ಈ ಪುಟವನ್ನು ಪ್ರಕಟಿಸಲಾಗಿದೆ
೭೨
ಸತೀಹಿತೈಷಿಣೀ
ವಿದ್ಯಾ:- (ಗಾಬರಿಯಿಂದೆದ್ದು) ಓಹೋ ! ಆಗಲೇ ಹೊತ್ತು ಮೀರುತ್ತಿದೆ. ಇಂದಿನ ವಿದ್ಯಮಾನವಿಶೇಷದಿಂದ ವಿಷಾದಗ್ರಸ್ತನಾಗಿದ್ದ ನನಗೆ ಹೊತ್ತೇ ತಿಳಿಯಲಿಲ್ಲ. ಇ೦ದು ಇಷ್ಟಕ್ಕೆ ಸಾಕಾಗಿರಲಿ; ಮುಂದೆ ನೋಡುವ, ಇನ್ನು ಎಲ್ಲರೂ ಶಾರದಾ ಉಪಾಸನೆಗೆ 5 ನಡೆಯಿರಿ.
(ಎಲ್ಲರೊಡನೆ ಹೊರಡುವರು).
10 |
ಶಾರದಾ. ಉಪಾಸನೆ.
ರಾಗ-
( ಶ್ರೀ ಸರ್ಣಾ೦ಬಿಕೆ)
ಶ್ರೀ ಸರಸ್ವತೀ - ಸುಮತೀ - ಭವತೀ ಭಾರತೀ – ||ಪ||
ವಾಣೀ-ವೀಣಾ ಪುಸ್ತಕಪಾಣಿ-ಪಂಕಜಯುಗೆ ಫಣಿವೇಣಿ- ಮಂಜುವಾಣೀ |
ಏಣಾಂಕವದನೆ ಶುಭಗುಣಶ್ರೇಣೀ | ಗೀರ್ವಾಣಿ-ಬ್ರಹ್ಮಾಣಿ- ಜನನೀ||೧||
ನೀರೇ-ನಿಗಮಾಗಮವಿಬಾರೇ । ಘೋರಭವಭಯದೂರ- ಶುಭಾಂಬರಧಾರೆ|
ಸುರಸಭವಹೃತ್ಸಾರಸವಿಹಾರೇ | ಧೀರೇ-ಚತುರೇ -ಕಂಪಲ್ಲವಚಿಕುರೇ-ಶ್ರೀ||೨|
ವರದೇ- ರಸನದಿ ನಿಂತವಸರದೇ-ಸರಸದಿನುಡಿ ನಿಜಗುಣದಿ- ಸೂನೃತವ್ರತದಿ |
ವರಶೇಷಾದ್ರಿನಿಕೇತನಂಘ್ರಯ.ಮರೆಯದೆ-ಭಜಿಸುವ-ತೆರದಿಂ ಕೊಡುವರವಂ || ೩||
- ಇಷ್ಟಕ್ಕೆ ತೃತೀಯಾ೦ಕವು -