ವಿದ್ಯಾ :- ( ಸಂಶಯದಿಂದ ) ಜೂಜಿಗೂ ಸೇರಿದನೆ ? ಆಗಲಿ; ಅದರಿಂದಾಗುವ ಅನಿಷ್ಟವು ಇನ್ನೂ ಈಗಲೇ ಹೇಗೆ ತಿಳಿಯಬೇಕು ? ಫಲಪ್ರಾಪ್ತಿ ಕಾಲದಲ್ಲಿ ಪರಿತಪಿಸಬೇಕಾದೀತು. ಇರಲಿ; ಆ ಪತ್ರವನ್ನು ಇಲ್ಲಿ ತಾ.
ರವಿ:-(ಅಂಗಿಯ ಕಿಸೆಯಿಂದ ಮಡಿಸಿದ್ದ ಪತ್ರವನ್ನು ತೆಗೆದು ಕೊಡುವನು) 5
ವಿದ್ಯಾ:- (ಹಿಂದೆಮುಂದೆ ನೋಡಿ) ಇದೇನಯ್ಯ ಮಣ್ಣು, ಮಸಿ ಕೋಳ ?
ರವಿ:- ಇದು ಬಿದ್ದಿದ್ದ ಸ್ಥಳವು ನೀರಿನಿಂದ ತೊಯ್ದು ಹೋಗಿದ್ದ ನೆಲವಾಗಿದ್ದಿತು, ಆದುದರಿಂದ ಹೀಗಾಗಿದೆ.
ವಿದ್ಯಾ:- ರಮಾನಂದ ! ಇತ್ತ ಬಾ; ಇದು ನಿನ್ನ ಬರಹವೇ 10 ಆಹುದೋ ಅಲ್ಲವೋ ನೋಡಿ ಹೇಳು.
ರಮಾ:- ( ಮುಂದೆಬಂದು ನೋಡಿ, ವಿನಯದಿಂದ ) ಇದು ನನ್ನ ಬರಹವೇ ಅಹುದು.
ವಿದ್ಯಾ :-ಹಾಗಿದ್ದರೆ, ನೀನು ಜೂಜಿಗೆ ಹೋಗಿದ್ದುದ್ದೂ ನಿಜ!
ರಮಾ:- ಜೂಜಿಗಾಗಲಿ, .ಮತ್ತಾವ ಮನೋವಿಕಲ್ಪ ಹೇತುಗಳಾದ ಆಟಗಳಿಗೇ ಆಗಲೀ ನಾನು ಈ ವರೆಗೂ ಸೇರಿರುವುದಿಲ್ಲ; ಮುಂದೆಯೂ ಸೇರತಕ್ಕವನಾಗಿಲ್ಲ ಹಿರಿಯರ ಆಶೀರ್ವಾದದಿಂದ ಅವೆಲ್ಲವನ್ನೂ ಮನಃಪೂರ್ವಕವಾಗಿ ತಿರಸ್ಕರಿಸಿರುವೆನು, ಮತ್ತು ಈ ವರೆಗೆ ಹೇಳಲ್ಪಟ್ಟುದಾವುದೂ ನಿಜವಲ್ಲವೆಂದೂ ನಾನು ಖಂಡಿತವಾಗಿ ಹೇಳಬಲ್ಲೆನು.
ವಿದ್ಯಾ :- ಆಗಲಿ; ಕಳ್ಳನಿಗೆ ಸುಳ್ಳೇ ಮಂತ್ರಿ, ಇರಲಿ; ಈಗ ನಿನ್ನ ಪತ್ರವು ಆತನಿಗೆ ಮತ್ತೆ ಹೇಗೆ ಸಿಕ್ಕಿತು ?
ರಮಾ:- ನನಗೆ ತಿಳಿಯದು.
ವಿದ್ಯಾ:- ನಿನಗೆ ತಿಳಿಯದೆ ನಿನ್ನ ಪದಾರ್ಥವು ಮತ್ತೊಬ್ಬರ ಬಳಿಗೆ ಹೋಗುವುದೇ ?
25
ಪುಟ:ರಮಾನಂದ.djvu/೮೮
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೬೯