ಈ ಪುಟವನ್ನು ಪ್ರಕಟಿಸಲಾಗಿದೆ

ರಮಾನಂದ

೫೯

ಖದಲ್ಲಿಯೂ ನಿನ್ನ ಶ್ಲೇಷೋಕ್ತಿಯೇ ?
ವಿದ್ಯಾ:- (ಕೃತಕಕೋಪದಿಂದ) :ಚನ್ನಾಗಿದೆ, ಯೋಗ್ಯತೆಗೆತಕ್ಕ ಮಾತೇ ಹೊರಡುತ್ತದೆ. ಗುರುಸಮ್ಮುಖದಲ್ಲಿ ಮಾತ್ರ ಸಹಜಭಾವವನ್ನು ತೋರಿಸುವುದು, ಉಳಿದೆಡೆಗಳಲ್ಲಿ ವಕ್ರತೆಯನ್ನು ಹೊರಗೆಡಹುವುದೂ ನೀತಿಯಲ್ಲವೇ ? ಇದನ್ನಲ್ಲವೇ ನೀವು ಕಳೆದ ಆರುತಿಂಗಳಿ೦ದಲೂ ಅಭ್ಯಾಸಮಾಡಿರುವುದು ? ( ರಮಾನಂದಾದ್ಯರು ತಲೆಬಾಗಿ ನಿಲ್ಲುವರು, ರವಿವರ್ಮಾದಿಗಳು - ಹರ್ಷಿತರಾಗಿ ನೋಡುವರು )
ಸೌಮ್ಯ:~ ಹಾಗೂ ಆಗಲಿ; ನೀವೂ ಇವನಂತೆಯೇ ಗುರುಗಳ ಅಭಿಮಾನಕ್ಕೆ ಪಾತ್ರರಾಗಲು ಪ್ರಯತ್ನ ಮಾಡಬಾರದೇಕೆ ? 10
ಕಳಿಂಗ:- ಅದೆಲ್ಲವೂ ಲಭ್ಯಾನುಸಾರ ನಡೆಯತಕ್ಕುದು. ನಮ್ಮ ಪ್ರಯತ್ನ ಮಾತ್ರದಿಂದಲೇ ಅದು ದೊರೆಯುವದೆಂಬ ಮಾತು ಅಸಂಗತ ಮತ್ತು ವೃಧಾ ಪ್ರಯಾಸ !
ರಮಾ:- ಹಾಗಲ್ಲವಯ್ಯಾ ! ವೃಥಾಶ್ರಮವೆಂದು ಸುಮ್ಮನೆ ಕುಳಿತಿರುವುದು ಸರಿಯಲ್ಲ, ಪ್ರಯತ್ನವೂ, ತಕ್ಕಷ್ಟು ಶ್ರಮಸಹಿಷ್ಣುತೆಯೂ ಇಲ್ಲದಿದ್ದರೆ, ಯಾವ ಕೆಲಸವೂ ತೃಪ್ತಿಕರವಾಗಿ ನೆರವೇರುವುದಿಲ್ಲ, ಪುರುಷ ಪ್ರಯತ್ನವು ನಿಜರೂಪದಿಂದ ನಡೆಯಿಸಲ್ಪಟ್ಟ ಮೇಲೆ ದೈವಯತ್ನವೂ ಅದಕ್ಕೆ ಸಹಕಾರಿಯಾಗಿ ಫಲವನ್ನು ಕೊಡುವುದು. ಇದಕ್ಕೆ ದೃಷ್ಟಾಂತವಾಗಿ ಬಲ್ಲವರು ಹೇಳುವುದನ್ನು ಕೇಳು~

ಕ೦ದ || ಎಳಸಿದೊಡನಾವ ಕಜ್ಜಂ ||
ಫಳಿಪುದು, ಪುರುಷಪ್ರಯತ್ನ ಮಣಮಿಲ್ಲದೆಯಾ ||
ಗುಳಿಸುತ ಮಲಗಿರೆ ಹರಿಮುಖ |
ದೊಳಗಾಮಿಗವಿಂಡು ಪುಗುವುದೇಂ ಸದ್ಭುದ್ಧಿ ||

( ಸದ್ಭುದ್ದಿಶತಕ )
ರವಿ:- (ಮಂದಹಾಸದಿಂದ) ಸರಿಸರಿ; ಈಗ ತಿಳಿದೆನು | ನಾವು 25 20