ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೭೭

 ಸೌಮ್ಯ:- ಏನು ಮಾಡುತ್ತಿದ್ದನು ? ಬಳಿಯಲ್ಲಿ ಮತ್ತಾರಿದ್ದರು?
ಸತ್ಯ:-ತಲೆವಾಗಿ ನಿಂತಿದ್ದನು. ಮುಂದೆ ಯಾರೋ ಅವಕುಂಠ ನವತಿಯೊಬ್ಬಳು ನಿಂತಿದ್ದಂತೆ ತೋರಿತು, ಆದರೆ ನಾನು ಚೆನ್ನಾಗಿ ನೋಡಲಿಲ್ಲ, ಅಲ್ಲದೆ, ನನ್ನನ್ನು ಕಂಡು ಆ ಸ್ತ್ರೀವ್ಯಕ್ತಿಯು ಮರದ ಹಿಂದೆ ಅಡಗಿಕೊಂಡಿತು. ರಮಾನಂದನೂ ಅಲ್ಲಿಂದ ಕಲ್ಲು ಬಗತಿಯ | ಬಳಿಗೆ ಹೊರಟುಹೋದನು.
ಸೌಮ್ಯ: - ಹಾಗಾದರೆ ನೀನಿನ್ನು ಹೊರಡು, ನಾನು ರಮಾ ನಂದನಲ್ಲಿಗೆ ಹೋಗುವೆನು.
ಸತ್ಯ:- ಅಯ್ಯ! ನೀನೇ ಸನ್ಮಿತ್ರನು: ಮೈತ್ರಿ ಲಕ್ಷಣವು ನಿನ್ನಲ್ಲಿಯೇ ಇರುವುದು. ಭಗವಂತನು ನಿನಗೆ ಸಹಾಯಕನಾಗಿರಲಿ

(ಹೊರಟುಹೋಗುವನು)

(ಸೌಮ್ಯನು ಗಮನವನ್ನಭಿನಯಿಸಿ ಮುಂದೆ ನೋಡಿ) ಇದೇ ನಂದನವು. ಮತ್ತೆ ನೋಡಿ. (ಸಂಭ್ರಮದಿಂದ) -- ಕುಮಾರನು ಇಲ್ಲಿಯೇ ಪರವಶ ನಾಗಿ ಕುಳಿತಿರುವನು.” (ಎಂದು ಮುಂದೆ ಬಂದು ನಿಲ್ಲುವನು)
ಸ್ಥಾನ ೨: - ಬಾಲೋದ್ಯಾನದ ತಳಿರುಮಂಟಪ.
(ಕಲ್ಲ ಜಗಲಿಯಮೇಲೆ ರಮಾನಂದನು ತಲೆವಾಗಿ ಕುಳಿತಿರುವನು)
ಸೌಮ್ಯ:-(ರಮಾನಂದನನ್ನು ನೋಡಿ ಮರುಕದಿಂದ) ಆಹಾ ! ಕಮ್ಮ ಫಲವೇ ಬಲವತ್ತರವ, ಕರ್ಮ ಫಲದ ಮುಂದೆ ರೂಪ, ಗುಣ, ಸಂಪದ ವಿದ್ಯಾಗೌರವಗಳಾವುವೂ ಕಾರ್ಯಕಾರಿಗಳಾಗಲಾರವು. ಹಾಗಿಲ್ಲದಿದ್ದರೆ, ಈ ಸಕಲ ಗುಣೋವೇತನಾದ ನಮ್ಮ ರಮಾನಂದನು ಹೀಗೆ ಅಪಮಾನವನ್ನು ಹೊಂದುತ್ತಿರಲಿಲ್ಲ. ನಿಜ! ಆ ಕರ್ಮಸಲದ ಬಲಾಧಿಕ್ಯಕ್ಕೆಂದೇ ಈ ನೀತಿ ಹುಟ್ಟಿರಬೇಕು.-

ವೃತ್ತ ||ಮೇಲುಂ ವಿದ್ಯಾಬುದ್ಧಿ ಕುಲಂ ಭೂಪತಿ ಸೇವೆ |
ಶೀಲಂ ರೂಪಂ ಬೀರುವುದಿಲ್ಲ್ಲೈ ಫಲವನ್ನು |