೬೦
ಸತೀಹಿತೈಷಿಣೀ
ಪ್ರಯತ್ನ ಪಟ್ಟ ಮಾತ್ರಕ್ಕೆ ಎಲ್ಲವೂ ಫಲಕಾರಿಯಾಗುವುದೆಂದು ಈಗ ತಿಳಿದೆನು.
ರಮಾ:~ ಹಾಗಲ್ಲ; ಧರ್ಮ ವಿರುದ್ಧವಲ್ಲದ ಮತ್ತು ಪರರಿಗೆ ಕೇಡನ್ನುಂಟುಮಾಡದ ಆವ ಕೆಲಸವಾದರೂ ಪ್ರಯತ್ನದಿಂದ ಸಾಧ್ಯವಾಗುವುದು.
ರವಿ:- ಹಾಗೋ ? ಇರಲಿ; ಒಳ್ಳೆಯದು-ಕೆಟ್ಟುದು ಎಂಬಿವನ್ನು ತಿಳಿಯುವ ಬಗೆ ಹೇಗೆ ? ಫಲಪ್ರಾಪ್ತಿಯಾದ ಬಳಿಕಲ್ಲವೇ ? ಹಾಗೆ ಬಂದಾಗ ನೋಡಿಕೊಳ್ಳುವ?
ರಮಾ:- ವಿವೇಚನಾಪರನಾದವನು, ಮುಂದೆ ಒದಗಬಹುದಾದ ಫಲವನ್ನು ಇಂದೇ ತಿಳಿದಚ್ಚೆತ್ತು, ಅದಕ್ಕೆ ತಕ್ಕಂತ ಅನುಕೂಲ
ಪ್ರತಿಕೂಲಗಳನ್ನು ವಿಮರ್ಶಿಸಿ ಜಾಗರೂಕನಾಗಿರುವನು. ವಿವೇಚನೆಯಿಲ್ಲದವರಿಗೆ ಇದು ಸಾಧ್ಯವಲ್ಲ.
ರವಿ:- ಹೋಗಲಿ, ನೀನು ವಿವೇಚನಾಪರನಷ್ಟೆ; ನಿನಗೆ ಮು೦ದೆ ಒದಗಬಹುದಾದ ಕಷ್ಟ ನಷ್ಟಗಳ ಫಲಗಳು ಎಂತಹವೆಂಬುದನ್ನು ಈಗ ತಿಳಿದುಹೇಳು; ಕೇಳುವ?
ರಮಾ:- (ಕಿರುನಗೆಯಿಂದ) ಅಣ್ಣ! ಅಸತ್ಯವಾದಿಗಳ ಮತ್ತು ಅಸೂಯಾಪರರಾದ ಮೂರ್ಖರ ಕಿರುಕುಳದಿಂದ ಅಷ್ಟಿಷ್ಟು ಕಷ್ಟ ಗಳುಂಟಾಗಬಹುದಾದರೂ, ಕರ್ತವ್ಯ ಜಾಗ್ರತನಾಗಿರುವ ನನಗೆ ನನ್ನ
ಗುರುವಿನ ಅನುಗ್ರಹವಿರುವ ಪರೆಗ, ಮತ್ತಾವ ಉಪಹತಿಯೂ ಉಂಟಾಗಲಾರದು.
ರವಿ:-(ತಲೆದೂಗಿ ಸಕ್ಕು ದರ್ಪದಿಂದ) ಭಲೆ, ನಿನೇ ಕರ್ತವ್ಯನಿಷ್ಠನಲ್ಲವೆ ? ನೀನೇ ಸತ್ಯಸಂಧನಾಗಿರುವವನಲ್ಲವೆ ? ಆಗಲಿ, ಸಂತೋಷ ! ನಾವೆಲ್ಲರು, ಕಳ್ಳರು; ಸುಳ್ಳುಗಾರರು.
ರಮಾ:- ಅಣ್ಣ ! ನಾನು ಕನಸಿನಲ್ಲಿಯಾದರೂ ನಿಮ್ಮನ್ನು #5 ಹಾಗೆಂದು ಹೇಳುವುದಿಲ್ಲ, ಹೀಗೇಕೆ, ಇಲ್ಲದಸಲ್ಲದ ಮಾತುಗಳ