ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೭೧

 ಮೇಲಿನ ದುರ್ವಿಷಯಚಿ೦ತೆಗಳಿಗೆ ಒಳಪಡಿಸದೆ ಎಚ್ಚೆತ್ತಿದ್ದು ವಿನಯ, ಸತ್ಯ, ಶಾಂತಿ ಕ್ಷಮಾ ವಿವೇಚನೆಗಳನ್ನು ಅವಲಂಬಿಸಿ, ಬ್ರಹ್ಮಚರ್ಯ ನಿಷ್ಠೆಯಿಂದ ಗುರುಕುಲವಾಸದಲ್ಲಿ ಪರಿಪಕ್ವ ಬುದ್ದಿಯನ್ನು ಹೊಂದುವವನೇ ನಿಜವಾದ ವಿದ್ಯಾ ಧನವನ್ನು ಅರ್ಜಿಸಲು ಅರ್ಹನು. ಇದನ್ನು ನಿಮಗೆ ಎಷ್ಟೋಬಾರಿ ಹೇಳಿದ್ದೆನು. ಆದರೂ ನೀವು ಇನ್ನೂ ನಂಬಿಕೆಯನ್ನುಂಟುಮಾಡಲು ಪ್ರಯತ್ನಿಸಿದಂತೆ ತೋರಲಿಲ್ಲ. ಮತ್ತೇನು ಹೇಳಲಿ ? ರಮಾನಂದ | ಅಪಾತ್ರನಿಗೆ ದಾನಮಾಡಬಾರದೆಂಬ ನೀತಿ ಯು೦ಟು. ಆದುದರಿಂದ ಶ್ರೇಷ್ಠವಾದ ವಿದ್ಯಾಧನವನ್ನು ದಾನಮಾಡಲು, ಪಾತ್ರಾ ಪಾತ್ರವನ್ನು ತಿಳಿಯಬೇಕೆಂದೇ ಈ ವರೆಗೂ ನಿಮ್ಮನ್ನು ಕೇವಲ ಅಲ್ಪ ವಿಷಯವಿಚಾರದಲ್ಲಿ ಮಾತ್ರ ನಿಯಮಿಸಿದ್ದೆನು.ನಿಮ್ಮ ಯೋಗ್ಯತಾಪರಿಶೀಲನೆಗೆಂದೇ ಈ ದಿನವನ್ನು ಗೊತ್ತು ಮಾಡಿದ್ದೆನು.ಆದರೆ ಇಷ್ಟು ದೀರ್ಘಕಾಲವೂ ನಿನ್ನ ನಡೆನುಡಿಯಲ್ಲಿ ಲೇಪಮಾತ್ರದ ಸಂಶಯಕ್ಕೂ ಅವಕಾಶವಿಲ್ಲದಿದ್ದುದೂ ,ಇಂದು ಒಂದೇ ತಡವೇ ಒಟ್ಟಾಗಿ ಹೊರಬಿದ್ದಿರುವುದನ್ನು ನೋಡಿದರೆ ನನಗೆ ಅತ್ಯಂತ ವ್ಯಾಕುಲವೂ ಕ್ರೋಧವೂ ಸಂದೇಹವೂ ಉಂಟಾಗಿದೆ .ಇದರ ಪೂರ್ವಾಪರ ವನ್ನು ಚೆನ್ನಾಗಿ ತಿಳಿದು ಸಂಶಯವು ಪರಿಹಾರವಾಗುವ ವರೆಗೂ, ನಾನು ನಿಮ್ಮನ್ನು ಬಿಟ್ಟು ಬಿಡುವುದಕ್ಕಾಗಲೀ, ಇಲ್ಲವೇ ಪ್ರೌಢವಿದ್ಯಾಭ್ಯಾಸದಲ್ಲಿ ನಿಯೋಜಿಸುವುದಕ್ಕಾಗಲೀ ಇಷ್ಟವುಳ್ಳವನಾಗಿಲ್ಲ, ಇದಕ್ಕೆ ಇನ್ನೂ ಒಂದು ವಾರದ ವರೆಗೆ ಅವಧಿಯನ್ನು ಕೊಟ್ಟಿರುವೆನು . ಅಷ್ಟರಲ್ಲಿಯಾದರೂ ಅಪಚಾರವಿಂತಹುದೆಂದು ತಿಳಿದು ಹೇಳಿ, ಕ್ಷಮೆಯನ್ನು ಕೋರುವುದು ಶ್ರೇಯಸ್ಕರವೆಂದು ನಿಮ್ಮೆಲ್ಲರಿಗೂ ಹೇಳಿರುವೆನು.
(ತೆರೆಯಲ್ಲಿ): ಪರಿಚಾರಕರೇ ! ಶಾರದಾ ಉಪಾಸನೆಗೆ ಹೊತ್ತು
ಮೀರುತ್ತಿದೆ. ನಿಮ್ಮ ನಿಯಮಿತ ಕಾರ್ಯಗಳನ್ನು
ಸಾಂಗವಾಗಿ ಮಾಡಿರುವಿರಷ್ಟೆ? 25