ಈ ಪುಟವನ್ನು ಪ್ರಕಟಿಸಲಾಗಿದೆ
೭೪
ಸತೀಹಿತೈಷಿಣೀ

ಬಂದೆನು. ಎಲ್ಲಿಯೂ ಆತನನ್ನು ಕಾಣಲಿಲ್ಲ. ಗುರುಕುಲವಾಸಕ್ಕೆ ಬಂದುದು ಮೊದಲು, ಈವರೆಗೆ ಒಂದು ದಿನವಾದರೂ ಹೊರಗೆ ಕಾಲಿಟ್ಟನೆಂಬುದು ತಿಳಿದುದಿಲ್ಲ. ಇಂದು ಈಗ ಈ ರಾತ್ರಿಯಲ್ಲಿ ಎಲ್ಲಿಗೆ ಹೋಗಿರಬೇಕು? (ಸ್ವಲ್ಪ ಹೊತ್ತು ಚಿಂತಿಸುತ್ತಿದ್ದು ಬಳಿಕ) ಇಂದು ಶಾಲೆ 5 ಯಲ್ಲಿ ನಡೆದ ವಿದ್ಯಮಾನಗಳಿ೦ದ ಏನಾದರೂ ಖತಿಗೊಂಡು ಹೊರ ಟುಹೋದನೋ? ಹಾಗೆ ಹೋಗಿದ್ದರೆ ಎಲ್ಲಿಗೆ ಹೋಗಿರಬಹುದು ? ಪಿತೃಸಮ್ಮುಖಕ್ಕೆ ಹೋಗುವವನಲ್ಲ; ಗುರುಗೃಹಕ್ಕೂ ಹೋಗುವವನಾಗಿಲ್ಲ; ಮತ್ತಾವ ಆಪ್ತರ ಮನೆಗಳಾದರೂ ಇಲ್ಲಿರುವುವೆಂಬುದು ತಿಳಿಯುತ್ತಿಲ್ಲ. ಈ ಕತ್ತಲೆಯಲ್ಲಿ ಇನ್ನು ಎಲ್ಲಿ ಹುಡುಕಲಿ? ಯಾರನ್ನು ಕೇಳಲಿ? (ತೆರೆಯಕಡೆ ನೋಡಿ] ಇದೋ ಗುರು ಸೇವಕನಾದ ಸತ್ಯ ಸೇನನು ಇತ್ತ ಕಡೆಗೆ ಬರುತ್ತಿರುವನು. ಈತನಿಂದಾದರೂ ಕುಮಾರನ ವಿಚಾರವನ್ನು ತಿಳಿಯಬಹುದೊ? ನೋಡುವೆನು.”

(ಪತ್ರ ಹಸ್ತನಾದ ಸತ್ಯಸೇನನ ಪ್ರವೇಶ)

ಸೌಮ್ಯ:- ಏನಯ್ಯಾ ಸತ್ಯಸೇನ !
ಸತ್ಯಸೇನ:- ಯಾರು? ಸೌಮ್ಯನೆ! ಇದೇನು ಇಷ್ಟು ಹೊತ್ತಿನಲ್ಲಿ ? ಇಲ್ಲಿ ನಿಂತು ಮಾತಾಡುತ್ತಿರುವುದೇನು? ಯಾರನ್ನು ನೋಡು ತ್ತಿರುವೆ?
ಸೌಮ್ಯ:- ರಮಾನಂದನನ್ನು ನಿರೀಕ್ಷಿಸುತ್ತಾ ನಿಂತಿರುವೆನು.
ಸತ್ಯ:- ರಮಾನಂದನನ್ನೆ ಏತಕ್ಕಾಗಿ?
ಸೌಮ್ಯ:- ಸುಖದು:ಖಗಳಲ್ಲಿ ಸಹಭಾಗಿಗಳಾಗಿದ್ದು, ಕಾಲೋಚಿತವಾದ ಹಿತಸೂಚನೆಗಳಿಂದ ಸಮಾಧಾನಪಡಿಸುವುದೇ ಸ್ನೇಹದ ಲಕ್ಷಣವಲ್ಲವೆ ?
ಸತ್ಯ:- ರಮಾನಂದನ ವ್ಯಸ್ತತೆಗೆ ಕಾರಣವೇನು ?
ಸೌಮ್ಯ: ವಿದ್ಯಾಶಾಲೆಯಲ್ಲಿ ನಡೆದ ವಿದ್ಯಮಾನವು ನಿನಗೆ 25 ಗೊತ್ತಿದೆಯಷ್ಟೇ?