ಸತ್ಯ -ಗೊತ್ತು; ಆದರೆ ರಮಾನಂದನು ಹಾಗೆ ಸಹವಾಸ ದೋಷದಿಂದ ಕೆಟ್ಟು ಹೋಗುವನೆಂದು ತಿಳಿದಿರಲಿಲ್ಲ.
ಸೌಮ್ಯ:- ಅಯ್ಯ ! ಬೆಂಕಿಯನ್ನು ಇರಿವೆಗಳು ಹೇಗೆ ಮುಟ್ಟಿ ಲಾರವೋ, ಹಾಗೆಯೇ ಕುಮಾರನನ್ನು ದುರ್ಗುಣ, ದುರಾಚಾರಗಳು ಮುಟ್ಟಲಾರವು.
ಸತ್ಯ:- ಹಾಗಿದ್ದರೆ ಹೀಗಾಗಲು ಕಾರಣವೇನು?
ಸೌಮ್ಯ:- ಅಯ್ಯ ! ಕ್ಷುದ್ರ ಜೀವಿಗಳಾದ ಜಂಬುಕಗಳಿಂದ ಕೇಸರಿಯು ವಂಚಿಸಲ್ಪಟ್ಟಿತೆಂದು ತಿಳಿಯೆಯೇನು ?
ಸತ್ಯ:- ಅಯ್ಯಾ ! ಲೋಕದಲ್ಲಿ ಮಾತ್ಸರ್ಯವೆಂಬುದು ಮಹಾಪಾಪಿಯು, ಅದು ಪರೋರ್ಷೆಯನ್ನು ನೋಡಿ ಸಹಿಸದೆ, ಅವರನ್ನು ಸರ್ವವಿಧದಿ೦ದಲೂ ಕೆಡಿಸುವ ಪ್ರಯತ್ನವನ್ನೇ ಮೂಡುವುದು, ಇದರಿಂದ ತನಗಾಗುವ ಫಲವೇನೆಂಬುದನ್ನು ಕುರಿತು ಸ್ವಲ್ಪವಾದರೂ ಚಿಂತಿಸುವುದನ್ನು - ಪಾಸ! ಅದು ಹೇಗೆ ತಿಳಿಯಬೇಕು?
ಸೌಮ್ಯ:- ಅಯ್ಯ ! ದುರ್ಜನರ ನಡತೆಯೇ ಹೀಗಲ್ಲವೆ?
ವೃತ್ತ ||ವ್ರತಸ್ಥನಲ್ಲಿ ದಂಭಮಂ, ಸುಬುದ್ಧಿಯಲ್ಲಿ ಜಾಡ್ಯಮಂ !
ಹಿತೋಕ್ತಿಯಲ್ಲಿ ದೈನ್ಯಮ೦, ಶುಚಿತ್ರದಲ್ಲಿ ಮೋಸಮಂ |
ಸ್ವತಂತ್ರನಲ್ಲಿ ಗರ್ವಮಂ, ಪ್ರತಾಪಿಯಲ್ಲಿ ಶೈಕ್ಷ್ಯಮಂ ||
ಕುತರ್ಕರಿಂರು ದೋಷಮಂ, ಗುಣಾಢ್ಯರಲ್ಲಿ ತೋರುವರ್ ||
ಸತ್ಯ:- ಆದುದರಿಂದಲೇ ಅ೦ತಹರ ಸಹವಾಸವು ಸರ್ವಥಾ ಕೂಡದೆಂದು ಬಲ್ಲವರು ಹೀಗೆ ತಿರಸ್ಕರಿಸುವರು.
ವೃತ್ತ||ಹಳುವದ ಬೆಟ್ಟದ ದುರ್ಗಮ ಮಾರ್ಗ |
ಸ್ಥಳದಿ ವನೇಚರರಿಂದೆಡೆಯಾಟಂ ||
ಒಳಿತು, ಸುರೇಂದ್ರ ನಿವಾಸದೊಳಿರ್ದ್ದುo !
ತಿಳಿದಿರು ಮೂರ್ಖರ ಸಂಗತಿಬೇಡೈ || (ಛಂದ:ಸಾರಿ)