾನೊ